ಹುಕ್ಕೇರಿಯ ನೂತನ ಸಿಡಿಪಿಒ ಸಿ.ಹರಿಪ್ರಸಾದ ಶಾಸಕ ನಿಖಿಲ ಕತ್ತಿ ಅವರಿಗೆ ಇಲಾಖೆ ಕಾರ್ಯಗಳ ಕುರಿತು ವಿವರಿಸುತ್ತಿರುವುದು.
ನೂತನ ಸಿಡಿಪಿಒಗೆ ಕಿವಿಮಾತು
ಹುಕ್ಕೇರಿ: ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕೇಂದ್ರಗಳನ್ನು ಪಟ್ಟಿ ಮಾಡಿ ಅವುಗಳಿಗೆ ದೊರಕಬೇಕಾದ ಸ್ಥಳದ ಕುರಿತು ತಿಳಿಸುವಂತೆ ಶಾಸಕ ನಿಖಿಲ ಕತ್ತಿ ಅವರು ನೂತನ ಸಿಡಿಪಿಒ ಅವರಿಗೆ ನಿರ್ದೇಶಿಸಿದರು.
ಸೋಮವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಾಲೂಕಾ ನೂತನ ಸಿಡಿಪಿಒ ಆಗಿ ಸಿ. ಹರಿಪ್ರಸಾದ ಅವರು ಆಗಮಿಸಿ ಶಾಸಕರನ್ನು ಭೇಟಿ ಮಾಡಿದಾಗ ಶಾಸಕರು ತಿಳಿಸಿದರು.ಹುಕ್ಕೇರಿ ಗಾಂಧಿ ನಗರ ಏರಿಯಾದಲ್ಲಿ ೨ನೇ ಅಂಗನವಾಡಿ ಕೇಂದ್ರ ಮಂಜೂರಾತಿಯಾಗಿದ್ದು ಈಗಾಗಲೇ ಅಲ್ಲಿ ಒಂದು ಇರುವುದರಿಂದ ಆಂಜನೇಯ ನಗರ ನಿವಾಸಿಗಳ ಬಹು ದಿನದ ಬೇಡಿಕೆ ಈಡೇರಿಸಬೇಕಾಗಿದೆ. ಕಾರಣ ನೂತನ ಅಂಗನವಾಡಿ ಕೇಂದ್ರ ವರ್ಗಾಯಿಸುವಂತೆ ಶಾಸಕರು ಸೂಚಿಸಿದರು.
ಇಲಾಖೆ ಸಿಬ್ಬಂದಿಗಳ ಅಶಿಸ್ತಿನ ವರ್ತನೆ, ಅಂಗನವಾಡಿ ಕೇಂದ್ರಗಳಲ್ಲಿ ಶಿಕ್ಷಕಿಯರು ಮತ್ತು ಸಹಾಯಕರ ಕಡ್ಡಾಯ ಹಾಜರಾತಿ, ಮಕ್ಕಳಿಗೆ ವ್ಯವಸ್ಥಿತವಾಗಿ ಆಹಾರ ಪೂರೈಕೆ ಆಗುತ್ತಿರುವ ಕುರಿತು ಗಮನಿಸಬೇಕೆಂದು ಆದೇಶಿಸಿದರು.

ಸಿಡಿಪಿಒ ಸಿ. ಹರಿಪ್ರಸಾದ ಅವರು ಮಾತನಾಡಿ ಈ ಮೊದಲು ಚಿತ್ರದುರ್ಗ ಜಿಲ್ಲೆ ಚಳ್ಳಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆನು.ಇದೀಗ ಹುಕ್ಕೇರಿಗೆ ಬಂದಿದ್ದು ಜನಪ್ರತಿನಿಧಿಗಳ ಮತ್ತು ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಿ ಜನಪರ ಆಡಳಿತ ಮಾಡುವುದಾಗಿ ತಿಳಿಸಿದರು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಮಹಾನಿಂಗ ಸನದಿ, ಗುರುರಾಜ ಕುಲಕರ್ಣಿ, ರಾಚಯ್ಯಾ ಹಿರೇಮಠ, ವಕೀಲ ಪ್ರಕಾಶ ಮುತಾಲಿಕ, ರಾಜು ಮುನ್ನೋಳಿ, ಸುಚಿತ ಪಾಟೀಲ, ಬಸಗೌಡ ಪಾಟೀಲ, ಶಿವನಗೌಡ ಪಾಟೀಲ, ಎಸಿಡಿಪಿಒ ಮಹಾದೇವ ಕೋಳಿ ಮತ್ತಿತರರಿದ್ದರು.





