ಹುಕ್ಕೇರಿ ಕ್ಷೇತ್ರದ 50 ಸರ್ಕಾರಿ ಶಾಲೆಗಳಿಗೆ ಉಚಿತ ಎ.ಐ ಸ್ಮಾರ್ಟ್ ಬೋರ್ಡ್ ವಿತರಣೆ: ರಮೇಶ ಕತ್ತಿ ಶ್ಲಾಘನೆ

ಪಟ್ಟಣದ ವಿಶ್ವರಾಜ ಭವನದಲ್ಲಿ ನಡೆದ ತಾಲೂಕಿನ ಸರಕಾರಿ ಶಾಲೆಗಳಿಗೆ ಎ.ಐ ತಂತ್ರಜ್ಞಾನ ಸ್ಮಾರ್ಟ ಬೋರ್ಡ ವಿತರಣಾ ಸಮಾರಂಭವನ್ನು ರಮೇಶ ಕತ್ತಿ ಉದ್ಘಾಟಿಸಿದರು.ನಿಡಸೋಶಿ ಶ್ರೀಗಳು, ಉದ್ಯಮಿಗಳಾದ ಮಹೇಶ ಬೆಲ್ಲದ, ಶಿವಾನಂದ ಮಹಾಶೆಟ್ಟಿ, ಮಹಾವೀರ ನಿಲಜಗಿ ಇತರರಿದ್ದರು.

ಹುಕ್ಕೇರಿ : ಸರಕಾರಿ ಶಾಲೆಯಲ್ಲಿ ಕಲಿತ ಉದ್ಯಮಿಗಳಾದ ಮಹೇಶ ಬೆಲ್ಲದ ಮತ್ತು ಶಿವಾನಂದ ಮಹಾಶೆಟ್ಟಿ ಅವರು ಅದರ ಸ್ಮರಣೆಗಾಗಿ ಕೋಟ್ಯಾಂತರ ರೂ ವೆಚ್ಚದ ಇಂರ‍್ಯಾಕ್ಟಿವ್ ಎ.ಐ ಸ್ಮಾರ್ಟ ಬೋರ್ಡಗಳನ್ನು ಹುಕ್ಕೇರಿ ಮತಕ್ಷೇತ್ರದ ೫೦ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತವಾಗಿ ವಿತರಿಸಿದ್ದು ನಿಜಕ್ಕೂ ಪ್ರಶಂಸನೀಯ ಕಾರ್ಯವೆಂದು ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ಶುಕ್ರವಾರದಂದು ಪಟ್ಟಣದ ವಿಶ್ವರಾಜ ಭವನದಲ್ಲಿ ಆನಲೈನ್ ಇನ್‌ಸ್ಟುçಮೆಂಟ್ಸ್ (ಇಂಡಿಯಾ) ಲಿಮಿಟೆಡ್ ಮತ್ತು ಶ್ರೀ ಬಿ.ಜೆ ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹುಕ್ಕೇರಿ ತಾಲೂಕಿನ 50 ಎ.ಐ ತಂತ್ರಜ್ಞಾನ ಸ್ಮಾರ್ಟ ಬೋರ್ಡ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇದರ ಜತೆಗೆ ಶಾಲೆಗಳಿಗೆ ಕುಡಿಯುವ ನೀರಿನ ಶುದ್ದೀಕರಣ ಘಟಕಗಳು, ಶಾಲಾ ಕೊಠಡಿಗಳ ನವೀಕರಣ, ಪೀಠೋಪಕರಣ ಮತ್ತು ಆಟೋಪಕರಣಗಳ ದೇಣಿಗೆಯಾಗಿ ನೀಡುತ್ತಿದ್ದಾರೆಂದರು. ನಮ್ಮವರಿಂದ ನಮ್ಮವರಿಗಾಗಿ ಆಯೋಜಿಸಿದ ಸಮಾರಂಭವೆ0ದರೆ ಅತಿಶಯೋಕ್ತಿಯಲ್ಲವೆಂದರು.

ಹಿರಣ್ಯಕೇಶಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತ ಶಿವಾನಂದ ಮಹಾಶೆಟ್ಟಿ ಅವರು ಆ ಶಾಲೆಯನ್ನು ದತ್ತು ಪಡೆದು ಒಂದು ಕೋಟಿ ರೂ ವೆಚ್ಚ ಮಾಡಿದ್ದು ಸ್ಮರಣೀಯ. ವಿದ್ಯಾರ್ಥಿಗಳಿಗೆ ಮೆಟ್ರಿಕ್ ಅಥವಾ ಪಿಯುಸಿ ನಂತರ ಉತ್ತಮ ಮಾರ್ಗದರ್ಶನ ಅವಶ್ಯ. ಯುವ ಸಂಪತ್ತು ಹೆಚ್ಚಾಗಿರುವ ದೇಶ ನಮ್ಮದಾಗಿದೆ. ಅಧಿಕಾರಕ್ಕಾಗಿ ಏನು ಮಾಡಲು ಹೇಸದ ರಾಜಕಾರಣಿಗಳಿದ್ದಾರೆ. ಆದರೆ ಇಂತಹ ಉದ್ಯಮಿಗಳು ಬೆಳಗಾವಿಯಲ್ಲಿ ನಮ್ಮ ಸಮಾಜದ ಹೆಣ್ಣು ಮಕ್ಕಳಿಗಾಗಿ ಕೋಟಿ ರೂ ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಿದ್ದಾರೆ. ಇವರ ಇಂತಹ ಸಮಾಜಮುಖಿ ಕಾರ್ಯಗಳು ಜನಮಾನಸದಲ್ಲಿ ಸದಾಕಾಲ ಉಳಿಯುತ್ತವೆ ಎಂದರು.

ಉದ್ಯಮಿ ಮಹೇಶ ಬೆಲ್ಲದ ಮಾತನಾಡಿ 35 ವರ್ಷದಿಂದ ನಡೆಸುತ್ತಿರುವ ಆನಲೈನ್ ಇನ್ಸ್ಟ್ರುಮೆಂಟ್ಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆ. ಎ.ಐ ತಂತ್ರಜ್ಞಾನದ ಇಂರ‍್ಯಾಕ್ಟಿವ್ ಬೋರ್ಡಗಳನ್ನು ದೇಶದಲ್ಲಿಯೇ ನಾವು ಪ್ರಪ್ರಥಮವಾಗಿ ತಯಾರಿಸಿದ್ದೇವೆ. ಅವುಗಳಲ್ಲಿ ಸ್ವಲ್ಪ ಬೋರ್ಡಗಳನ್ನು ನಮ್ಮ ಭಾಗದ ಮಕ್ಕಳಿಗೆ ನೀಡುತ್ತಿದ್ದೇವೆಂದರು. ಸಂಸ್ಥೆಯ ಮತ್ತೋರ್ವ ಸಹ ಸಂಸ್ಥಾಪಕ ಶಿವಾನಂದ ಮಹಾಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ನಮ್ಮ ಆತ್ಮ ಸಂತ್ರಪ್ತಿಗಾಗಿ ಹುಟ್ಟಿದೂರು ಮತ್ತು ಈ ಭಾಗದಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ. ಸರಕಾರಿ ಶಾಲೆಗಳಲ್ಲಿ ಆಧುನಿಕ ಸೌಲಭ್ಯ ಕಲ್ಪಿಸುವ ಗುರಿ ನಮ್ಮದಾಗಿದ್ದು, ಗ್ರಾಮೀಣ ಮಕ್ಕಳು ದೇಶ ವಿದೇಶಗಳಲ್ಲಿ ಉನ್ನತ ಸ್ಥಾನಮಾನ ಹೊಂದಲಿ ಎಂಬ ಆಶಯ ವ್ಯಕ್ತಪಡಿಸಿದರು.

ಬಿ.ಇ.ಒ ಪ್ರಭಾವತಿ ಪಾಟೀಲ ಮಾತನಾಡಿ ಸರಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸಲು ಇದು ಆಕರ್ಷಣೆ ಆಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ ಶಾಲೆಗಳನ್ನು ಹೆಸರಿಸಲು ಸಹಕಾರಿ. ಶೇ 95ರಷ್ಟು ಪ್ರೌಢಶಾಲೆಗಳು ಡಿಜಿಟಲೀಕರಣ ಆಗಿವೆಂದರು.

ಯುಪಿಎಸ್.ಸಿ ಟಾಪರ್ ಕಿರಣ ಕಮತೆ ಮತ್ತು ಸಾನಿಧ್ಯ ವಹಿಸಿದ್ದ ನಿಡಸೋಶಿಯ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿದರು. ಯು.ಪಿ.ಎಸ್.ಸಿ ಪರೀಕ್ಷೆ ಸಾದಕರಾದ ಕಿರಣ ಕಮತೆ ಹಾಗೂ ಬಸವರಾಜ ಪಾಟೀಲ ಮತ್ತಿತರರನ್ನು ಸನ್ಮಾನಿಸಿದರು.

ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಹಿರಾ ಶುರ‍್ಸ್ ನಿರ್ದೇಶಕ ಸುರೇಶ ಬೆಲ್ಲದ, ಪ್ರಕಾಶ ಬೆಲ್ಲದ, ರಾಜೇಶ್ವರಿ ಮಹಾಶೆಟ್ಟಿ, ರಮೇಶ ಬೆಲ್ಲದ ಇತರರಿದ್ದರು. ಬಿಇಒ ಪ್ರಭಾವತಿ ಪಾಟೀಲ ಸ್ವಾಗತಿಸಿದರು. ಸಿದ್ದಪ್ಪ ಮುರಚಿಟ್ಟಿ ನಿರೂಪಿಸಿದರು. ಎ. ಎಸ್. ಪದ್ಮನ್ನವರ ವಂದಿಸಿದರು

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept