ಗದ್ದಲ, ಗೊಂದಲ ಗೂಡಾದ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಾರ್ಷಿಕ ಸಭೆ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಾರ್ಷಿಕ ಸಭೆಯಲ್ಲಿ ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿದರು.

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 56ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರ ಕೂಗಾಟ, ಹಾರಾಟದಿಂದ ಗೊಂದಲದ ಗೂಡಾಗಿ ಸಭೆ ಅಂತ್ಯಗೊಳಿಸಿದ ಘಟನೆ ನಡೆಯಿತು.

         ಶನಿವಾರದಂದು ನಡೆದ ವಾರ್ಷಿಕ ಸಭೆಯಲ್ಲಿ ಇತ್ತೀಚೆಗೆ (3 ತಿಂಗಳ ಹಿಂದೆ) ಅಸ್ತಿತ್ವಕ್ಕೆ ನೂತನ ಆಡಳಿತ ಮಂಡಳಿ ಚುನಾವಣೆ ನಿಮಿತ್ಯ ವಿದ್ಯುತ್ ಪರಿವರ್ತಕ ತುರ್ತು ವಿತರಣೆ, ನೌಕರರ ಖಾಯಂ ನೇಮಕಾತಿ, ಮನೆ ಬಾಗಿಲಿಗೆ ವಿದ್ಯುತ್ ಸಮಸ್ಯೆ ಪರಿಹಾರ, ಮೊದಲಾದ ಇಲ್ಲ ಸಲ್ಲದ ಸುಳ್ಳು ಹೇಳುತ್ತಿರುವುದು ಏಕೆ ಎಂದು ಕೆಲ ಸದಸ್ಯರು ಪ್ರಶ್ನಿಸಿದರು. 4 ವರ್ಷ 7 ತಿಂಗಳು ಮೊದಲಿದ್ದ ಆಡಳಿತ ಮಂಡಳಿಯ ಸದಸ್ಯರಲ್ಲಿ ಕೆಲವರು ವಿಶ್ವಾಸ ದ್ರೋಹವೆಸಗಿ ಆಡಳಿತ ನಡೆಸುತ್ತಿರುವಿರಿ. ನಿಮ್ಮ ಆಡಳಿತ ಬಂದ ಮೇಲೆ ಹೊಸ ಬದಲಾವಣೆ ಆಗಿದೆ ಎಂದು ಗ್ರಾಹಕರ ದಾರಿ ತಪ್ಪಿಸಬೇಡಿ ಎಂದು ಆಕ್ಷೇಪಿಸಿದರು.

       ತಾಲೂಕಿನ ಎಲಿಮುನ್ನೋಳಿಯ ಭೀಮಗೌಡ ಗಿರಿಗೌಡನವರ, ಜಿನಗೌಡ ಇಮಗೌಡನವರ ಸೇರಿದಂತೆ ಹಲವಾರು ಸದಸ್ಯರು ಆಡಳಿತ ಮಂಡಳಿಯೊಂದಿಗೆ ವಾಗ್ವಾಧಕ್ಕಿಳಿದರು. ತಾಲೂಕಿನ ಹಲವಾರು ಗ್ರಾಹಕರು ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಸಭೆಯಲ್ಲಿ  ಕೆಲ ಹೊತ್ತು ವಾಗ್ವಾಧ ಜರುಗಿ ಸಭೆ ಗೊಂದಲ ಗೂಡಾಗಿ ಪರಿಣಮಿಸಿತು. ಇದರ ಜತೆಗೆ ನಿರಂತರ ಜ್ಯೋತಿಯನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳುವ ನೀವು 50/50 ಸ್ಕೀಂ ಮೂಲಕ ಈ ಯೋಜನೆ ಜಾರಿ ಮಾಡುತ್ತಿರುವುದೇಕೆ ಎಂದರು. ಸರಕಾರ ನಿರಂತರ ಯೋಜನೆಯಡಿ ತೋಟಪಟ್ಟಿಗಳಿಗೆ ಸಂಪರ್ಕ ಕಲ್ಪಿಸಲು ಅನುದಾನ ನೀಡಿದರೇ ಈಗಾಗಲೇ ಈ ಯೋಜನೆಯಡಿ ಸಂಪರ್ಕ ನೀಡುವಾಗ ಜನರಿಂದ ತುಂಬಿಸಿಕೊಂಡ ಹಣ ಮರಳಿ ಕೊಡಬೇಕೆಂದು ಆಗ್ರಹಿಸಿದರು.  

      ಪ್ರಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಅವರು ಮಾತನಾಡಿ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ ಸಂಘದ ವ್ಯಾಪ್ತಿಯಲ್ಲಿ 89003 ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ. ಇನ್ನೂಳಿದ ಗ್ರಾಹಕರು ಕೂಡ ಈ ಸೌಲಭ್ಯ ಪಡೆದುಕೊಳ್ಳಬೇಕೆಂದರು.  

        ಸಂಘವು 2024-25 ಸಾಲಿನಲ್ಲಿ ರೂ 272.96 ಕೋಟಿ ಮೊತ್ತದ ವಿದ್ಯುತ್ ಖರೀದಿಸಿ ರೂ 320.36 ಕೋಟಿ ಮಾರಾಟ ಮಾಡಲಾಗಿದೆ.ಇದರಿಂದ ರೂ 47.40 ಕೋಟಿಗಳಷ್ಟು ಉಳಿತಾಯವಾಗಿದೆ. ಸಂಘದ ವಿದ್ಯುತ್ ಪರಿವರ್ತಕ ಮತ್ತು ಸಾಮಗ್ರಿಗಳು 11.ಕೆವಿ ಲೈನ, ಕಟ್ಟಡಗಳು ಸೇರಿ ರೂ 152.03 ಕೋಟಿ ಆಸ್ತಿ ಇದ್ದು 2024-25ರಲ್ಲಿ 176.51 ಕೋಟಿಗಳಷ್ಟಾಗಿರುತ್ತದೆ. ಸದರಿ ಸಾಲಿನಲ್ಲಿ ರೂ. 24.48 ಕೋಟಿಗಳಷ್ಟು ಆಸ್ತಿಯಲ್ಲಿ ಹೆಚ್ಚಳವಾಗಿದೆ.  ಸಂಘವು ಹೆಸ್ಕಾಂ ಹುಬ್ಬಳ್ಳಿ ಇವರಿಗೆ 380.31 ಕೋಟಿ ಪಾವತಿಸಬೇಕಾಗಿದ್ದು ಅದರಲ್ಲಿ ರೂ 198.78 ಕೋಟಿ ಬಡ್ಡಿ ಆಕರಣೆ ಮಾಡಿದ್ದು ಇದನ್ನು ಮನ್ನಾ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. 

      ನಿರ್ದೇಶಕ ಶಶಿರಾಜ ಪಾಟೀಲ ಮಾತನಾಡಿ ಕ್ಷೇತ್ರದ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ವಿದ್ಯುತ್ ಸಹಕಾರಿ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘದ ಬೆಳವಣಿಗೆಗೆ ಗ್ರಾಹಕರ ಸಹಕಾರ ಅವಶ್ಯವೆಂದರು.

      ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪುರೆ ಮಾತನಾಡಿ ಗೃಹಬಳಕೆ, ವಾಣಿಜ್ಯ ಜೋಡನೆಗಳು, ಬೀದಿ ದೀಪಗಳ, ಕುಡಿಯುವ ನೀರು ವಿದ್ಯುತ್ ಜೋಡಣೆ ಸೇರಿದಂತೆ ಒಟ್ಟು 2326 ಜೋಡಣೆಗಳಿಗೆ ಹಾಗೂ 3 ಎಚ್.ಟಿ. ಜೋಡಣೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

          ವ್ಯವಸ್ಥಾಪಕ ಡಿ.ಎಸ್.ನಾಯಿಕ, ಅಕೌಂಟ್ಸ್ ಆಫೀಸರ್ ಎಸ್.ಎನ್.ಹಿರೇಮಠ, ಎಸ್.ಆರ್.ಮಲಗೌಡನವರ ಸಂಘದ ವರದಿ ವಾಚನ ಮಂಡಿಸಿದರು.

ಸಂಘದ ಅಧ್ಯಕ್ಷ ಜಯಗೌಡಾ ಪಾಟೀಲ, ಸಂಘದ ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕರಾದ ಶಶಿರಾಜ ಪಾಟೀಲ, ಕಲಗೌಡ ಪಾಟೀಲ, ಕೆಂಚಪ್ಪಾ ಬೆಣಚಿನಮರಡಿ, ಬಸಗೌಡಾ ಮಗೆಣ್ಣವರ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ. ಈರಪ್ಪಾ ಬಂಜಿರಾಮಗೋಳ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ, ಸೋಮಲಿಂಗ ಪಾಟೀಲ, ಸಹಾಯಕ ಅಭಿಯಂತರ ಉದಯ ಮಗದುಮ್ಮ. ಮಾಜಿ ಸಚಿವ ಶಶಿಕಾಂತ ನಾಯಿಕ, ಮತ್ತಿತರರಿದ್ದರು. ಸ್ಥಾನಿಕ ಅಭಿಯಂತರ ನೇಮಿನಾಥ ಖೇಮಲಾಪುರೆ ನಿರೂಪಿಸಿದರು. ವ್ಯವಸ್ಥಾಪಕ ಡಿ.ಎಸ್.ನಾಯಿಕ ವಂದಿಸಿದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept