ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕ ನಿಖಿಲ ಕತ್ತಿ ಅವರು ಜನರ ಅಹವಾಲು ಆಲಿಸಿದರು. ಸತ್ತೆಪ್ಪಾ ನಾಯಿಕ, ಕಲಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ಎಸ್.ಆರ್.ಕರ್ಕಿನಾಯಿಕ ಇತರರಿದ್ದರು.
ಹುಕ್ಕೇರಿ: ಹುಕ್ಕೇರಿ ಪಟ್ಟಣದ ಆಂಜನೇಯ ನಗರದಲ್ಲಿ ಅಂಗನವಾಡಿ(ಶಿಶು ವಿಹಾರ) ಅವಶ್ಯಕತೆ ಇದ್ದು ತಕ್ಷಣ ಪ್ರಾರಂಭಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ನಿಖಿಲ ಕತ್ತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಹರಿಪ್ರಸಾದ ಸಿ ಅವರಿಗೆ ಆದೇಶಿಸಿದರು.
ಸೋಮವಾರದಂದು ಸ್ಥಳೀಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಶಾಸಕರು ಮಾತನಾಡುತ್ತಾ ಆಂಜನೇಯ ನಗರ ನಿವಾಸಿಗಳು ಹಲವಾರು ಬಾರಿ ಮನವಿಸಿಕೊಂಡಿದ್ದಾರೆಂದರು.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು ಹಿರಣ್ಯಕೇಶಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ತಕ್ಷಣ ಸಂತ್ರಸ್ಥರ ನೆರವಿಗೆ ತಾಲೂಕಾಡಳಿತ ಧಾವಿಸಬೇಕೆಂದು ಸೂಚಿಸಿದ್ದೇನೆ.ಆ ನಿಟ್ಟಿನಲ್ಲಿ ತಾಲೂಕಾಡಳಿತ ಕಾರ್ಯ ಪ್ರವೃತ್ತರಾಗಿದ್ದಾರೆ. ಹಿಡಕಲ್ ಜಲಾಶಯ ಮತ್ತು ಹಿರಣ್ಯಕೇಶಿ ನದಿಯಲ್ಲಿ ಊಳು ತುಂಬಿರುವುದರಿಂದ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ.ಊಳು ತೆಗೆಯುವ ವಿಷಯ ಸುಪ್ರೀಂ ಕೋರ್ಟನಲ್ಲಿ ಇರುವುದರಿಂದ ಊಳು ತೆಗೆಯಲು ಆಗುತ್ತಿಲ್ಲ. ಕೋರ್ಟ ನಿರ್ಣಯದ ನಂತರ ಊಳು ತೆಗೆಯಲು ಒತ್ತು ನೀಡಲಾಗುತ್ತದೆ ಎಂದರು. ಹಲವು ವರ್ಷಗಳಿಂದ ನೆರೆ ಹಾವಳಿ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದ್ದು. ಆ ಗುರುತಿನ ಪ್ರಮಾಣ ಗಮನಿಸಲು ನೋಡಲ್ ಮತ್ತು ಸಹಾಯಕ ಸಿಬ್ಬಂದಿಗೆ ತಿಳಿಸಲಾಗಿದೆ ಎಂದರು.
ತಾಲೂಕಿನ ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಕುರಿತು ಜನಪ್ರನಿಧಿಗಳು ತಿಳಿಸಿದಾಗ, ಅದಕ್ಕುತ್ತರಿಸಿದ ಶಾಸಕರು ಮೊದಲ ಹಂತದಲ್ಲಿ ಅವಶ್ಯಕತೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ನೀಡಿದ್ದೇವೆ.ಇದೀಗ ಮತ್ತೆಲ್ಲಿಯಾದರೂ ಕೊರತೆ ಇದ್ದರೆ ಬಿ.ಇ.ಒ ಅವರಿಗೆ ಪರಿಶೀಲಿಸಿ ಅತಿಥಿ ಶಿಕ್ಷಕರ ಬೇಡಿಕೆಯನ್ನು ಸಲ್ಲಿಸಲು ತಿಳಿಸಿದ್ದೇನೆ ಎಂದರು.
ಪಿಕಾರ್ಡ ಬ್ಯಾಂಕ ಅಧ್ಯಕ್ಷ ದುರದುಂಡಿ ನಾಯಿಕ, ಮುಖಂಡರಾದ ಸತ್ತೆಪ್ಪಾ ನಾಯಿಕ, ಕಲಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಸುನೀಲ ನೇರಲಿ, ಶೀತಲ ಬ್ಯಾಳಿ, ಎಸ್.ಆರ್.ಕರ್ಕಿನಾಯಿಕ, ರವಿ ಪಾಟೀಲ, ಕೆಂಪಣ್ಣಾ ದೇಸಾಯಿ, ರಾಜು ಮುನ್ನೋಳಿ, ಪ್ರಶಾಂತ ಪಾಟೀಲ, ದಯಾನಂದ ಅಮ್ಮಣಗಿ, ಆನಂದ ಲಕ್ಕುಂಡಿ, ಬಸಗೌಡ ಪಾಟೀಲ, ಅಶೋಕ ಅಂಕಲಗಿ, ಶಿವನಗೌಡ ಪಾಟೀಲ, ಚಿದಾನಂದ ಹಿರೇಕೆಂಚನವರ, ಮಲ್ಲಿಕಾರ್ಜುನ ರಾಶಿಂಗೆ, ಸವಿತಾ ಏಣಗಿಮಠ, ಶಾಂತಾ ಸೊಲ್ಲಾಪೂರೆ ಮತ್ತಿತರರಿದ್ದರು.





