ಹುಕ್ಕೇರಿ ತಾಲೂಕಿನ ಜನರ ಪ್ರೀತಿ ವಿಶ್ವಾಸವೇ ನಮ್ಮ ಗೆಲುವಿಗೆ ಸಹಕಾರಿ: ಪ್ರಥ್ವಿ ಕತ್ತಿ

ತಾಲೂಕಿನ ಶಿರಹಟ್ಟಿ ಕೆ.ಡಿ ಮತ್ತು ಶಿರಹಟ್ಟಿ ಬಿ.ಕೆ ಅಳವಡಿಸಿದ 63 ಕೆ.ವ್ಹಿ ನೂತನ ಟಿ.ಸಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೃಥ್ವಿ ಕತ್ತಿ ಅವರನ್ನು ಸನ್ಮಾನಿಸಿದರು. ಡಿ.ಕೆ.ಅವರಗೋಳ, ಅನಂದ ದಪ್ಪಾಧೂಳಿ, ಅನ್ನಪ್ಪಾ ಬ್ಯಾಳಿ, ರಾಮಣ್ಣಾ ಗೋಟೂರೆ, ಸಂಜು ಹತ್ತರವಾಟ ಇತರರಿದ್ದರು.

ಹುಕ್ಕೇರಿ: ತಾಲೂಕಿನ ಜನರ ಪ್ರೀತಿ, ವಿಶ್ವಾಸದಿಂದ ಕಳೆದ ೪ ದಶಕಗಳಿಂದ ನಮ್ಮ ಕುಟುಂಬ ಹುಕ್ಕೇರಿ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿದೆ. ಕ್ಷೇತ್ರದ ಜನರ ಮನೆ ಮಕ್ಕಳಾಗಿ ನಾವು ದುಡಿಯುತ್ತಿದ್ದೇವೆ. ನಮ್ಮ ಅವರ ವಿಶ್ವಾಸ ಕೌಟುಂಬಿಕದ್ದಾಗಿದೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.

   ಶುಕ್ರವಾರದಂದು ತಾಲೂಕಿನ ಶಿರಹಟ್ಟಿ ಕೆ.ಡಿ ಯ ಬೆಲ್ಲದ ತೋಟ ಮತ್ತು ಶಿರಹಟ್ಟಿ ಬಿ.ಕೆಯ ಹೊಸಮನಿ ತೋಟದಲ್ಲಿ ಹೆಚ್ಚುವರಿಯಾಗಿ ಅಳವಡಿಸಿದ 63 KV ನೂತನ ಎರಡು ಟಿ.ಸಿ ಉದ್ಘಾಟಿಸಿ ಮಾತನಾಡಿದರು. ಮುಂಬರುವ ತಿಂಗಳಲ್ಲಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ ಚುನಾವಣೆ ನಡೆಯಲಿದ್ದು, ಎಂದಿನಂತೆ ನಮ್ಮ ಪೆನಲ್‌ನ್ನು ಸಂಘದ ಸದಸ್ಯರು ಬೆಂಬಲಿಸುತ್ತಾರೆಂದರು. ಚುನಾವಣೆ ಇದ್ದ ಮೇಲೆ ಆರೋಪ ಪ್ರತ್ಯಾರೋಪ ಇರುವುದು ಸ್ವಾಭಾವಿಕ. ಆದರೆ ಕ್ಷೇತ್ರದ ಜನರ ಸ್ವಭಾವ ನಮಗೆ ಗೊತ್ತಿದೆ. ನಮ್ಮ ಸ್ವಭಾವ ಅವರಿಗೆ ಗೊತ್ತಿದೆ. ಅದರಿಂದ ನಮ್ಮ ಗೆಲುವು ನಿಶ್ಚಿತವೆಂದರು.

   ಸದಸ್ಯರು ಮತ್ತು ಗ್ರಾಹಕರಿಗೆ ಯಾವ ಹೊರೆಯಾಗದಂತೆ ಸಂಘ ಉಳಿಸಿ ಬೆಳೆಸಿದ್ದೇವೆ. ಆದಾಗ್ಯೂ 30 ವರ್ಷದಿಂದ ಅವಿರೋಧ ಆಯ್ಕೆಯಾಗುತ್ತಾ ಬಂದಿದ್ದ ಸಂಘಕ್ಕೆ ಈ ಬಾರಿ ಚುನಾವಣೆ ನಡೆಯುವುದು ನಿಶ್ಚಿತವೆಂದರು. ನಮ್ಮ ತಂದೆ ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಜನಪರ ಆಡಳಿತವೇ ನಮಗೆ ಶ್ರೀರಕ್ಷೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪೃಥ್ವಿ ಕತ್ತಿ ಅವರನ್ನು ರೈತರು ಸನ್ಮಾನಿಸಿದರು.

     ವಕೀಲ ಡಿ.ಕೆ.ಅವರಗೋಳ, ಆನಂದ ದಪ್ಪಾಧೂಳಿ, ಅನ್ನಪ್ಪಾ ಬ್ಯಾಳಿ, ರಾಮಣ್ಣಾ ಗೋಟೂರೆ, ಸಂಜು ಹತ್ತರವಾಟ, ಶೀತಲ ಬ್ಯಾಳಿ, ಶ್ರೀಶೈಲ ಶಿರಗಾಂವಿ, ಯಲ್ಲಪ್ಪಾ ಢಪರಿ, ವಿಠ್ಠಲ ಹೊಸಮನಿ, ಸೈಯದ್ ಅಮ್ಮಣಗಿ, ಶಿವಾನಂದ ಢಂಗ, ಮಲಗೌಡ ಪಾಟೀಲ, ಜಯಪಾಲ ಹುಲ್ಯಾಗೋಳ, ಗುಲಾಬ ಅಮ್ಮಣಗಿ. ಶಂಕರ ಗುಡಸಿ, ಮಂಜುನಾಥ ಪಡದಾರ ಮತ್ತಿತರರಿದ್ದರು.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept