ವಿದ್ಯುತ್ ಸಹಕಾರಿ ಸಂಘದ ನೌಕರನ ವಾರಸುದಾರರಿಗೆ ಮಂಜೂರಿಯಾದ ವಿಮಾ ಚೆಕ್‌ನ್ನು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ವಿತರಿಸಿದರು. ಮಹಾವೀರ ನಿಲಜಗಿ, ಸತ್ತೆಪ್ಪಾ ನಾಯಿಕ, ನೇಮಿನಾಥ ಖೇಮಲಾಪೂರೆ, ಸಂಜಯ ಇಂಚಲ ಇತರರಿದ್ದರು.
ಹುಕ್ಕೇರಿ: ವಿಮೆಯಿಂದ ಬಂದ ಹಣವನ್ನು ಠೇವಣಿ ಮಾಡಿ ಅದರಿಂದ ಬರುವ ದುಡ್ಡನ್ನು ಪಡೆದುಕೊಂಡು ಜೀವನ ನಿರ್ವಹಿಸುವಂತೆ ಡಿಸಿಸಿ ಬ್ಯಾಂಕ್ ನಿರ್ದೇಶಕರು ಮಾಜಿ ಸಂಸದರಾದ ರಮೇಶ ಕತ್ತಿ ಹೇಳಿದರು.
ಶನಿವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಅವರು ವಿದ್ಯುತ್ ಸಹಕಾರಿ ಸಂಘದ ನೌಕರ ಬೆಲ್ಲದ ಬಾಗೇವಾಡಿಯ ಸುರೇಶ ಕಳ್ಳಗೋಳ ಅಕ್ಟೋಬರ್ ಹತ್ತರಂದು ನಿಧನರಾಗಿದ್ದ ಪ್ರಯುಕ್ತ ಐಸಿಐಸಿಐ ಪ್ರೋಡೆನ್ಷಿಯಲ್ ವಿಮಾದವರಿಂದ ಮಂಜೂರಿಯಾದ ರೂ 23.76 ಲಕ್ಷಗಳ ಚೆಕ್‌ನ್ನು ಮೃತನ ಪತ್ನಿ ಸಂಗೀತಾ ಅವಳಿಗೆ ವಿತರಿಸಿ ಮಾತನಾಡಿದರು.
ವಿದ್ಯುತ್ ಸಹಕಾರಿ ಸಂಘದ ನೌಕರರಿಗೆ ಜೀವವಿಮೆ ಅಳವಡಿಸಿದ್ದು ಇಂತಹ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದರು. ವಿದ್ಯುತ್ ಸಹಕಾರಿ ಸಂಘದ ಲೈನಮನ್ ಗಳು ಸೇರಿದಂತೆ ಅಲ್ಲಿನ ನೌಕರರ ದುಡಿಮೆ ಅಪಾಯಕಾರಿ ಅದರಿಂದ ಆ ನೌಕರರ ಅವಲಂಬಿತರಿಗೆ ಭವಿಷ್ಯದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರೂ ವಿಮಾ ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು. ಇಲ್ಲಿಯವರಿಗೆ ಇಂತಹ ನಾಲ್ಕು ಪ್ರಕರಣಗಳಲ್ಲಿ ವಿಮಾ ಸೌಲಭ್ಯ ದೊರಕಿದೆ ಎಂದು ತಿಳಿಸಿದರು.
ನಂತರ ಹುಕ್ಕೇರಿ ಮತಕ್ಷೇತ್ರದಿಂದ ಆಗಮಿಸಿದ್ದ ಜನರ ಕುಂದು ಕೊರತೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯಿಂದ ಮಂಜೂರಿಯಾದ ಮದುವೆ ಸಹಾಯದನದ ಆದೇಶ ಪತ್ರಗಳನ್ನು ಫಲಾನುಭವಿಗಳಿಗೆ ನೀಡಿದರು.
ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಿಗಿ, ನಿರ್ದೇಶಕರಾದ ಸತ್ತೆಪ್ಪ್ಪಾ ನಾಯಿಕ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ, ವಿಮಾ ಕಂಪನಿ ಪ್ರಧಾನ ವ್ಯವಸ್ಥಾಪಕ ಸಂಜಯ ಇಂಚಲ, ಬೆಮುಲ್ ನಿರ್ದೇಶಕ ರಾಯಪ್ಪಾ ಡೂಗ, ಪಿಕಾರ್ಡ ಬ್ಯಾಂಕ ನಿರ್ದೇಶಕರಾದ ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಮುಖಂಡರಾದ ಸುನೀಲ ನೇರಲಿ, ಕೆಂಪಣ್ಣಾ ದೇಸಾಯಿ, ಚಿದಾನಂದ ಡಬ್ಬು, ರಾಜು ಮುನ್ನೋಳಿ, ಭರತೇಶ ನಾಯಿಕ, ಪುಟ್ಟು ಖಾಡೆ, ಚೆನ್ನಪ್ಪಾ ಗಜಬರ, ರಮೇಶ ಬೋಳಗಾಂವ, ಮಧುಕರ ಕರನಿಂಗ, ರೋಹಿತ ಹೆದ್ದೂರಶೆಟ್ಟಿ, ರಾಜು ಪಾಟೀಲ, ವಿರೂಪಾಕ್ಷ ಚೌಗಲಾ, ಮಹೇಶ ಬಡಗಾಂವಿ, ವಿನಾಯಕ ಸಂಕೇಶ್ವರಿ, ಆನಂದ ಲಕ್ಕುಂಡಿ, ಕಲ್ಲಣ್ಣಾ ಚೌಗಲಾ, ಅಧಿಕಾರಿಗಳಾದ ಶಶಿಕಾಂತ ವಂದಾಳೆ, ಶಶಿ ಭೂಸಗೋಳ ಮತ್ತಿತರರಿದ್ದರು.





