ಗುಣಮಟ್ಟದ ಸೇವೆ ವಿದ್ಯುತ್ ಸಂಘದ ಬೆಳವಣಿಗೆಗೆ ಅಗತ್ಯ: ರಮೇಶ ಕತ್ತಿ

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ರಮೇಶ ಕತ್ತಿ ಅವರನ್ನು ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ಸತ್ಕರಿಸಿದರು. ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪೂರೆ, ಅಕೌಂಟ್ಸ್ ಆಫೀಸರ ಎಸ್.ಎನ್.ಹಿರೇಮಠ, ವ್ಯವಸ್ಥಾಪಕ ಡಿ.ಎಸ್.ನಾಯಿಕ ಇತರರಿದ್ದರು.

ಹುಕ್ಕೇರಿ : ರಾಜಕೀಯ ರಹಿತ ಆಡಳಿತ, ರೈತರಿಗೆ ಅನುಕೂಲಕರವಾದ ಪ್ರಾಮಾಣಿಕ ಸೇವೆ ನೀಡಬೇಕು. ದೇಶದಲ್ಲ್ಲಿ ಸಹಕಾರಿ ತತ್ವದಡಿ ವಿದ್ಯುತ್ ಪೂರೈಸುವ ಏಕೈಕ ಸಂಸ್ಥೆಯಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಬೆಳವಣಿಗೆಗೆ ಸಿಬ್ಬಂದಿಗಳ ಗುಣಮಟ್ಟದ ಸೇವೆ ಅವಶ್ಯ ಎಂದು ವಿದ್ಯುತ್ ಸಹಕಾರಿ ಸಂಘದ ಮಾರ್ಗದರ್ಶಕ ಮತ್ತು ಮಾಜಿ ಸಂಸದರಾದ ರಮೇಶ ಕತ್ತಿ ಹೇಳಿದರು.

ಅವರು ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರರ್ಖಾನೆ ಆವರಣದಲ್ಲಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿoದ ಸತ್ಕಾರ ಸ್ವೀಕರಿಸಿ ಮಾತನಾಡಿದರು.

3 ದಶಕಗಳಿಂದ ನಮ್ಮ ಮಾರ್ಗದರ್ಶನದಲ್ಲಿ ಆಡಳಿತ ನಿರ್ವಹಿಸುತ್ತಿದ್ದ ತಾವು ಕೇವಲ 3 ತಿಂಗಳು ಬೇರೆಯವರ ಅದರಲ್ಲೂ ಪಿ.ಎ ಗಳ ಸೌಜನ್ಯರಹಿತ ವರ್ತನೆ ಗಮನಿಸಿರುವಿರಿ. ಅವರಿಗೂ ನಮಗೂ ಇರುವ ಸೇವಾ ಮನೋಭಾವದ ವ್ಯತ್ಯಾಸ ಗಮನಿಸಿದ ಸಂಘದ ಸದಸ್ಯರು ನಮ್ಮನ್ನು ಬೆಂಬಲಿಸಿದ್ದಾರೆ. ಕಾರಣ ತಾಲೂಕಿನ ಜನರ ಮತ್ತು ಗ್ರಾಹಕರ ನಿರೀಕ್ಷೆಗೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆಯಿತ್ತರು.

ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ಸ್ಥಾನಿಕ ಅಭಿಯಂತರ ನೇಮಿನಾಥ ಖೆಮಲಾಪೂರೆ, ಅಭಿಯಂತರರಾದ ಉದಯ ಮಗದುಮ್ಮ, ಎನ್.ಎಸ್. ಸರದೇಸಾಯಿ, ಡಿ.ಎಸ್.ಘಸ್ತಿ, ವಿನೋದ ಚಂದಪ್ಪಗೋಳ, ಬಿ.ಎಂ.ಮಗದುಮ್ಮ, ವಿನಾಯಕ ರಾಮದುರ್ಗೆ, ಎನ್.ಎಂ.ಮಗದುಮ್ಮ, ಮಲ್ಲಿಕಾರ್ಜುನ ಹೆಬ್ಬಾಳೆ, ಮನೋಜ ಕರಾಡೆ, ಡಿ.ಎಸ್.ದೊಡಗನ್ನವರ, ಅಕೌಂಟ್ಸ್ ಆಫೀಸರ್ ಎಸ್.ಎನ್.ಹಿರೇಮಠ, ಪ್ರಭಾರಿ ವ್ಯವಸ್ಥಾಪಕ ಡಿ,ಎಸ್, ನಾಯಿಕ, ಬಸವರಾಜ ವಾಜಂತ್ರಿ, ಸುನೀಲ ಗಡ್ಡಿ, ಸಂದೀಪ ಕುಲಕರ್ಣಿ, ಭರತ ಮಲಗೌಡನವರ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept