ತಾಲೂಕಿನ ಹಿಡಕಲ್ ಡ್ಯಾಮಿನ ಬುದ್ಧಿ ವಿಕಲಚೇತನ ಮಕ್ಕಳ ವಸತಿ ವಿಶೇಷ ಶಾಲೆಯಲ್ಲಿ ಮಕ್ಕಳೊಂದಿಗೆ ಮಲ್ಲಯ್ಯಾ ಶ್ರೀಗಳು ಜನ್ಮ ದಿನವನ್ನು ಆಚರಿಸಿಕೊಂಡರು. ಶಿವಕುಮಾರ ಮುಗಳಿ, ಮುಖಂಡರಾದ ಸುರೇಶ ಕುರಣಿ, ಮಾರುತಿ ಗಾಡಿವಡ್ಡರ, ಮಲ್ಲಿಕಾರ್ಜುನ ಕಬಾಡಗಿ, ಮಲೀಕ್ ಮುಜಾವರ, ಶಿವಲಿಂಗ ಮುಗಳಿ ಇತರರಿದ್ದರು.
ಹುಕ್ಕೇರಿ: ವಿಕಲಚೇತನ ಮತ್ತು ಬುದ್ದಿಮಾಂಧ್ಯ ಮಕ್ಕಳು ದೇವರಿಗೆ ಸಮಾನ. ಅವರಲ್ಲಿ ಯಾವ ಕಪಟ ಮತ್ತು ವಂಚನೆ ಇರುವುದಿಲ್ಲ. ಅಂತಹ ಮಕ್ಕಳೊಂದಿಗೆ ನನ್ನ ಜನ್ಮ ದಿನ ಆಚರಿಸಿಕೊಳ್ಳುತ್ತಿರುವುದು ಸೌಭಾಗ್ಯವೆಂದು ತಾಲೂಕಿನ ಘೋಡಗೇರಿ ಗ್ರಾಮದ ಶಿವಾನಂದ ಆಶ್ರಮದ ಮಲ್ಲಯ್ಯಾ ಶ್ರೀಗಳು ಹೇಳಿದರು.
ಮಂಗಳವಾರದಂದು ತಾಲೂಕಿನ ಹಿಡಕಲ್ ಡ್ಯಾಮಿನ ಬುದ್ಧಿ ವಿಕಲಚೇತನ ಮಕ್ಕಳ ವಸತಿ ವಿಶೇಷ ಶಾಲೆಯಲ್ಲಿ ಮಕ್ಕಳೊಂದಿಗೆ ಮಲ್ಲಯ್ಯಾ ಶ್ರೀಗಳು ಜನ್ಮ ದಿನವನ್ನು ಆಚರಿಸಿಕೊಂಡು ಮಾತನಾಡಿದರು.ಇಂದಿನ ಸಮಾಜದಲ್ಲಿ ಮೋಸ, ವಂಚನೆ ಹೆಚ್ಚಾಗುತ್ತಿವೆ.ಇಂತಹ ಪರಿಸ್ಥಿತಿಯಲ್ಲಿ ಯಾರನ್ನು ನಂಬಬೇಕು ಎಂಬುದು ತಿಳಿಯದಾಗಿದೆ.ಆದರೆ ವಿಕಲಚೇತನರು ಇಂತಹ ಕಪಟತನ ಅರಿಯದ ಮುಗ್ಧರು.ಅದಕ್ಕಾಗಿ ಇವರೊಂದಿಗೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀಗಳ ಭಕ್ತರು ಬುದ್ಧಿಮಾಂಧ್ಯ ಮಕ್ಕಳಿಗೆ ಹಣ್ಣು ಹಂಪಲ ಹಂಚುವುದರ ಜತೆಗೆ ಅವರಿಗೆ ಅನ್ನ ದಾಸೋಹ ಸೇವೆಗೈಯ್ದರು.
ಬಿ.ಎಸ್.ಎನ್.ಎಲ್ ಸಲಹಾ ಸಮಿತಿ ಜಿಲ್ಲಾ ಸದಸ್ಯ ಶಿವಕುಮಾರ ಮುಗಳಿ, ಮುಖಂಡರಾದ ಸುರೇಶ ಕುರಣಿ, ಮಾರುತಿ ಗಾಡಿವಡ್ಡರ, ಮಲ್ಲಿಕಾರ್ಜುನ ಕಬಾಡಗಿ, ಮಲೀಕ್ ಮುಜಾವರ, ಶಿವಲಿಂಗ ಮುಗಳಿ, ಅಮಿತ ಮುನ್ನೋಳಿ, ಸಂಜು ಬಡಿಗೇರ ಮತ್ತಿತರರಿದ್ದರು.






