ನರಹಂತಕರಿಗೆ ಉಗ್ರ ಶಿಕ್ಷೆ ಆಗಲೇ ಬೇಕು – ಅಭಿನವ ಮಂಜುನಾಥ ಶ್ರೀ

ಪಟ್ಟಣದ ಬಸವ ವೃತ್ತದಲ್ಲಿ ಹಿಂದೂ ಸಂಘಟನೆಗಳಿAದ ಹಮ್ಮಿಕೊಂಡ ಬೃಹತ್ ಪ್ರತಿಭಟನಾಯನ್ನುದ್ದೇಶಿಸಿ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿದರು. ಪರಗೌಡ ಪಾಟೀಲ, ರಾಚಯ್ಯಾ ಹಿರೇಮಠ, ಶೀತಲ ಬ್ಯಾಳಿ, , ಅಪ್ಪುಸ ತುಬಚಿ, ಸುಹಾಸ ನೂಲಿ ಇತರರಿದ್ದರು

ಹುಕ್ಕೇರಿ : ಕಾಶ್ಮೀರದ ಪಹಲ್ಗಾವದಲ್ಲಿ ಬಂದ ಪ್ರವಾಸಿಗರಲ್ಲಿ ಹಿಂದೂ ಧರ್ಮದವರನ್ನು ಹುಡುಕಿ ಹುಡುಕಿ ಕೊಂದ ಪಾಕ ಪ್ರಾಯೋಜಿತ ಉಗ್ರಗಾಮಿಗಳಿಗೆ ಭಾರತ ಸರಕಾರ ತಕ್ಕ ಶಾಸ್ತಿ ಮಾಡಬೇಕು.ಇದರ ಜತೆಗೆ ಅವರಿಗೆ ಪ್ರಚೋದನೆ ಮತ್ತು ನೆರವು ನೀಡಿದವರಿಗೆ ಎಂದು ಮರೆಯಲಾರದಂತಹ ಪಾಠ ಕಲಿಸಬೇಕೆಂದು ಕ್ಯಾರಗುಡ್ಡ ಅವಜೀಕರ ಆಶ್ರಮದ ಮಂಜುನಾಥ ಶ್ರೀಗಳು ಹೇಳಿದರು.

ಪಟ್ಟಣದ ಬಸವ ವೃತ್ತದಲ್ಲಿ ಶನಿವಾರದಂದು ತಾಲೂಕಿನ ವಿವಿಧ ಹಿಂದೂ ಸಂಘಟನೆಗಳು ಹಮ್ಮಿಕೊಂಡ ಪ್ರತಿಭಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಹಿಂದೂಗಳು ಶಾಂತಿಪ್ರಿಯರೆAದು ಕೆಲ ಕೋಮಿನವರು ಇಂತಹ ಹತ್ಯೆಗಳನ್ನು ನಡೆಸುತ್ತಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಇನ್ನಾದರೂ ಇಂತಹ ಉಗ್ರಗಾಮಿಗಳಿಗೆ ಎಂದೂ ಮರೆಯಲಾಗದಂತಹ ಪಾಠ ಕಲಿಸಬೇಕು.ದೇಶದ 140 ಕೋಟಿ ಜನರ ಮನಸ್ಸು ಮತ್ತು ಬೆಂಬಲ ಪ್ರಧಾನಿಯವರು ಕೈಗೊಳ್ಳುವ ಯಾವುದೇ ಕ್ರಮಕ್ಕೆ ನೀಡುತ್ತೇವೆ ಎಂದಿರುವರು.ಕಾರಣ ಪಾಕಿಸ್ತಾನ ದೇಶಕ್ಕೂ ಮತ್ತು ಉಗ್ರಗಾಮಿಗಳು ಇನ್ನೆಂದೂ ಇಂತಹ ಹೇಯ ಕೃತ್ಯ ಮಾಡದಂತಹ ಶಿಕ್ಷೆ ವಿಧಿಸಬೇಕೆಂದರು.

ರಾಷ್ಟೀಯ ಸ್ವಯಂ ಸೇವಕ ಸಂಘದ ಹುಕ್ಕೇರಿ ತಾಲೂಕಾ ಕಾರ್ಯವಾ ಮಲ್ಲಿಕಾರ್ಜುನ ಬಸ್ತವಾಡೆ ಹಾಗೂ ಭಜರಂಗ ದಳದ ವಿಭಾಗೀಯ ಪ್ರಮುಖರಾದ ಲಕ್ಷ್ಮಣ ಮಿಸಾಳೆ ಮತ್ತು ಬಿಜೆಪಿ ಮುಖಂಡ ಗುರುರಾಜ ಕುಲಕರ್ಣಿ ಮಾತನಾಡಿ ಪಾಕಿಸ್ತಾನ ದೇಶ ಮುಸ್ಲಿಂ ಯುವಕರಿಗೆ ಇಲ್ಲದ ಆಮಿಷ ತೋರಿಸುವುದರ ಜತೆಗೆ ಅವರಿಗೆ ಮರಣಿಸಿದ ಬಳಿಕ ಸ್ವರ್ಗವಾಸಿಗಳಾಗಿ ಸುಖದಲ್ಲಿ ತೇಲಾಡುವಿರೆಂಬ ಭ್ರಮೆ ಮೂಡಿಸಿ ಉಗ್ರಗಾಮಿ ಚಟುವಟಿಕೆಗಳಿಗೆ ತೊಡಗಿಸುತ್ತಿದ್ದಾರೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಕೊಂದು ಅವರನ್ನು ಹಂದಿ ಚರ್ಮದಲ್ಲಿ ಸುತ್ತಿ ಅಂತ್ಯಕ್ರಿಯೆ ನಡೆಸಬೇಕು.ಆಗ ಮಾತ್ರ ಈ ಚಟುವಟಿಕೆಗಳಿಗೆ ಕಡಿವಾಣ ಬೀಳುತ್ತದೆ ಎಂದರು.

ಪ್ರಾರಂಭದಲ್ಲಿ ಸ್ಥಳೀಯ ಅಡವಿಸಿದ್ದೇಶ್ವರ ಮಠದ ಬಳಿ ಸೇರಿದ ಹಿಂದೂ ಸಂಘಟನೆಯ ಬೃಹತ್ ಪ್ರತಿಭಟನಾ ಮೆರವಣಿಗೆಗೆ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ಬಸವ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿತು.ನಂತರ ಗ್ರೇಡ್ 2 ತಹಸೀಲ್ದಾರ ಪ್ರಕಾಶ ಕಲ್ಲೋಳಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಪರಗೌಡ ಪಾಟೀಲ, ರಾಚಯ್ಯಾ ಹಿರೇಮಠ, ಶೀತಲ ಬ್ಯಾಳಿ, ಭೀಮಗೌಡ ಗಿರಿಗೌಡನವರ, ಅಪ್ಪುಸ ತುಬಚಿ, ಸುಹಾಸ ನೂಲಿ, ಶಿವರಾಜ ನಾಯಿಕ, ರಾಜು ಮುನ್ನೋಳಿ, ಡಾ.ಸೋಹನ ವಾಗೋಜಿ, ಮಹಾಂತೇಶ ಬೆಟಗೇರಿ, ವಿರೇಶ ಗಜಬರ, ಚನ್ನಪ್ಪಾ ಗಜಬರ, ಆನಂದ ಲಕ್ಕುಂಡಿ, ಶಂಕರ ಪಟ್ಟಣಶೆಟ್ಟಿ, ಸಿದ್ದು ಬೆನ್ನಾಡಿಕರ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: Content is protected !!