ತಾಲೂಕಿನ ಯಾದಗೂಡ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿದ ಹುಕ್ಕೇರಿ ರೋಡ ಹೆಚ್ಚುವರಿ ಟಿ.ಸಿಯನ್ನು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ ಉದ್ಘಾಟಿಸಿದರು. ಪವನ ಕತ್ತಿ, ಶಿವನಗೌಡ ಪಾಟೀಲ, ರಾಜು ಗಿಡ್ಡಾಳಿ, ಅಲಗೌಡ ಪಾಟೀಲ, ರಾಮಣ್ಣಾ ಜನಮಟ್ಟಿ, ಕಲಗೌಡ ಪಾಟೀಲ ಇತರರಿದ್ದರು.
ಹುಕ್ಕೇರಿ :ಬೇಸಿಗೆಯಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿದ್ಯುತ್ ಅವಶ್ಯವಾಗಿ ಬೇಕಾಗುತ್ತದೆ. ವಿದ್ಯುತ್ ಉತ್ಪಾದನೆಯಲ್ಲಿಯೂ ಕೊರತೆ ಆಗುತ್ತಿರುತ್ತದೆ. ಕಾರಣ ರೈತರು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವ ಬದಲಾಗಿ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಾಗ ಸಂಘಕ್ಕೆ ವಿದ್ಯುತ್ ಬೇಡಿಕೆಯ ಅಂದಾಜು ಗೊತ್ತಾಗುತ್ತದೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ ಅಧ್ಯಕ್ಷ ಪವನ ಕತ್ತಿ ಹೇಳಿದರು.
ಗುರುವಾರದಂದು ತಾಲೂಕಿನ ಯಾದಗೂಡ ಗ್ರಾಮದಲ್ಲಿ ಹೊಸದಾಗಿ ಅಳವಡಿಸಿದ ಹುಕ್ಕೇರಿ ರೋಡ ಹೆಚ್ಚುವರಿ ಟಿ.ಸಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಟಿ.ಸಿ ಅಳವಡಿಸಲಾಗುತ್ತದೆ. ಇದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಾಧ್ಯವೆಂದರು. ಇದೇ ಸಂದರ್ಭದಲ್ಲಿ ರೈತರು ಪವನ ಕತ್ತಿ ಅವರನ್ನು ಸತ್ಕರಿಸಿದರು.ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಬಸಗೌಡ ಮಗೆನ್ನವರ ಟಿ.ಸಿ ಉದ್ಘಾಟಿಸಿದರು.
ಗ್ರಾಮ ಪಂಚಾಯತ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಅಲಗೌಡ ಪಾಟೀಲ, ಮುಖಂಡರಾದ ರಾಮಣ್ಣಾ ಜನಮಟ್ಟಿ, ಕಲಗೌಡ ಪಾಟೀಲ, ಮಹಾದೇವ ಜನಮಟ್ಟಿ, ಸುರೇಶ ಲೈನದಾರ, ಮಲ್ಲಪ್ಪಾ ಪಾಟೀಲ, ರಾಜು ಗಿಡ್ಡಾಳಿ, ವಿದ್ಯುತ್ ಸಹಕಾರಿ ಸಂಘದ ರೆಸಿಡೆಂಟ್ ಇಂಜನೀಯರ ನೇಮಿನಾಥ ಖೆಮಲಾಪುರೆ ಮತ್ತು ರೈತರಿದ್ದರು.





