ನವದೆಹಲಿಯಲ್ಲಿ ಕೇಂದ್ರ ಸರಕಾರದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿ ಸೋಲಾರ ಮತ್ತು ವಿಂಡ್ ಪವರ ಯೋಜನೆಯಡಿ ಹುಕ್ಕೇರಿ ತಾಲೂಕನ್ನು ಪೈಲಟ್ ತಾಲೂಕ ಘೋಷಿಸಲು ಶಾಸಕ ನಿಖಿಲ ಕತ್ತಿ ಮನವಿಸಿಕೊಂಡರು.
ಹುಕ್ಕೇರಿ : ತಾಲೂಕಿನ ರೈತರು ಮತ್ತು ಮನೆ ಬಳಕೆದಾರರಿಗೆ ದಿನದ 24 ತಾಸು ವಿದ್ಯುತ್ ಪೂರೈಸುವ ನೂತನ ಯೋಜನೆಗೆ ಕೇಂದ್ರ ಸರಕಾರ ಸಹಕರಿಸುವುದರ ಜತೆಗೆ ಅನುಮತಿಸಬೇಕೆಂದು ಕೇಂದ್ರ ಸರಕಾರದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಶಾಸಕ ನಿಖಿಲ ಕತ್ತಿ ಮನವಿಸಿಕೊಂಡಿದ್ದಾರೆ.
ಇತ್ತೀಚೆಗೆ ನವದೆಹಲಿಯಲ್ಲಿ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿದ ಶಾಸಕ ನಿಖಿಲ ಕತ್ತಿ ಅವರು ಸಹಕಾರಿ ತತ್ವದಡಿ ಗ್ರಾಹಕರಿಗೆ ಮತ್ತು ರೈತರಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ದೇಶದ ಏಕೈಕ ಸಂಸ್ಥೆಯಾಗಿದೆ ಎಂದು ಸಂಘದ ಕಾರ್ಯವನ್ನು ವಿವರಿಸುತ್ತಾ ಸರಕಾರದ ಮಾರ್ಗಸೂಚಿಯಂತೆ ತಾಲೂಕಿನ 123 ಗ್ರಾಮಗಳಿಗೆ ಹಾಗೂ ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ, ಕಣಗಲಾ ಕೈಗಾರಿಕಾ ಪ್ರದೇಶಕ್ಕೆ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದಿAದ ನಿರಂತರ ಜ್ಯೋತಿ ಯೋಜನೆಯಡಿ ದಿನದ 24 ಗಂಟೆ ಮತ್ತು ರೈತರ 35 ಸಾವಿರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಪಂಪಸೆಟ್‌ಗಳಿಗೆ 51 ಮೆ.ವ್ಯಾ ವಿದ್ಯುತ್‌ನ್ನು ರಾಜ್ಯ ಸರಕಾರ ನೀಡುತ್ತಿದೆ. ಆದರೆ ಇದಕ್ಕೆ ದಿನದ 24 ತಾಸು ವಿದ್ಯುತ್ ಸರಬರಾಜು ಮಾಡಲು ಹೆಚ್ಚುವರಿಯಾಗಿ 100 ಮೆ.ವ್ಯಾ ವಿದ್ಯುತ್ ಅವಶ್ಯಕತೆ ಇದೆ. ತಾಲೂಕಿನ ಗ್ರಾಮದ 87 ಸಾವಿರ ಮನೆಗಳಿಗೆ 11 ಮೆ.ವ್ಯಾ ವಿದ್ಯುತ್ ಒದಗಿಸುತ್ತಿದ್ದು ಇದರ ಜೊತೆಗೆ ತೋಟಪಟ್ಟಿಯ ಮನೆಗಳಿಗೆ 14 ಸಾವಿರ ಮನೆಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಪೂರೈಸಲು ಅಂದಾಜು 05 ಮೆ.ವ್ಯಾ ವಿದ್ಯುತ್ ಬೇಕಾಗುತ್ತದೆ. ತೋಟಪಟ್ಟಿಯ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಬೇಕಾದ ಮೂಲ ಸೌಕರ್ಯ ಕಲ್ಪಿಸಲು ೪೫ ಕೋಟಿ ರೂ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.ಆದರೆ ರಾಜ್ಯ ಸರಕಾರ ಅದನ್ನು ಅನುಮತಿಸಿಲ್ಲ.ಅದಕ್ಕಾಗಿ ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ದೇಶದ ಏಕೈಕ ಸಂಘಕ್ಕೆ ಕೇಂದ್ರ ಸರಕಾರ ಸೋಲಾರ ಮತ್ತು ವಿಂಡ್ ಪವರ ಯೋಜನೆಯಡಿ ಹುಕ್ಕೇರಿ ತಾಲೂಕನ್ನು “ಪೈಲಟ್ ತಾಲೂಕಾ” ಎಂದು ಘೋಷಿಸಿ ಸಂಘಕ್ಕೆ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯ ಕಲ್ಪಸಬೇಕೆಂದು ವಿನಂತಿಸಿಕೊಂಡರು.
ಕೇಂದ್ರ ಸರಕಾರದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ಸಂಘದ ಕಾರ್ಯ ವಿಶಿಷ್ಟ ಮತ್ತು ಮಾದರಿಯಾಗಿದೆ.ಕಾರಣ ತಮ್ಮ ಬೇಡಿಕೆಗೆ ವಿಶೇಷ ಆದ್ಯತೆ ನೀಡಿ ಪೈಲಟ್ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವೆ ಎಂದು ಭರವಸೆಯಿತ್ತರು.