ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಹಮ ಶುರ‍್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು.ಶಶಿಕಾಂತ ನಾಯಿಕ, ಗುರು ಪಾಟೀಲ, ರಿಷಬ್ ಪಾಟೀಲ, ರವಿ ಕರಾಳೆ, ಅಮರ ನಲವಡೆ, ಸಂಜಯ ಶಿರಕೋಳಿ ಇತರರಿದ್ದರು
ಹುಕ್ಕೇರಿ:ತಾಲೂಕಿನ ಜನ ಬದಲಾವಣೆ ಬಯಸಿದ್ದಾರೆ. ಕಳೆದ 25 ವರ್ಷಗಳಿಂದ ಡಿಸಿಸಿ ಬ್ಯಾಂಕಿನ ಚುನಾವಣೆ ಅವಿರೋಧ ಆಯ್ಕೆಯಾಗುತ್ತಾ ಬಂದಿದೆ.ಕಾರಣ ಈ ಬಾರಿ ಚುನಾವಣೆ ನಡೆಸಲು ನಾನು ರಮೇಶ ಕತ್ತಿ ಅವರ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದು ಸಂಗಮ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ರಾತ್ರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಯಮಕನಮರ್ಡಿ ಮತಕ್ಷೇತ್ರದ ಅಲದಾಳ ಗೆಸ್ಟಹೌಸಿನಲ್ಲಿ ನಡೆದ ತಾಲೂಕಿನ 90 ಪಿಕೆಪಿಎಸ್ ಪೈಕಿ 58 ಪಿಕೆಪಿಎಸ್‌ನವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಪ್ರೋತ್ಸಾಹವೇ ನನ್ನ ಸ್ಪರ್ಧೆಗೆ ಶ್ರೀರಕ್ಷೆ ಎಂದರು.
ಕತ್ತಿ ಕುಟುಂಬದ ಆಪ್ತರಲ್ಲಿ ತಾವು ಒಬ್ಬರಾಗಿದ್ದವರು.ಇದೀಗ ಅವರ ವಿರುದ್ಧ ಸ್ಪರ್ಧಿಸಲು ಕಾರಣವೇನು ಎಂಬ ಪ್ರಶ್ನೆಗೆ ಸಂಗಮ ಸಹಕಾರಿ ಸಕ್ಕರೆ ಕಾರಖಾನೆಗೆ ೨೦ ಕೋಟಿ ರೂ ಸಾಲ ಅವಶ್ಯಕತೆ ಇದ್ದಾಗ ರಮೇಶ ಕತ್ತಿ ಅವರು ಸಹಕಾರ ನೀಡಲಿಲ್ಲ.ಅದರಿಂದ ನನಗೆ ಸಹಕಾರ ನೀಡಿದ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರ ಪರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು. ಚಿಕ್ಕ ವಯಸ್ಸಿನಿಂದ ಸಹಕಾರಿ ಕ್ಷೇತ್ರದ ಒಲವು ಇದ್ದು, ಹಲವಾರು ಸಂಘ ಸಂಸ್ಥೆಗಳ ನಿರ್ದೇಶಕನಾಗಿ, ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆ ಅನುಭವ ಸಹ ತಾಲೂಕಿನ ಸಹಕಾರಿಗಳಿಗೆ ಗೊತ್ತಿದೆ ಎಂದರು.
ಚುನಾವಣೆ ಹೊಂದಾಣಿಕೆ ಸ್ವರೂಫ ಪಡೆದುಕೊಂಡರೆ ಸಹಕಾರಿಗಳ ಅಭಿಪ್ರಾಯ ಪಡೆದು ನನ್ನ ಸ್ಪರ್ಧೆ ನಿರ್ಧರಿಸುತ್ತೇನೆಂದು ಸ್ಪಷ್ಟಪಡಿಸಿದರು.ಒಟ್ಟಾರೆ ಈ ಬೆಳವಣಿಗೆ ಇದೀಗ ಹುಕ್ಕೇರಿ ತಾಲೂಕಿನಿಂದ ರಮೇಶ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲ ಸ್ಪರ್ಧಿಸುವುದು ನಿಶ್ಚಿತವಾಗಿದೆ.
ಮಾಜಿ ಸಚಿವ ಶಶಿಕಾಂತ ನಾಯಿಕ, ಗುರು ಪಾಟೀಲ, ರಿಷಬ್ ಪಾಟೀಲ, ರವಿ ಕರಾಳೆ, ಅಮರ ನಲವಡೆ, ಸಂಜಯ ಶಿರಕೋಳಿ, ಬಂಡು ಹತನೂರೆ, ಭೀಮಣ್ಣಾ ರಾಮಗೋನಟ್ಟಿ, ಕಿರಣ ರಜಪೂತ, ರಾಜು ಸಿದ್ನಾಳ, ವಿರುಪಾಕ್ಷಿ ಮರೆನ್ನವರ, ಬಸಗೌಡ ಪಾಟೀಲ, ಮಾರುತಿ ಪವಾರ, ತಮ್ಮಣಗೌಡ ಪಾಟೀಲ, ಇಮ್ರಾನ ಮೋಮಿನ್ ಮತ್ತಿತರರಿದ್ದರು.





