ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳುವ ಗುತ್ತಿಗೆದಾರರ ವಿರುದ್ಧ ಕ್ರಮ: ಜಿಲ್ಲಾ ಪಾಲಕ ಸಚಿವ ಸತೀಶ ಜಾರಕಿಹೊಳಿ

ಸ್ಥಳೀಯ ತಾ.ಪಂ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಪಂ ಇ.ಒ ಟಿ.ಆರ್.ಮಲ್ಲಾಡದ ಮಾತನಾಡುತ್ತಿರುವುದು. ಸಚಿವ ಸತೀಶ ಜಾರಕಿಹೊಳಿ, ತಹಸೀಲ್ದಾರ ಬಲರಾಮ ಕಟ್ಟಿಮನಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ಯಾನೂರ ತಹಸೀಲ್ದಾರ ಇತರರಿದ್ದರು.

ಹುಕ್ಕೇರಿ: ಗುತ್ತಿಗೆದಾರರು ಅವೈಜ್ಞಾನಿಕ ಮತ್ತು ಬೇಜವಾಬ್ದಾರಿ ಕಾಮಗಾರಿಗಳಿಂದ ಗ್ರಾಮಗಳಲ್ಲಿ ಜನ ಸಂಚಾರಕ್ಕೆ ಸಮಸ್ಯೆಯಾಗುತ್ತದೆ ಎಂದು ದೂರು ಕೇಳಿ ಬರುತ್ತಿದೆ. ಅದಕ್ಕಾಗಿ ಶೀಘ್ರದಲ್ಲಿ ಗುತ್ತಿಗೆದಾರರ ಸಭೆ ಕರೆದು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

         ಮಂಗಳವಾರದಂದು ತಾಲೂಕ ಪಂಚಾಯತ ಸಭಾ ಭವನದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು. ಜೆ.ಜೆ.ಎಂ ಕಾಮಗಾರಿ ಗುತ್ತಿಗೆದಾರರು ರಸ್ತೆ ಪಕ್ಕದಲ್ಲೇ ತಗ್ಗು ಗುಂಡಿ ತೆಗೆದು ಹಾಗೆ ಬಿಟ್ಟಿದ್ದಾರೆ ಇದರಿಂದ  ಒಂದು ಮಗು ಸಾವನ್ನಪ್ಪಿದೆ ವರದಿಯಾಗಿದೆ. ಗುತ್ತಿಗೆದಾರರು ತಕ್ಷಣ ಇಂತಹ ಅವೈಜ್ಞಾನಿಕ ಕಾಮಗಾರಿಗಳ ಸರಿಪಡಿಸಬೇಕು. ಇಲ್ಲವಾದಲ್ಲಿ ಅಂತಹವರ ವಿರುದ್ಧ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಜನ ಸಾಮಾನ್ಯರ ಉತ್ತಮ ಆರೋಗ್ಯಕ್ಕಾಗಿ ರೈತರು ರಾಸಾಯನಿಕ ರಸಗೊಬ್ಬರ ಬಳಕೆಗಿಂತ ಸಾವಯವ ಕೃಷಿ ಕೈಗೊಳ್ಳಬೇಕು. ಕೃಷಿ ಅಧಿಕಾರಿಗಳು ಸಾವಯವ ಕೃಷಿಗೆ ಪ್ರೋತ್ಸಾಹಿಸಬೇಕು ಎಂದರು.

     ತಹಸೀಲ್ದಾರ ಬಲರಾಮ ಕಟ್ಟಿಮನಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾನೂಲ ತಹಸಿಲ್ದಾರ, ನಾಮ ನಿರ್ದೆಶನ ಸದಸ್ಯ ಬಸವರಾಜ ಕೋಳಿ, ಲಕ್ಷ್ಮಣ ಹೂಲಿ ಹಾಗೂ   ವಿವಿಧ ಇಲಾಖೆ ಅಧಿಕಾರಿಗಳು ಮತ್ತಿತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept