ತಾಲೂಕಿನ ನೇರ್ಲಿ ಗ್ರಾಮದಲ್ಲಿ ನೇರ್ಲಿ-ಕೋಚರಿ-ಗವನಾಳ ಕೂಡು ರಸ್ತೆ ಸುಧಾರಣಾ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿ ಪೂಜೆ ನೆರವೇರಿಸಿದರು. ತಾಲೂಕಿನ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳಿದ್ದರು.
ಹುಕ್ಕೇರಿ: ಕ್ಷೇತ್ರದ ಜನ ಸಾಮಾನ್ಯರಿಗೆ ಸಂಚರಿಸಲು ರಸ್ತೆ, ಆರೋಗ್ಯಕ್ಕಾಗಿ ಆರೋಗ್ಯ ಮಂದಿರ, ಕಸ ಸಂಗ್ರಹಣಾ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣ ಮೊದಲಾದ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ನೇರ್ಲಿ ಗ್ರಾಮದಲ್ಲಿ ನೇರ್ಲಿ-ಕೋಚರಿ-ಗವನಾಳ ಕೂಡು ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ತಾಲೂಕಿನ ಕರೆಗಳಿಗೆ ನೀರು ತುಂಬಿಸುವ ಯೋಜನಾ ಕಾಮಗಾರಿ ಪೂರ್ಣಗೊಂಡಿದ್ದು ಪ್ರಾಯೋಗಿಕತೆ ಪ್ರಾರಂಭವಾಗಿದೆ. ಶೀಘ್ರದಲ್ಲಿ ಅದನ್ನು ಲೋಕಾರ್ಪಣೆ ಕೈಗೊಳ್ಳಲಾಗುವುದು ಎಂದರು. ಇದರ ಜತೆಗೆ ಅಡವಿಸಿದ್ದೇಶ್ವರ ಮತ್ತು ಶಂಕರಲಿAಗ ಏತ ನೀರಾವರಿ ಯೋಜನೆ ಸಹ ಮುಕ್ತಾಯ ಹಂತದಲ್ಲಿದೆ. ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು.
ನಂತರ ತಾಲೂಕಿನ ನೇರ್ಲಿ-ಕಮತನೂರ, ನಿಡಸೋಸಿ-ಬೋರಗಲ್ಲ ರಸ್ತೆ ಬಾಕ್ಸ್ ಕಲ್ವರ್ಟ ಕಾಮಗಾರಿ, ಬೆಳವಿ ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕದ ಯಂತ್ರೋಪಕರಗಳ ಪೂಜಾ ಕಾರ್ಯಕ್ರಮ, ಸುಲ್ತಾನಪೂರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಅಡಿಗಲ್ಲು ಸಮಾರಂಭ, ಕೇಸ್ತಿ ಗ್ರಾಮದಲ್ಲಿ ಹೊಸ ಬೀದಿದೀಪಗಳಿಗೆ ಚಾಲನೆ ಮತ್ತು 10 ಸಾವಿರ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಾಲಯದ ಭೂಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಸತ್ತೆಪ್ಪಾ ನಾಯಿಕ, ಕಲಗೌಡ ಪಾಟೀಲ, ಶಿವನಗೌಡ ಮದವಾಲ, ಮುಖಂಡರಾದ ಪ್ರಶಾಂತ ಪಾಟೀಲ, ಲಿಂಗರಾಜ ನಾಯಿಕ, ಶ್ರೀಶೈಲ ಮಠಪತಿ, ನಿಲೇಶ ಜಾಧವ, ರವಿ ಪಾಟೀಲ, ಎಸ್.ಕೆ.ಹುಕ್ಕೇರಿ, ಮಹಾದೇವ ಪಾಟೀಲ, ಬಸವರಾಜ ತಳವಾರ, ಮಲ್ಲಪ್ಪಾ ಬಿಸಿರೊಟ್ಟಿ, ಅಧಿಕಾರಿಗಳಾದ ಟಿ.ಆರ್.ಮಲ್ಲಾಡದ, ಪ್ರವೀಣ ಮಾಡ್ಯಾಳ, ಶಶಿಕಾಂತ ವಂದಾಳೆ, ಶ್ರೀಕಾಂತ ಭೂಸಗೋಳ, ಅವಿನಾಶ ಹೊಳೆಪ್ಪಗೋಳ ಮತ್ತಿತರರಿದ್ದರು.





