ಹುಕ್ಕೇರಿ ವಕೀಲರ ಸಂಘದ ಭವನದಲ್ಲಿ ಸೈಬರ್ ವಂಚನೆ ತಡೆ ಜನ ಜಾಗ್ರತಿ ಕಾರ್ಯಕ್ರಮ

ಸ್ಥಳೀಯ ಕೋರ್ಟ ಆವರಣದ ಇ-ಲೈಬ್ರರಿಯಲ್ಲಿ ವಕೀಲರಿಗೆ ಮತ್ತು ಜನರಿಗೆ ಸೈಬರ್ ವಂಚನೆಯ ಅರಿವು ನೆರವು ಕಾರ್ಯಕ್ರಮದಲ್ಲಿ ಸೈಬರ್ ತಡೆ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಮಾಜಿ ಅಧ್ಯಕ್ಷ ಅನೀಸ್ ವಂಟಮೂರಿ, ಪ್ರಕಾಶ ಪಾಟೀಲ, ವಿಠ್ಠಲ ಗಸ್ತಿ ಇತರರಿದ್ದರು.

ಹುಕ್ಕೇರಿ :  ಇಲ್ಲಿನ ನ್ಯಾಯಾಲಯದ ವಕೀಲರ ಸಭಾವನದಲ್ಲಿ ಸೈಬರ್ ವಂಚನೆ ಮತ್ತು ಸುರಕ್ಷತೆಯ ಅರಿವು ಕಾರ್ಯಾಗಾರ ನಡೆಯಿತು.

     ಪುಣೆಯ ಕ್ವಿಕ್ ಹೀಲ್ ಫೌಂಡೇಶನ್ ಹಾಗೂ ನಿಡಸೋಸಿಯ ಎಸ್‌ಜೆಪಿಎನ್ ಬಿಸಿಎ ಮಹಾವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ, ತ್ರಿವೇಣಿ ಪಾಟೀಲ, ಭಾಗ್ಯಶ್ರೀ ಕುರುಬರ ಮಾತನಾಡಿ ಆನ್‌ಲೈನ್ ಆಟಗಳು, ವೈರಸ್ ಹಾವಳಿ, ಹಣಕಾಸು ವಂಚನೆ ಮತ್ತು ಉದ್ಯೊಗ ವಂಚನೆ, ಅಪರಿಚಿತ ಕರೆಗಳಿಗೆ ಒಟಿಪಿ, ಸುಳ್ಳು ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಯಲ್ಲಿ  ಅನಕ್ಷರಸ್ಥರು ಮಾತ್ರವಲ್ಲ ಅಕ್ಷರಸ್ಥರೂ ಸೈಬರ್ ವಂಚನೆಗೆ ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ. ಸೈಬರ್ ವಂಚಕರಿಂದ ಜಾಗೃತರಾಗಿರಬೇಕು  ಎಂದು ನ್ಯಾಯವಾದಿಗಳಿಗೆ ಹಾಗೂ ಜನರಿಗೆ ಸಲಹೆ ನೀಡಿ ಅರಿವು ಮೂಡಿಸಿದರು.   

     ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಕುರುಬೇಟ, ವಕೀಲರ ಸಂಘದ ಮಾಜಿ ಅಧ್ಯಕ್ಷ, ಅನೀಸ ವಂಟಮೂರಿ, ವಕೀಲರಾದ ಪ್ರಕಾಶ. ಪಾಟೀಲ, ವಿಠ್ಠಲ ಗಸ್ತಿ, ಎಮ್.ಎಮ್ ಪಾಟೀಲ, ಮಂಜುನಾಥ ಗಸ್ತಿ, ಪ್ರಾಂಶುಪಾಲ ಬಸವರಾಜ ಹಾಲಭಾವಿ ಶಿಕ್ಷಕರಾದ ಪವನ್ ಹಿರೇಮಠ,   ಆನಂದ ಸೋನಾರ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept