ಗ್ರಾಮದ ಕುಡಿಯುವ ನೀರು ಪೂರೈಕೆಗೆ ನಿರಂತರ ವಿದ್ಯುತ್ ಸಂಪರ್ಕ: ರಮೇಶ ಕತ್ತಿ ಚಾಲನೆ

ತಾಲೂಕಿನ ನೇರಲಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಟಿಸಿಗೆ ಕಲ್ಪಿಸಿದ ನಿರಂತರ ವಿದ್ಯುತ್ ಸಂಪರ್ಕ ಉದ್ಘಾಟನಾ ಕಾರ್ಯಕ್ರಮದಲ್ಲಿ ರಮೇಶ ಕತ್ತಿ ಅವರನ್ನು ಉದ್ಘಾಟಿಸಿದರು. ಮಹಾವೀರ ನಿಲಜಗಿ, ನಿಲೇಶ ಜಾಧವ, ಈಶ್ವರ ಖೋತ ಇತರರಿದ್ದರು

ಹುಕ್ಕೇರಿ : ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ೨೫ ಕೆವ್ಹಿಎ ಟಿಸಿಯನ್ನು ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಪಂಚಾಯತ ಸಿಬ್ಬಂದಿ ಮತ್ತು ಮುಖಂಡರಿಗೆ ಡಿಸಿಸಿ ಬ್ಯಾಂಕ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ಶುಕ್ರವಾರದಂದು ತಾಲೂಕಿನ ನೇರಲಿ ಗ್ರಾಮದಲ್ಲಿ ನೂತನವಾಗಿ ಅಳವಡಿಸಿದ ಕುಡಿಯುವ ನೀರು ಪೂರೈಕೆ ಟಿಸಿಗೆ ಕಲ್ಪಿಸಿದ ನಿರಂತರ ವಿದ್ಯುತ್ ಸಂಪರ್ಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮುಂಬರುವ ದಿನಗಳಲ್ಲಿ ತೋಟಪಟ್ಟಿ ನಿವಾಸಿಗಳಿಗೂ ಈ ಭಾಗ್ಯ ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ನಿರಂತರ ಜ್ಯೋತಿ ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರು ಸದಸ್ಯರು ಮತ್ತು ಗ್ರಾಹಕರು ಹಲವಾರು ವರ್ಷಗಳಿಂದ ಮನೆ, ವಾಣಿಜ್ಯ ಮಳಿಗೆಗಳ ವಿದ್ಯುತ್ ಬಿಲ್ ಬಾಕಿಯನ್ನು ಆದಷ್ಟು ಬೇಗ ಸಂದಾಯ ಮಾಡುವಂತೆ ವಿನಂತಿಸಿದರು. ಸಂಘದ ಏಳಿಗೆಗೆ ಬಿಲ್ ಸಂದಾಯ ಅವಶ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅವಶ್ಯವೆಂದರು. ಗ್ರಾಮಸ್ಥರು ಅತಿಥಿಗಳನ್ನು ಸನ್ಮಾನಿಸಿದರು.

ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ, ಗ್ರಾ.ಪಂ ಅಧ್ಯಕ್ಷ ನಿಲೇಶ ಜಾಧವ, ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪಾ ಪಾಟೀಲ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ, ಮುಖಂಡರಾದ ಈಶ್ವರ ಖೋತ, ಎಸ್.ಕೆ. ಹುಕ್ಕೇರಿ, ನಾಗೇಶ ಪಾಟೀಲ, ವಿನಾಯಕ ಸಂಕೇಶ್ವರಿ, ಅನೀಲ ಪಾಟೀಲ, ಈರಪ್ಪಾ ಲಬ್ಬಿ, ಎಸ್.ಆರ್.ಪಾಟೀಲ, ಆಕಾಶ ಗುರವ, ಸಂಜಯ ಹೊಸಮನಿ ಇತರರಿದ್ದರು.

Join Our WhatsApp Channel
Join Now
error: Content is protected !!
This website uses cookies to ensure you get the best experience on our website. Details
Decline
Accept