ಹುಕ್ಕೇರಿಯಲ್ಲಿ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಮುಹೂರ್ತ ಫಿಕ್ಸ್: ಶ್ರೀ ಶಿವಬಸವ ಮಹಾಸ್ವಾಮಿಗಳ ಹರ್ಷ

ಸ್ಥಳೀಯ ಕೋರ್ಟ ವೃತ್ತದ ಬಳಿ ಬಸವೇಶ್ವರರ ಮೂರ್ತಿಯ ಪುತ್ಥಳಿಯ ಪ್ರತಿಷ್ಠಾಪನೆಗೆ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಭೂಮಿ ಪೂಜೆ ನೆರವೇರಿಸಿದರು. ಅಪ್ಪುಸ್ ತುಬಚಿ, ಸಹಾಸ ನೂಲಿ, ಗವೀಶ ರವದಿ, ಶಂಕರ ಪಟ್ಟಣಶೆಟ್ಟಿ ಇತರರಿದ್ದರು.

ಹುಕ್ಕೇರಿ: ಸರ್ವ ಧರ್ಮೀಯರ ಬಹು ದಿನಗಳ ಕನಸಾಗಿದ್ದ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪನೆಗೆ ಇದೀಗ ಮುಹೂರ್ತ ಕೂಡಿ ಬಂದಿದೆ ಎಂದು ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಹೇಳಿದರು.

ಸೋಮವಾರದಂದು ಸ್ಥಳೀಯ ಬಸವ (ಕೋರ್ಟ) ವೃತ್ತದಲ್ಲಿ ಬಸವೇಶ್ವರರ ಪುತ್ಥಳಿ ಪ್ರತಿಷ್ಠಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಒಡೆತನದ ವಿಶ್ವರಾಜ ಟೃಸ್ಟ್ನಿಂದ ಈಗಾಗಲೇ ಬಸವೇಶ್ವರ ಮೂರ್ತಿ ತಯಾರಿಸಲಾಗಿದೆ. ಆದರೆ ಅದನ್ನು ಪ್ರತಿಷ್ಠಾಪಿಸಲು ವಿಳಂಬ ಆಗಿತ್ತು. ಇದೀಗ ಪಟ್ಟಣದ ಯುವಕರು ಮತ್ತು ಸುತ್ತಮುತ್ತಲಿನ ಭಕ್ತರು ಪ್ರತಿಷ್ಠಾಪನೆಗಾಗಿ ಶ್ರಮಿಸುತ್ತಿದ್ದಾರೆ. ಅವರ ಪ್ರಯತ್ನದ ಫಲವೇ ಇಂದಿನ ಕಾರ್ಯಕ್ರಮವೆಂದರು.

ಪಟ್ಟಣದ ಪ್ರಮುಖ ಸ್ಥಳದಲ್ಲಿ ಇದನ್ನು ಪ್ರತಿಷ್ಠಾಪಿಸಲು ಮುಂದಾಗಿದ್ದು ಬೇರೆ ನಗರಗಳಿಂದ ಸಂಚರಿಸುವ ಪ್ರಯಾಣಿಕರ ಗಮನ ಸೆಳೆಯುವಂತೆ ಮೂರ್ತಿ ಪ್ರತಿಷ್ಠಾಪಿಸಲು ಇಚ್ಚಿಸಿರುವುದಾಗಿ ತಿಳಿಸಿದರು. ಬಸವೇಶ್ವರರ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ತನು ಮನ ಧನದ ಸಹಾಯ ಸಹಕಾರ ನೀಡಬೇಕೆಂದು ಮನವಿಸಿದರು.

ಯುವ ಮುಖಂಡರಾದ ಅಪ್ಪುಸ್ ತುಬಚಿ, ಸುಹಾಸ ನೂಲಿ, ಗವೀಶ ರವದಿ, ಶಂಕರ ಪಟ್ಟಣಶೆಟ್ಟಿ, ಮುತ್ತು ದೇವರನಾವದಗಿ, ಚಿದಾನಂದ ಪಾಟೀಲ, ಜ್ಯೋತಿಭಾ ದುಪ್ಪಟ್ಟಿ, ವಿಶ್ವನಾಥ ಗಂಧ, ಸುಭಾಸ ಝೊಂಡ, ಆನಂದ ಜಿರಲಿ, ಸುಭಾಸ ಹಾವನ್ನವರ, ಚಿದಾನಂದ ಬಸ್ತವಾಡೆ, ಮಹಾನಿಂಗ ಹಿರೇಮಠ, ಬಸವರಾಜ ಹೊನ್ನಿಮನಿ, ಅಜ್ಜಪ್ಪಾ ಚೌಗಲಾ, ರವಿ ಸುಟಗನ್ನವರ, ದುಂಡನಗೌಡ ಪಾಟೀಲ, ವಕೀಲರಾದ ಡಿ.ಕೆ.ಅವರಗೋಳ, ಕೆ.ಎಲ್.ಜಿನರಾಳಿ, ರಾಜೀವ ಚೌಗಲಾ ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept