ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ದಿ.ಅಪ್ಪಣ್ಣಗೌಡರ ಪುಣ್ಯತಿಥಿ ನಿಮಿತ್ಯ ಅವರ ಪುತ್ಥಳಿಗೆ ಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಅಜಿತ ಮುನ್ನೋಳಿ, ಪೃಥ್ವಿ ಕತ್ತಿ, ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ, ಕೆಂಪಣ್ಣಾ ವಾಸೇದಾರ ಮತ್ತಿತರರಿದ್ದರು.
ಹುಕ್ಕೇರಿ: ಸಹಕಾರಿ ತತ್ವದಡಿ ತಾಲೂಕಿನ ಜನರಿಗೆ ವಿದ್ಯುತ್ ಸರಬರಾಜು ಮಾಡುವ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ ಸಹಕಾರಿ ಭೀಷ್ಮ ದಿ.ಅಪ್ಪಣ್ಣಗೌಡ ಪಾಟೀಲ ಅವರ ಹೆಸರು ಸದಾಕಾಲ ಸ್ಮರಣೀಯ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಗುರುವಾರದಂದು ಪಟ್ಟಣದ ವಿದ್ಯುತ್ ಸಹಕಾರಿ ಸಂಘದಲ್ಲಿ ದಿ.ಅಪ್ಪಣ್ಣಗೌಡರ 51 ನೇ ಪುಣ್ಯಸ್ಮರಣೆ ನಿಮಿತ್ಯ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ದೇಶದಲ್ಲಿ ಇಂತಹ 7 ಸಂಘಗಳಿದ್ದವು. ಆದರೆ ಅವು ಮುಚ್ಚಿಹೋಗಿ ಇದೊಂದು ಉಳಿದಿದೆ. ಇದಕ್ಕೆ ದಿ.ಅಪ್ಪಣ್ಣಗೌಡರ ನಿಸ್ವಾರ್ಥ ಮತ್ತು ಸಮಾಜಮುಖಿ ಕನಸು ಕಾರಣವೆಂದರು. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉಳಿದು ಬೆಳೆಯುವಲ್ಲಿ ಅವರ ತತ್ವಾದರ್ಶಗಳನ್ನು ನಾವು ಅನುಸರಿಸಬೇಕೆಂದರು.
ಸಂಘದ ಉಪಾಧ್ಯಕ್ಷ ಅಜಿತ ಮುನ್ನೋಳಿ ಮತ್ತು ನಿರ್ದೇಶಕರಾದ ಕಲಗೌಡ ಪಾಟೀಲ, ಸತ್ತೆಪ್ಪಾ ನಾಯಿಕ ಅವರು ಮಾತನಾಡಿ ಈ ಸಂಘದಿAದ ಗ್ರಾಹಕರಿಗೆ ಗುಣಮಟ್ಟದ ಹಾಗೂ ತ್ವರಿತ ಸೇವೆ ಸಲ್ಲಿಸಲು ಅನುಕೂಲವಾಗಿದೆ. ಸಂಘ ಉಳಿಸಿ ಬೆಳೆಸಲು ಗ್ರಾಹಕರು ಬಾಕಿ ಬಿಲ್ ತುಂಬಬೇಕೆ0ದು ವಿನಂತಿಸಿದರು. ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಮತದಾರರು ನಮ್ಮ ಸ್ವಾಭಿಮಾನಿ ಪೆನಲ್ ಬೆಂಬಲಿಸಿ ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ನಿರ್ದೇಶಕರಾದ ಕೆಂಪಣ್ಣಾ ವಾಸೇದಾರ, ಶಿವನಗೌಡ ಮದವಾಲ, ಮಹಾದೇವ ಕ್ಷೀರಸಾಗರ, ಶ್ರೀಮಂತ ಸನ್ನಾಯಿಕ, ಮುಖಂಡರಾದ ಗೌಸ್ ಆಜಂ ನಾಯಿಕವಾಡಿ, ಗುರುಸಿದ್ದ ಮೂಡಲಗಿ, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಕೌಂಟ್ ಆಫೀಸರ ಎಸ್.ಎನ್.ಹಿರೇಮಠ, ಎನ್.ಎಸ್. ಸರದೇಸಾಯಿ. ಉದಯ ಮಗದುಮ್ಮ, ಬಿ.ಎಂ.ಮಗದುಮ್ಮ, ವಿನಾಯಕ ರಾಮದುರ್ಗಿ, ಓಂಕಾರ ಹಿರೇಕೋಡಿ, ದಾನೇಶ ದೊಡದನ್ನವರ, ಎಂ.ಎನ್.ಕರಾಡೆ, ಎಂ.ಎಸ್.ಹೆಬ್ಬಾಳಿ, ಪ್ರೇಮ ಪಾಟೀಲ, ನಿರಂಜನ ಮಗದುಮ್ಮ, ಎಂ.ಎಸ್.ಕುದನೂರಿ ಸೇರಿದಂತೆ ಅನೇಕರಿದ್ದರು.





