ಸೋಮವಾರ & ಮಂಗಳವಾರ ಎಸ್.ಕೆ ಪಬ್ಲಿಕ್ ಸಿಬಿ.ಎಸ್.ಸಿ ಸ್ಕೂಲಿನ ಜೈ-ಹೋ ಸಾಂಸ್ಕ್ರತಿಕ ಉತ್ಸವ: ಪಿಂಟು ಶೆಟ್ಟಿ

ಪಟ್ಟಣದ ಎಸ್.ಕೆ ಪಬ್ಲಿಕ್ ಸ್ಕೂಲಿನ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿಯವರು ಪ್ರದರ್ಶಿಸಿದರು. ಪಿಂಟು ಶೆಟಿ, ಎಸ್.ಆರ್.ಶೆಟಿ, ಓಂಕಾರ ಹೆದ್ದೂರಶೆಟಿ, ಸುಹಾಸ ನೂಲಿ, ಸುರೇಶ ತಾರಳಿ, ಸಂಜಯ ಅಡಕೆ ಮತ್ತಿತರರಿದ್ದರು

ಹುಕ್ಕೇರಿ: ಸ್ಥಳೀಯ ಪ್ರತಿಷ್ಠಿತ ಎಸ್ ಕೆ ಪಬ್ಲಿಕ್ ಸಿ.ಬಿ.ಎಸ್.ಸಿ ಶಾಲೆಯ 2025-26 ರ ಸಾಲಿನ ಜೈ ಹೋ ಸಾಂಸ್ಕೃತಿಕ ಉತ್ಸವವನ್ನು ಸೋಮವಾರ ದಿ.22 ಮತ್ತು ಮಂಗಳವಾರ ದಿ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಚೇರಮನ್ ಚನ್ನಬಸಪ್ಪಾ (ಪಿಂಟು) ಶೆಟ್ಟಿ ಹೇಳಿದರು.

   ಅವರು ರವಿವಾರದಂದು ಶಾಲಾ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದೇ ಮೊದಲ ಬಾರಿಗೆ ವಾರ್ಷಿಕೋತ್ಸವ ನಿಮಿತ್ಯ ಮಕ್ಕಳ ಜತೆಗೆ ಪಾಲಕರಿಗೂ ಪ್ರತ್ಯೇಕವಾಗಿ ದೇಶಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ ಎಂದರು. ಒತ್ತಡದ ಬದುಕಿನಲ್ಲಿ ಮಕ್ಕಳ ಆಟೋಟಗಳ ಅಸ್ವಾದಿಸುವುದು ಹಾಗೂ ತಾವು ಸಹ ಪಾಲ್ಗೊಂಡು ಮಾನಸಿಕ ನೆಮ್ಮದಿ ಪಡೆಯಲು ಈ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಸಲಹೆ ಮೇರೆಗೆ ಕೈಗೊಂಡಿದ್ದೇವೆ ಎಂದರು.

   ನಿರ್ದೇಶಕರಾದ ಸುಹಾಸ ನೂಲಿ, ಚನ್ನಪ್ಪಾ ಗಜಬರ, ಸಂಜಯ ಅಡಕೆ, ಓಂಕಾರ ಹೆದ್ದೂರಶೆಟ್ಟಿ ಅವರು ಮಾತನಾಡಿ ಪಾಲಕರ ಕ್ರೀಡಾಕೂಟದಲ್ಲಿ ೮೦೦ಕ್ಕೂ ಪಾಲಕರು ಭಾಗವಹಿಸಿದ್ದಾರೆಂದರು. ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಮಕ್ಕಳಿಗೆ ಇವುಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.

 ಪ್ರಾಂಶುಪಾಲ ರಾಘವೇಂದ್ರ ಕುಲಕರ್ಣಿ ಅವರು ಮಾತನಾಡಿ ಸೋಮವಾರ ದಿ.22ರ ಉತ್ಸವದಲ್ಲಿ ಬೈಲೂರ ನಿಷ್ಕಲ ಮಂಟಪದ ನಿಜಗುಣಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಿ.ಎಸ್.ಟಿ ಶಿಕ್ಷಣ ಸಂಸ್ಥೆ ಚೇರಮನ್ ಅನೀಲ(ಎಸ್.ಆರ್.) ಶೆಟ್ಟಿ ಉದ್ಘಾಟಿಸಲಿರುವರು. ಸಂಸ್ಥೆ ಚೇರಮನ್ ಪಿಂಟು ಶೆಟ್ಟಿ ಅಧ್ಯಕ್ಷತೆ ವಹಿಸುತ್ತಾರೆ. ಮಂಗಳವಾರ ದಿ.23 ರಂದು ನಡೆಯುವ ಸಾಂಸ್ಕೃತಿಕ ಸಮಾರಂಭದಲ್ಲಿ ಮಾಜಿ ಸಂಸದರು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಮೇಶ ಕತ್ತಿ ಆತಿಥ್ಯ ವಹಿಸಿ, ಪಿಂಟು ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು. ಸಮಾರಂಭದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಗುವುದೆಂದರು.

    ಆಡಳಿತ ಮಂಡಳಿ ಕಾರ್ಯದರ್ಶಿ ಆದಿತ್ಯ ಶೆಟ್ಟಿ, ನಿರ್ದೇಶಕರಾದ ಎಸ್.ಆರ್.ಶೆಟ್ಟಿ, ಓಂಕಾರ ಹೆದ್ದೂರಶೆಟ್ಟಿ, ಸುಹಾಸ ನೂಲಿ, ಸಚಿನ್ ಹೆದ್ದೂರಶೆಟ್ಟಿ, ಸುರೇಶ ತಾರಳಿ, ಸಂಜಯ ಅಡಕೆ, ಮಹಾಲಿಂಗಪ್ಪಾ ಗಂಧ, ಸೋಮಶೇಖರ ಪರಕನಟ್ಟಿ, ವಿರೇಶ ಗಜಬರ, ಚನ್ನಬಸಪ್ಪಾ ಗಜಬರ, ದಯಾನಂದ ಹಿರೇಮಠ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept