ಇಂದು ರವಿವಾರ ಹುಕ್ಕೇರಿ ತಾಲೂಕಾ ದಸರಾ ಕ್ರೀಡಾಕೂಟ

ಹುಕ್ಕೇರಿ: ಪ್ರಸಕ್ತ ಸಾಲಿನ ಹುಕ್ಕೇರಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಅ. ೨೪ ಮತ್ತು ೨೫ ರಂದು ಪಟ್ಟಣದ ಹೊರವಲಯದ ಕ್ಯಾರಗುಡ್ಡದ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಲಿದೆ.
ಆಸಕ್ತ ಕ್ರಿಡಾಪಟುಗಳು ಆ.24 ರಂದು ಬೆಳಗ್ಗೆ 9 ಗಂಟೆಗೆ ಮೈದಾನದಲ್ಲಿದ್ದು ಹಾಜರಿದ್ದು ಹೆಸರು ನೋಂದಾಯಿಸಬೇಕು. ವೈಯಕ್ತಿಕ 100 ಮೀ ದಿಂದ 10 ಸಾವಿರ ಮೀಟರ್ ಓಟಗಳಿದ್ದು ಹಾಗೂ ಉದ್ದ ಜಿಗಿತ ಎತ್ತರ , ಜಿಗಿತ. , ಶಾಟ್ ಪುಟ್, ಟ್ರಿಪಲ್ ಜಂಪ್, ಜಾವೆಲಿನ್ ಥೋ, ಡಿಸ್ಕಸ್ ಥ್ರೋ. ಹರ್ಡಲ್ಸ್, ಸ್ಪರ್ಧೆ ಜರುಗಲಿವೆ. ಗುಂಪು ಆಟಗಳು: ವಾಲಿಬಾಲ್, ಫುಟಬಾಲ್ (ಬಾಲಕರಿಗೆ ಮಾತ್ರ), ಖೋಖೋ, ಕಬಡ್ಡಿ, ಥ್ರೋಬಾಲ್, ಯೋಗಾಸನ (ಪುರುಷ ಮತ್ತು ಮಹಿಳೆಯರಿಗಾಗಿ) ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಹುಕ್ಕೇರಿ ತಾಲೂಕಿನ ರಹವಾಸಿಯಾಗಿರಬೇಕು. ಈ ಕ್ರೀಡಾಕೂಟದಲ್ಲಿ ತಾಲೂಕಿನ ಶಾಲಾ ಕಾಲೇಜು. ಯುವಕ/ಯುವತಿ ಸಂಘಗಳ ಹಾಗೂ ಕ್ರೀಡಾ ಸಂಘ ಸಂಸ್ಥೆಗಳ ಕ್ರೀಡಾಪಟುಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9148832314, ಅಥವಾ 7259080818 ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept