ರಮೇಶ ಕತ್ತಿ ಅವರ ಭಾವಚಿತ್ರ.
ಹುಕ್ಕೇರಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ ಅವರು ಅವಿರೋಧವಾಗಿ ಆಯ್ಕೆ ಆಗಿರುವುದು ಪಕ್ಷದ ಸಂಘಟನೆಯಲ್ಲಿ ಯುವ ಜನಾಂಗಕ್ಕೆ ಹೆಚ್ಚಿನ ಉತ್ಸಾಹ ತಂದಿದೆ ಎಂದು ಮಾಜಿ ಸಂಸದರು, ಡಿಸಿಸಿ ಬ್ಯಾಂಕ ನಿರ್ದೇಶಕರಾದ ರಮೇಶ ಕತ್ತಿ ಹೇಳಿದರು.
ಮಂಗಳವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಗತ್ತಿನಲ್ಲಿ ಯುವ ಜನಾಂಗದ ಪ್ರಮಾಣ ಹೆಚ್ಚಾಗಿರುವ ದೇಶ ನಮ್ಮದಾಗಿದೆ. ಮುಂಬರುವ ದಿನಗಳಲ್ಲಿ ಯುವ ಜನಾಂಗ ರಾಷ್ಟ್ರೀಯ ಅಭಿವೃದ್ಧಿ, ಏಕತೆ, ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಮುಖ ಅಂಶ ಆಗಿದೆ. ಭಾರತೀಯ ಜನತಾ ಪಕ್ಷದ ಹಿರಿಯರು ಪ್ರಮುಖರು ಕೈಕೊಂಡ ನಿರ್ಣಯ ಸ್ವಾಗತಾರ್ಹ ಆಗಿದೆ ಎಂದರು.
ಈಗಾಗಲೇ ಜಗತ್ತಿನಲ್ಲಿ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿದ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆ ಭಾರತೀಯ ಜನತಾ ಪಕ್ಷಕ್ಕೆ ಸಂದಿದೆ. ಇದರ ಜೊತೆಗೆ ಯುವ ಜನಾಂಗಕ್ಕೆ ಆದ್ಯತೆ ನೀಡಿದ ಶ್ರೇಯಸ್ಸು ಈ ಪಕ್ಷಕ್ಕೆ ಸಲ್ಲುತ್ತದೆ. ಮುಂಬರುವ ದಿನಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ನೂತನ ಅಧ್ಯಕ್ಷರು ಪಕ್ಷದ ಸಂಘಟನೆಯನ್ನು ಸಮರ್ಥವಾಗಿ ಮಾಡುವುದು ನಿಶ್ಚಿತ.
ಈ ಮೂಲಕ ದೇಶದ ಆಡಳಿತ ಚುಕ್ಕಾಣಿ ಬರುವ ದಿನಗಳಲ್ಲಿ ಯುವಕರ ಆಶೋತ್ತರಕ್ಕೆ ಬೆಳಕಾಗಲಿದೆ. ಕಾರಣ ಯುವ ಜನಾಂಗ ಹೆಚ್ಚಿನ ಪ್ರಮಾಣದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಕರೆ ನೀಡಿದರು.





