ಪಟ್ಟಣದ ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ವಸತಿಗೃಹ ಕಟ್ಟಡಗಳ, ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ ಅವರು ರೈತರ ಸಮಸ್ಯೆಗಳ ಕುರಿತು ಮನವಿ ಪತ್ರ ಸಲ್ಲಿಸಲು ನಿರಾಕರಿಸಿದ್ದನ್ನು ಖಂಡಿಸಿ ರೈತ ಸಂಘಟನೆ ಕಾರ್ಯಕರ್ತರು ಸಚಿವ ದಿನೇಶ ಗುಂಡೂರಾವ ವಾಹನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರಿ ಕಾರ್ಯಕ್ರಮ ಮುಗಿದ ನಂತರ ಸಚಿವರು ತೆರಳುತ್ತಿದ್ದಾಗ ರೈತರು ತಮ್ಮ ಸಮಸ್ಯೆ ಹಾಗೂ ಸರಕಾರಿ ಆಸ್ಪತ್ರೆ ಸೌಲಭ್ಯ ಕುರಿತು ಮನವಿ ಪತ್ರ ಸ್ವೀಕರಿಸಲು ಮತ್ತು ಖುದ್ದಾಗಿ ಆಸ್ಪತ್ರೆಯ ವ್ಯವಸ್ಥೆ ವೀಕ್ಷಿಸಲು ಆಗ್ರಹಿಸಿದರು. ಸಚಿವರು ಇದಕ್ಕೆ ಸ್ಪಂದಿಸದ ಕಾರಣಾ ಆಕ್ರೋಶಗೊಂಡ ರೈತಪರ ಸಂಘಟನೆಯವರು ಸಚಿವರ ವಾಹನಕ್ಕೆ ಅಡ್ಡಗಟ್ಟಿ ಪ್ರತಿಭಟಿಸಿದರು. ಪೋಲಿಸರು ರೈತರನ್ನು ಚದುರಿಸಿ ಸಚಿವರ ವಾಹನ ತೆರಳಲು ಅನುವು ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ ಮರಬಸನ್ನವರ, ತಾಲೂಕಾ ಅಧ್ಯಕ್ಷ ಸಂಜು ಹಾವನ್ನವರ, ತಾಲೂಕಾ ಗೌರವಾಧ್ಯಕ್ಷ ರವಿ ಕಾಂಬಳೆ, ರಾಜ್ಯ ಉಪಾಧ್ಯಕ್ಷ ಜಿಯಾವುಲ ವಂಟಮೂರಿ, ರೈತರಾದ ರಾಮಪ್ಪಾ ವಾಸೇದಾರ, ಮತ್ತಿತರರಿದ್ದರು.
ರೈತಪರ ಸಂಘಟನೆಯವರಿಂದ ಸಚಿವ ದಿನೇಶ ಗುಂಡೂರಾವ ಅವರಿಗೆ ಮುತ್ತಿಗೆ

Join Our WhatsApp Channel
Join Now



