ಹುಕ್ಕೇರಿಯಲ್ಲಿ ವಾಹನಗಳ ಡಿಕ್ಕಿ, ಜನದಟ್ಟಣೆ, ಪೊಲೀಸರ ನಿರ್ಲಕ್ಷ್ಯ

ಇಲ್ಲಿನ ಬಸ ನಿಲ್ದಾಣದ ಹತ್ತಿರ ಎರಡು ಕಾರಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ವಾಹನ ಚಾಲಕರು ಹಾಗೂ ಹಿಂಬದಿ ಕುಳಿತ ಪ್ರಯಾಣಿಕರಿಂದ ಹೊಡೆದಾಟ ಬಡಿದಾಟದಿಂದ ಸೇರಿದ ಜನ ಸಮೂಹ.  

ಶುಕ್ರವಾರದಂದು ಸಂಜೆ ನಡೆದ ಘಟನೆಯಲ್ಲಿ ಬಸ್ ನಿಲ್ದಾಣದ ಬಳಿ ಖಾಸಗಿ ವಾಹನಗಳ ನಿಲುಗಡೆಯಿಂದ ಬೇರೆ ವಾಹನಗಳು ಇಲ್ಲಿ ಸಂಚರಿಸುವುದು ಸಮಸ್ಯೆಯಾಗಿದೆ. ಇದರ ಮಧ್ಯೆ ನಿನ್ನೆ ಎರಡು ಕಾರ ವಾಹನಗಳ ಪರಸ್ಪರ ಸಾಗುವಾಗ ತರಚುವುದರ ಜತೆಗೆ ಸ್ವಲ್ಪ ಡಿಕ್ಕಿಯಾಗಿದ್ದು, ಯಾರ ಜೀವ ಹಾನಿ ಸಂಭವಿಸಿಲ್ಲ.ಆದರೆ ಡಿಕ್ಕಿಯಾದ ಎರಡು ಕಾರ ಪ್ರಯಾಣಿಕರು ಪರಸ್ಪರ ವಾಗ್ವಾದ ಪ್ರಾರಂಭಿಸಿದರು. ನಂತರ ಹೊಡೆದಾಟಕ್ಕೆ ಇಳಿದರು. ಇಂತಹ ಘಟನೆ ನಡೆದರೂ ಇಲ್ಲಿ ಬೀಟ್ ಮಾಡಬೇಕಾಗಿದ್ದ ಪೋಲಿಸ್ರು ಇರದ ಕಾರಣ ಪಾರ್ಕಿಂಗ್ ಸಮಸ್ಯೆ ತಲೆದೋರಿತು. ಎರಡು ವಾಹನಗಳ ಪ್ರಯಾಣಿಕರು ನಂತರ ತಾವೇ ಸಮಾಧಾನ ಮಾಡಿಕೊಂಡು ಹೋದರು.

         ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಈ ಘಟನೆ ನಡೆದಾಗ್ಯೂ ಇಲ್ಲಿ ಪೋಲಿಸರು ಬರದ ಕಾರಣ ಸಾರ್ವಜನಿಕರು ಹಿಡಿಶಾಪ ಹಾಕಿದ್ದು ಕಂಡುಬಂತು. ಒಟ್ಟಾರೆ ಪಾದಚಾರಿ ರಸ್ತೆ ಆಕ್ರಮಿಸಿಕೊಂಡ ಬೀದಿ ವ್ಯಾಪಾರಸ್ಥರು, ಸಾರ್ವಜನಿಕರು ದ್ವಿಚಕ್ರ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗುವುದರಿಂದ ಜನ ಜೀವಭಯದಿಂಸ ಸಂಚರಿಸಬೇಕಾಗಿದೆ.   ಬಸ್ ನಿಲ್ದಾಣ ಬೀದಿ ವ್ಯಾಪಾರಸ್ಥರ ಹಾವಳಿ, ದ್ವಿಚಕ್ರ ವಾಹನಗಳ ನಿಲುಗಡೆ ಸಮಸ್ಯೆಯನ್ನು ಪರಿಹರಿಸಬೇಕಾದ ಪೋಲಿಸ್ ಮತ್ತು ಪುರಸಭೆ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿ ಇರುವುದು ವಿಪರ್ಯಾಸ.

Join Our WhatsApp Channel
Join Now

Leave a Reply

Your email address will not be published. Required fields are marked *

error: Content is protected !!
This website uses cookies to ensure you get the best experience on our website. Details
Decline
Accept