ಪಟ್ಟಣದ ಪಿ.ಎಲ್.ಡಿ ಬ್ಯಾಂಕ ಮೇಲಂತಸ್ತಿನಲ್ಲಿ ಶಾಸಕ ನಿಖಿಲ ಕತ್ತಿ ಅವರ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ರಾಚಯ್ಯಾ ಹಿರೇಮಠ, ಸತ್ತೆಪ್ಪಾ ನಾಯಿಕ, ಗುರು ಕುಲಕರ್ಣಿ, ಶೀತಲ ಬ್ಯಾಳಿ ಇತರರಿದ್ದರು.
ಹುಕ್ಕೇರಿ : ಪಟ್ಟಣದ ಪಿ.ಎಲ್.ಡಿ ಬ್ಯಾಂಕಿನ ಮೇಲಂತಸ್ತಿನಲ್ಲಿ ಹುಕ್ಕೇರಿ ಮತಕ್ಷೇತ್ರದ ಶಾಸಕರ ನೂತನ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಬುಧವಾರದಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸಕ ನಿಖಿಲ ಕತ್ತಿ ಅವರು ಈ ಮೊದಲು ತಾ.ಪಂ ಕಚೇರಿ ಆವರಣದಲ್ಲಿ ಸರಕಾರದಿಂದ ಮಂಜೂರಿಯಾದ ಶಾಸಕರ ಕಚೇರಿ ಶಿಥಿಲಾವಸ್ಥೆಯಲ್ಲಿತ್ತು.ಕಾರಣ ಇದೀಗ ಸುಸಜ್ಜಿತ ಮತ್ತು ನೂತನವಾಗಿ ನಿರ್ಮಿಸಿದ ಪಿ.ಎಲ್.ಡಿ ಬ್ಯಾಂಕ ಮೇಲಂತಸ್ತಿನಲ್ಲಿ ಕಾರ್ಯಾಲಯ ಪ್ರಾರಂಭಿಸಲಾಗಿದೆ. ನಮ್ಮ ತಂದೆ ದಿ.ಉಮೇಶ ಕತ್ತಿ ಅವರು 8 ಬಾರಿ ಶಾಸಕರಾಗಿ ಸಚಿವರಾಗಿದ್ದಾಗಲೂ ಈ ಬ್ಯಾಂಕಿನ ಆವರಣದಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದರು.ನಾನು ಆಯ್ಕೆಯಾದ ಬಳಿಕ ಸಹ ಅದೇ ಪದ್ದತಿಮುಂದುವರೆಸಿಕೊಂಡು ಬಂದಿರುವೆ ಎಂದರು.ಇದರಿಂದ ಈ ಕಾರ್ಯಾಲಯ ಕ್ಷೇತ್ರದ ಜನರಿಗೆ ಹೊಸತು ಎನಿಸುವುದಿಲ್ಲ.ಎಂದಿನಂತೆ ಪ್ರತಿ ಸೋಮವಾರ ಇಲ್ಲಿ ಕ್ಷೇತ್ರದ ಜನರ ಕುಂದು ಕೊರತೆ ಆಲಿಸಿ ಪರಿಹರಿಸುತ್ತೇನೆ.ಉಳಿದಂತೆ ಕ್ಷೇತ್ರದಲ್ಲಿ ಇದ್ದಾಗ ಇಲ್ಲಿ ಬಂದು ಜನಸಂಪರ್ಕ ಸಭೆ ನಡೆಸುವುದಾಗಿ ತಿಳಿಸಿದರು

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪರವಾಗಿ ಮುಖಂಡರು ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು.ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸತ್ತೆಪ್ಪಾ ನಾಯಿಕ ಉದ್ಘಾಟಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ರಾಚಯ್ಯಾ ಹಿರೇಮಠ, ಮುಖಂಡರಾದ ಸತ್ತೆಪ್ಪಾ ನಾಯಿಕ, ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ರಾಜು ಮುನ್ನೋಳಿ, ಚನ್ನಪ್ಪಾ ಗಜಬರ, ಜ್ಯೋತಿಭಾ ದುಪ್ಪಟ್ಟಿ, ಮಾಯಪ್ಪಾ ಹೊಳೆಪ್ಪಗೋಳ, ಗೈಬುಸಾಬ ಅಮ್ಮಣಗಿ, ಮತ್ತಿತರರಿದ್ದರು.