ತಾಲೂಕಿನ ರಕ್ಷಿ ಗ್ರಾಮದ ಗುಡ್ ಶೆಪರ್ಡ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ನೇಮಪ್ಲೇಟ್ ಮತ್ತು ಅಧಿಕಾರ ಹಾಗೂ ಧ್ವಜ ಹಸ್ತಾಂತರ ಕಾರ್ಯಕ್ರಮ. ಪ್ರಾಚಾರ್ಯ ಡಾ.ಸದಾನಂದ ಕುರಿ, ವಿರುಪಾಕ್ಷ ಜರಳಿ, ಬಾಬು ಸುಂಕದ, ರುತ್ ಸೊಪ್ಪಡ್ಲ ಇತರರಿದ್ದರು.
ಹುಕ್ಕೇರಿ: ತಾಲೂಕಿನ ರಕ್ಷಿ ಗ್ರಾಮದ ಗುಡ್ ಶೆಪರ್ಡ ಆಂಗ್ಲ ಮಾಧ್ಯಮ ಶಾಲೆಯ ಪ್ರಸಕ್ತ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮಗಳ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ನೇಮಪ್ಲೇಟ್ ಮತ್ತು ಅಧಿಕಾರ ಹಾಗೂ ಧ್ವಜ ಹಸ್ತಾಂತರ ಕಾರ್ಯಕ್ರಮ ಜರುಗಿತು.

ಗುರುವಾರ ಸಂಜೆ ನಡೆದ ಕಾರ್ಯಕ್ರಮವನ್ನು ಶೃಂಗೇರಿಯ ರಾಣಿ ಚನ್ನಮ್ಮಾ ವಸತಿ ಶಾಲೆ ಪ್ರಾಂಶುಪಾಲ ವಿರುಪಾಕ್ಷ ಜರಳಿ ಅವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಈ ಶಾಲೆ ಹಂತ ಹಂತವಾಗಿ ಬೆಳೆದು ಇಂದು ನೂರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕನಲ್ಲಿ ಆಂಗ್ಲ ಮಾಧ್ಯಮ ಬೋಧನೆ ಕಲಿಸುತ್ತಿರುವುದು ಪ್ರಶಂಸನೀಯ ಎಂದರು.ಮುಂಬರುವ ದಿನಗಳಲ್ಲಿ ಈ ಶಾಲೆ ತಾಲೂಕಿನಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಳ್ಳುತ್ತದೆ ಎಂದರು.
ಪತ್ರಕರ್ತ ಬಾಬು ಸುಂಕದ ಶಾಲಾ ಸಂಸತ್ತಿನ ನೂತನ ಪದಾಧಿಕಾರಿಗಳಿಗೆ ಧ್ವಜ ಮತ್ತು ಅಧಿಕಾರ ಹಸ್ತಾಂತರ ನೇರವೇರಿಸಿ ಮಾತನಾಡುತ್ತಾ ಹೊಸದಾಗಿ ಬಂದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ಉತ್ತಮ ಮಾರ್ಗದರ್ಶನ ಮಾಡಬೇಕು. ಶಿಕ್ಷಕರು ಮಕ್ಕಳಿಗೆ ಪಾಠದ ಜತೆಗೆ ಒಳ್ಳೆಯ ಆಚಾರ ವಿಚಾರಗಳ ಸಂಸ್ಕೃತಿ ತಿಳಿಸಿಕೊಡುವಂತೆ ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಡಾ.ಸದಾನಂದ ಕುರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಹುಕ್ಕೇರಿಯ ರಾಣಿ ಚನ್ನಮ್ಮಾ ವಸತಿ ಶಾಲೆ ಪ್ರಾಚಾರ್ಯರಾಗಿದ್ದ ವಿರುಪಾಕ್ಷ ಜರಳಿ ಶೃಂಗೇರಿಗೆ ವರ್ಗಾವಣೆಗೊಂಡ ಪ್ರಯುಕ್ತ ಅವರನ್ನು ಸತ್ಕರಿಸಿದರು.
ಸವಿತಾ ಹೊಸೂರ, ಉಲ್ಫತಜಹಾನ್ ಖಂಡಾಯತ, ಶ್ರುತಿ ಕೆ ಕೌಜಲಗಿ ಇದ್ದರು. ಸಂಸ್ಥೆಯ ಮ್ಯಾನೇಜರ ಬಿ.ಕೃಷ್ಣಪ್ಪ ಪ್ರಾರ್ಥಿಸಿದರು. ಮಧು ಬ್ಯಾಳಿ ಸ್ವಾಗತಿಸಿದರು. ರುತ್ ಸೊಪ್ಪಡ್ಲಾ ನಿರೂಪಿಸಿದರು. ಅಶ್ವಿನಿ ಬಿದರೆ ವಂದಿಸಿದರು.





