ಹುಕ್ಕೇರಿ ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ನಡೆದ ಬಸವ ಮೂರ್ತಿ ಪ್ರತಿಷ್ಟಾಪನೆ ಮತ್ತು ಬಸವ ವೃತ್ತ ಉದ್ಘಾಟನಾ ಕಾರ್ಯಕ್ರಮ. ಚಂದ್ರಶೇಖರ ಶಿವಾಚಾರ್ಯರು, ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಶಾಸಕ ನಿಖಿಲ ಕತ್ತಿ, ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಶೀತಲ ಬ್ಯಾಳಿ ಇತರರಿದ್ದರು.
ಹುಕ್ಕೇರಿ : ತಾಲೂಕಿನ ಶಿರಹಟ್ಟಿ ಬಿ.ಕೆ ಗ್ರಾಮದಲ್ಲಿ ಬಸವ ಮೂರ್ತಿ ಪ್ರತಿಷ್ಟಾಪನೆ ಮತ್ತು ಬಸವ ವೃತ್ತ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಬುಧವಾರದಂದು ಬಸವ ಜಯಂತಿ ದಿನದಂದು ನಡೆದ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮತ್ತು ಘಟಪ್ರಭಾ ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅವರು ಲೋಕಸಭೆ ಮತ್ತು ವಿಧಾನಸಭೆಯ ಅಧಿವೇಶನಗಳನ್ನು ನಾವು ನೋಡುತ್ತಿದ್ದೇವೆ.ಆದರೆ 12 ನೇ ಶತಮಾನದಲ್ಲಿಯೇ ಇಂತಹ ಅಧಿವೇಶನ ಮಾದರಿಯಾಗಿ ಬಸವಣ್ಣನವರು ಶರಣರ ಬಳಗ ಕಟ್ಟಿಕೊಂಡು ವಚನ ಸಾಹಿತ್ಯ ಮತ್ತು ಚರ್ಚಾಗೋಷ್ಟಿ ನಡೆಸುತ್ತಿದ್ದರು. ಜಾತ್ಯಾತೀತವಾಗಿ ನಡೆಯುತ್ತಿದ್ದ ವಚನ ಸಾಹಿತ್ಯ ಇಂದಿನ ಸಮಾಜಕ್ಕೆ ಮಾದರಿ ಮತ್ತು ಅನುಕರಣೀಯವಾಗಿದೆ ಎಂದರು.
ಶಾಸಕ ನಿಖಿಲ ಕತ್ತಿ ಅವರು ಬಸವ ಜ್ಯೋತಿ ಸ್ವಾಗತಿಸಿ ಮಾತನಾಡುತ್ತಾ ಇಂದಿನ ಯುವ ಜನಾಂಗ ಬಸವಣ್ಣನವರ ನಡೆ ನುಡಿ ಮತ್ತು ಅವರು ಕಾಯಕವೇ ಕೈಲಾಸವೆಂಬ ಉಕ್ತಿ ಅನುಸರಿಸಬೇಕು. ಆಗ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯವೆಂದರು. ಇದೇ ಸಂದರ್ಭದಲ್ಲಿ ಶ್ರೀಗಳನ್ನು ಮತ್ತು ಶಾಸಕರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ, ಅಣ್ಣಪ್ಪಾ ಬ್ಯಾಳಿ, ಆನಂದ ದಪ್ಪಾದೂಳಿ, ರಾಮಣ್ಣಾ ಗೋಟೂರಿ, ಸಿದ್ರಾಮ ಖೋತ, ಸಂಜು ಹತ್ತರವಾಟ, ಶಿವಾನಂದ ಢಂಗ, ಉದಯ ಬ್ಯಾಳಿ, ಅನೀಲ ಹುಲ್ಲೋಳಿ, ರಾಜು ಹಂಚಿನಾಳೆ, ಕಲ್ಲಪ್ಪಾ ನಾಯಿಕ, ಗುರು ಸಂಕೇಶ್ವರಿ, ಚಂದ್ರಕಾಂತ ಅಟಕರ, ವಿಠ್ಠಲ ಹೊಸಮನಿ, ಅಶೋಕ ಪಾಟೀಲ, ಶ್ರೀಶೈಲ ಶಿರಗಾಂವಿ ಮತ್ತಿತರರಿದ್ದರು.