ಕಬ್ಬು ತರಿಕೆಗೆ ತೋಡ್ನಿ ಗ್ಯಾಂಗ್ ಹೆಚ್ಚಿಸಿ, ಗುಣಮಟ್ಟದ ಕಬ್ಬು ಪೂರೈಕೆ ಮಾಡಲು ರೈತರಿಗೆ ಕರೆ: ಪೃಥ್ವಿ ಕತ್ತಿ

ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸ ಇಂಡಸ್ಟ್ರೀಜ್ನ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಪ್ರಾರಂಭೋತ್ಸವ ಪೂಜಾ ಸಮಾರಂಭ. ಪೃಥ್ವಿ ಕತ್ತಿ, ಮಲ್ಲಿಕಾರ್ಜುನ ಪೂಜಾರಿ, ಎಸ್.ಬಿ.ಪಾಟೀಲ, ಶೇಷಗಿರಿ ಕುಲಕರ್ಣಿ ಇತರರಿದ್ದರು

ಹುಕ್ಕೇರಿ: ರೈತರು ಬೆಳೆದ ಕಬ್ಬನ್ನು ನಿಗದಿತ ಅವಧಿಯೊಳಗೆ ತರಲು ತೋಡ್ನಿ ಗ್ಯಾಂಗ್ ಹೆಚ್ಚಿಸಲಾಗಿದ್ದು, ಗುಣಮಟ್ಟದ ಕಬ್ಬನ್ನು ವಿಶ್ವರಾಜ ಶುಗರ್ಸ ಇಂಡಸ್ಟ್ರೀಜ್ಗೆ ಕಳುಹಿಸಿ ಸಹಕರಿಸುವಂತೆ ವಿಶ್ವರಾಜ ಶುಗರ‍್ಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೃಥ್ವಿ ಕತ್ತಿ ಹೇಳಿದರು.

ಅವರು ಶುಕ್ರವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ ಶುಗರ‍್ಸ ಇಂಡಸ್ಟ್ರೀಜ್ನ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಪ್ರಾರಂಭೋತ್ಸವ ಪೂಜಾ ಸಮಾರಂಭ ನೆರವೇರಿಸಿ ಮಾತನಾಡಿದರು. ಈ ವರ್ಷ ಮಳೆ ಚೆನ್ನಾಗಿ ಆಗಿದ್ದ ಕಾರಣ ಕಬ್ಬಿನ ಬೆಳೆ ಹೆಚ್ಚಾಗಿದೆ. ಅದರಿಂದ ರೈತರು ಆದಷ್ಟು ಬೇಗ ಕಬ್ಬು ಕಳುಹಿಸಬೇಕೆಂಬ ಮನೋಭಾವ ಬಿಟ್ಟು ಕಬ್ಬಿನ ಅವಧಿ ಪ್ರಕಾರ ಕಳುಹಿಸಲು ಪ್ರಾರಂಭಿಸಿದರೆ ಮಾತ್ರ ಗುಣಮಟ್ಟದ ಸಕ್ಕರೆ ಉತ್ಪಾದನೆ ಸಾಧ್ಯ. ಇದರಿಂದ ರೈತರಿಗೂ ಯೋಗ್ಯ ದರ ನೀಡಲು ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯ ಇತರ ಕಾರಖಾನೆಗಳು ನೀಡುವ ಬೆಲೆಯನ್ನು ಹಾಗೂ ಸರಕಾರ ನಿಗದಿ ಪಡಿಸಿದ ಎಫ್.ಆರ್.ಪಿ ದರದಂತೆ ನಮ್ಮ ಕಾರಖಾನೆ ಕಬ್ಬಿಗೆ ಬೆಲೆ ನೀಡುವುದಾಗಿ ತಿಳಿಸಿದರು. ಪ್ರತಿ ವರ್ಷದಂತೆ ರೈತರು ಕಾರಖಾನೆಗೆ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಕಳುಹಿಸುವಂತೆ ವಿನಂತಿಸಿದರು. ಪ್ರಾರಂಭದಲ್ಲಿ ಹಂಗಾಮಿನ ಯಶಸ್ಸಿಗಾಗಿ ವಿಶೇಷ ಹೋಮ-ಹವನ ಮತ್ತು ಪೂಜೆಯನ್ನು ಕತ್ತಿ ಕುಟುಂಬದವರು ನೆರವೇರಿಸಿದರು.

ಕಾರಖಾನೆಯ ಪೂರ್ಣಾವಧಿ ನಿರ್ದೇಶಕ ಮಲ್ಲಿಕಾರ್ಜುನ ಪೂಜಾರಿ, ಅಧಿಕಾರಿಗಳಾದ ಎಸ್.ಬಿ.ಪಾಟೀಲ, ಶೇಷಗಿರಿ ಕುಲಕರ್ಣಿ, ಸಿ.ಎಸ್.ಹಿರೇಮಠ, ಬಿ.ಎ.ಪಾಟೀಲ, ಪಿ.ಎಸ್.ಶೆಟ್ಟಿ, ಎಂ.ಬಿ.ಕುಂಬಾರ, ಸಿದ್ದು ಬಾನಿ, ಬೆಮುಲ್ ನಿರ್ದೇಶಕ ರಾಯಪ್ಪಾ ಡೂಗ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ ಮುನ್ನೋಳಿ, ನಿರ್ದೇಶಕರಾದ ಗಜಾನನ ಕ್ವಳ್ಳಿ, ಶಿವಾನಂದ ಮುಡಸಿ, ಪಿಕಾರ್ಡ ಬ್ಯಾಂಕ್ ನಿರ್ದೇಶಕರಾದ ಶೀತಲ ಬ್ಯಾಳಿ, ಗುರುರಾಜ ಕುಲಕರ್ಣಿ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಪಾಟೀಲ, ಕಲ್ಲಣ್ಣಾ ಚೌಗಲಾ, ರೈತ ಮುಖಂಡರಾದ ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ಗುರುಸಿದ್ದ ಮೂಡಲಗಿ, ಗೌಸಲಾಜಮ್ ನಾಯಿಕವಾಡಿ, ಸತ್ತೆಪ್ಪಾ ಚಂದರಗಿ, ಸಂಜಯ ದೇಸಾಯಿ, ಸುರೇಶ ತೇರಣಿ, ಲಕ್ಷ್ಮಣ ಯಮಕನಮರ್ಡಿ, ಆನಂದ ಲಕ್ಕುಂಡಿ, ಬಸವರಾಜ ನಾಗನ್ನವರ, ಈರಣ್ಣಾ ಹೂಗಾರ, ರುದ್ರಪ್ಪಾ ಮರಬಸ್ಸನವರ, ಶಿವನಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept