ಹುಕ್ಕೇರಿ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶಿಲ್ಪಾ ಗೋಪಾಲ ನಿಪನ್ಯಾಳಿ ದ್ವಿತೀಯ ಪಿ.ಯು ವಾರ್ಷಿಕ ಪರೀಕ್ಷೆ ಕಲಾ ವಿಭಾಗದಲ್ಲಿ ಚಿಕ್ಕೋಡಿ ಶೈಕ್ಷಣೀಕ ಜಿಲ್ಲೆಗೆ ೧೧ ನೇ ರ‍್ಯಾಂಕ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ಕಾಲೇಜು ಸುಧಾರಣಾ ಸಮಿತಿ ಅಧ್ಯಕ್ಷರು, ಶಾಸಕರಾದ ನಿಖಿಲ ಕತ್ತಿ ತಿಳಿಸಿದರು.
ಶನಿವಾರದಂದು ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಸರಕಾರಿ ಕಾಲೇಜು ಖಾಸಗಿ ಕಾಲೇಜಿಗಳಿಗೆ ಪೈಪೋಟಿ ನೀಡುವಂತಹ ಗುಣಮಟ್ಟದ ಮತ್ತು ಸುಸಜ್ಜಿತ ಆಧುನಿಕತೆ ಅಳವಡಿಸಿಕೊಂಡಿದೆ.ವಿಜ್ಞಾನ ವಿಭಾಗದಲ್ಲಿ ಪ್ರತ್ಯೇಕ ಕಂಪ್ಯೂಟರ್ ಸಾಯನ್ಸ್ ವಿಷಯಕ್ಕೆ ಅವಕಾಶ ಇಲ್ಲಿದೆ.ಇದಕ್ಕಾಗಿ ಕಾಲೇಜಿನಲ್ಲಿ 15 ಕಂಪ್ಯೂಟರ್ ಒಳಗೊಂಡ ಆಧುನಿಕ ರೀತಿಯ ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ ಎಂದರು. ಬೇಸಿಗೆ ಬಿಡುವಿನಲ್ಲಿ ಸಿ.ಇ.ಟಿ ತರಬೇತಿಗಾಗಿ ಆನಲೈನ್ ತರಗತಿ ಪ್ರಾರಂಭಿಸಲಾಗಿದೆ.ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರಾಚಾರ್ಯ ಎಂ.ಎನ್.ನಾಯಿಕ ಅವರು ಮಾತನಾಡಿ ಕಲಾ ವಿಭಾಗ ಪ್ರತಿಶತ 78.22%, ವಾಣಿಜ್ಯ ವಿಭಾಗ 79.75% ಮತ್ತು ವಿಜ್ಞಾನ ವಿಭಾಗದಲ್ಲಿ 45.26% ಶೇಕಡಾ ಫಲಿತಾಂಶ ಬಂದಿದೆ.ಪ್ರಸಕ್ತ ವರ್ಷ 3 ವಿಭಾಗ ಸೇರಿ 536ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆಂದರು.
ಕಾಲೇಜಿನ ಸುಧಾರಣಾ ಸಮಿತಿ ಸದಸ್ಯರಾದ ಬಿ.ಎಸ್.ಮಗದುಮ್ಮ, ಪ್ರಮೋದ ಪಟ್ಟಣಶೆಟ್ಟಿ, ಅಶೋಕ ಕುಂಬಾರ, ಸವಿತಾ ಏಣಗಿಮಠ, ತ್ರಿವೇಣಿ ಕಾಂಬಳೆ, ಸಲೀಮ ನದಾಫ ಮತ್ತು ಸಿಬ್ಬಂದಿ ವರ್ಗದವರಿದ್ದರು.