ಹುಕ್ಕೇರಿ ಅರ್ಬನ್ ಬ್ಯಾಂಕಿನಲ್ಲಿ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಾತನಾಡಿದರು. ಮಲ್ಲಿಕಾರ್ಜುನ ತೇರಣಿ, ರಾಜು ಬಾಗಲಕೋಟಿ, ಕೆ.ಬಿ.ಬಂದಾಯಿ ಇತರರಿದ್ದರು.
ಹುಕ್ಕೇರಿ : ಶತಮಾನದ ಸಂಭ್ರಮದಲ್ಲಿರುವ ಪಟ್ಟಣದ ಅರ್ಬನ್ ಬ್ಯಾಂಕ ಹಲವಾರು ಏರಿಳತದ ಮಧ್ಯೆ ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದು ಬ್ಯಾಂಕ ಅದ್ಯಕ್ಷ ಚಂದ್ರಶೇಖರ ಪಾಟೀಲ ಹೇಳಿದರು.
ಗುರುವಾರದಂದು ಬ್ಯಾಂಕಿನ ಸಭಾಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸತತ ಪ್ರಯತ್ನದಿಂದ ಈ ವರ್ಷ ಬ್ಯಾಂಕ ರೂ 87.25 ಲಕ್ಷ ನಿವ್ವಳ್ಚ ಲಾಭ ಗಳಿಸಿದೆ ಎಂದು ತಿಳಿಸಿದರು.ಪ್ರಸ್ತುತ 5215 ಸದಸ್ಯರನ್ನು ಹೊಂದಿದ ಬ್ಯಾಂಕ್ ರೂ 2.14 ಕೋಟಿ ಶೇರ ಬಂಡವಾಳ, 94.50 ಕೋಟಿ ರೂ ಠೇವು ಸಂಗ್ರಹಿಸಿ 58.90 ಕೋಟಿ ರೂ ಸಾಲ ವಿತರಿಸಿದೆ ಎಂದರು.
ಈಗಾಗಲೇ ಸಂಕೇಶ್ವರ, ಬೆಳಗಾವಿಯ ಪೀರನವಾಡಿ ಮತ್ತು ಬಿ.ಕೆ.ಕಂಗ್ರಾಳಿ, ಕಿತೂರ, ಮೂಡಲಗಿ ಪಟ್ಟಣಗಳಲ್ಲಿ ಶಾಕೆ ತೆರೆಯಲಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನೊಂದು ಶಾಖೆ ಪ್ರಾರಂಭಿಸುವ ಚಿಂತನೆ ಇದೆ ಎಂದರು. ಶನಿವಾರ ದಿ.೩೦ರಂದು ಪಟ್ಟಣದ ಎಸ್.ಕೆ. ಹೈಸ್ಕೂಲ ಚಿಣ್ಣರ ಭವನದಲ್ಲಿ ವಾರ್ಷಿಕ ಸರ್ವ ಸಾಧಾರಣಾ ಸಭೆ ಜರುಗಲಿದೆ. ಸಭೆಯಲ್ಲಿ ಎಲ್ಲ ಸದಸ್ಯರು ಹಾಜರಾಗಿ ಬ್ಯಾಂಕಿನ ಪ್ರಗತಿಗೆ ಸಲಹೆ ಸೂಚನೆ ನೀಡುವಂತೆ ವಿನಂತಿಸಿದರು.
ನಿರ್ದೆಶಕರಾದ ರಾಜು ಬಾಗಲಕೋಟಿ, ಮಲ್ಲಿಕಾರ್ಜುನ ತೇರಣಿ, ಪ್ರಧಾನ ವ್ಯವಸ್ಥಾಪಕ ಕೆ.ಬಿ.ಬಂದಾಯಿ, ರವಿ ಪಟ್ಟಣಶೆಟ್ಟಿ ಮತ್ತಿತರರಿದ್ದರು.




