ಆತ್ಮೀಯರು, ನಮ್ಮ ಕರುನಾಡಿನ ನಂ.1 ದಿನಪತ್ರಿಕೆ ವಿಜಯವಾಣಿ ಪತ್ರಿಕೆ ವ್ಯವಸ್ಥಾಪಕರು ಆಗಿರುವ ಸನ್ಮಾನ್ಯ ಶ್ರೀ ವಿಜಯ ಸಂಕೇಶ್ವರ ಅವರಿಗೆ ಜನ್ಮದಿನದ ಸಂಭ್ರಮ.
ಅವರು ಐದು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಪತ್ರಿಕೆಯ ಕಾರ್ಯಾಲಯಕ್ಕೆ ಆಗಮಿಸಿದ್ದರು.
ಆ ದಿನ ಕಾರ್ಯಾಲಯದಲ್ಲಿ ಸಹಕಾರಿ ನಾಯಕ, ಮಾಜಿ ಸಂಸದ ರಮೇಶ ಕತ್ತಿ ಅವರ ಜನ್ಮದಿನದ ಪುರವಣಿ ನಿಮಿತ್ಯ ನಾನು ಪುರವಣಿ ಸಿದ್ದಪಡಿಸುತ್ತಿದ್ದೆ. ಅವರು ನನ್ನ ಹಿಂದೆ ನಿಂತು ಗಮನಿಸುತ್ತಿದ್ದರು. ನಂತರ ನನ್ನೊಂದಿಗೆ ಮಾತನಾಡುತ್ತಾ ನೀನು ಪುರವಣಿ ಮಾಡಿಸುತ್ತಿರುವುದು ನನ್ನ ಅಳಿಯ ರಮೇಶ ಕತ್ತಿ ಅವರದು ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ತೆಗೆಸಿಕೊಂಡ ಪೋಟೋ ಇದಾಗಿದೆ.
ಅವರದು ಮೇರು ವ್ಯಕ್ತಿತ್ವ, ದುಡಿಮೆಯಲ್ಲಿ ಪ್ರಾಮಾಣಿಕತೆ, ಶ್ರದ್ದೆ ಇರಬೇಕು ಎಂದು ನನಗೆ ಹೇಳಿದ ಅವರು ನೀಡಿದ ಕೆಲವು ಸಲಹೆ ಸೂಚನೆಗಳು ಎಂದಿಗೂ ನೆನಪಿಡುವಂತದ್ದು. ಅವರ ಬದುಕು ನೂರ್ಕಾಲು ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಆಶಿಸುತ್ತೇನೆ.
ವಿಜಯವಾಣಿ ಸಂಸ್ಥಾಪಕ ಶ್ರೀ ವಿಜಯ ಸಂಕೇಶ್ವರರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು

Join Our WhatsApp Channel
Join Now

