ಹುಕ್ಕೇರಿ : ಹುಕ್ಕೇರಿಯ 110/33/11KV ವಿದ್ಯುತ್ ಉಪಕೇಂದ್ರದ ವಿತರಣಾ ಕೇಂದ್ರ ನಿರ್ವಹಣಾ ಕಾರ್ಯವನ್ನು ರವಿವಾರ ದಿ.24-8-2025ರಂದು ಕೈಗೊಳ್ಳಲು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಕಾರಣ ಆ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ನಿಲುಗಡೆ ಮಾಡಲಿದ್ದಾರೆ.
ಉಪಕೇಂದ್ರದ ಮೇಲೆ ಬರುವ ಹುಕ್ಕೇರಿ ಪಟ್ಟಣ, ಬೆಳವಿ, ಶೇಲಾಪೂರ, ಹಣಜ್ಯಾನಟ್ಟಿ, ಯಾದಗೂಡ, ಕಮತ್ಯಾನಟ್ಟಿ, ನೇರ್ಲಿ, ಎಲಿಮುನ್ನೋಳಿ, ಬಸ್ತವಾಡ, ಗೌಡವಾಡ, ಬೆಣಿವಾಡ, ಮದಮಕ್ಕನಾಳ, ಮದಿಹಳ್ಳಿ, ಬಡಕುಂದ್ರಿ, ಯರಗಟ್ಟಿ, ಯರನಾಳ, ರಕ್ಷಿ, ಹುಲ್ಲೋಳಿ ಹಟ್ಟಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ ಅವರು ಕೋರಿದ್ದಾರೆ.
ಹುಕ್ಕೇರಿ 110/33/11KV ಉಪಕೇಂದ್ರದಲ್ಲಿ ನಿರ್ವಹಣಾ ಕೆಲಸ – ಆಗಸ್ಟ್ 24, 2025 ರಂದು ವಿದ್ಯುತ್ ವ್ಯತ್ಯಯ

Join Our WhatsApp Channel
Join Now



