ತಾಲ್ಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ‘ವಾರ್ಷಿಕ ವಿಶೇಷ ಶಿಬಿರ’ವನ್ನು ಶಾಸಕ ನಿಖಿಲ ಕತ್ತಿ ಉದ್ಘಾಟಿಸಿದರು. ವಿಜಯಲಕ್ಷ್ಮೀ ನೊಗನಿಹಾಳ, ಭೀಮಗೌಡ ಪಾಟೀಲ, ಕಾಡಪ್ಪಾ ಕುಗಟೋಳಿ, ರಾಮಪ್ಪಾ ಹುದ್ದಾರ ಇತರರಿದ್ದರು.
ಹುಕ್ಕೇರಿ: ಆರೋಗ್ಯಕರ ಜೀವನ ನಡೆಸಲು ಸಾರ್ವಜನಿಕರು ತಮ್ಮ ಮನೆಯ ಕಸವನ್ನು ಪಕ್ಕದ ಜಾಗೆಯಲ್ಲಿ ಅಥವಾ ಎಲ್ಲೆಂದರಲ್ಲಿ ಎಸೆಯದೆ ನಿರ್ಧಿಷ್ಟ ಸ್ಥಳದಲ್ಲಿ ಹಾಕಿ ಆರೋಗ್ಯಯುತ ವಾತಾವರಣ ನಿರ್ಮಿಸಲು ಸಹಕರಿಸಿ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು..
ಸೋಮವಾರ ತಾಲ್ಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ‘ವಾರ್ಷಿಕ ವಿಶೇಷ ಶಿಬಿರ’ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇರಿಸುವ, ಗಿಡ ಮರ ಉಳಿಸಿ ಬೆಳೆಸುವ, ಪ್ರಕೃತಿ ಪ್ರೀತಿಸುವ ಮನೋಭಾವನೆ ಜನರಲ್ಲಿ ಮೂಡುವಂತೆ ಯುವಕರು ಮುತುವರ್ಜಿ ವಹಿಸಿ ತಿಳಿವಳಿಕೆ ನೀಡುವಂತೆ ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ, ಹುಲ್ಲೋಳಿ ಗ್ರಾಮ ಪಂಚಾಯ್ತಿ ಸದಸ್ಯ ಕಲ್ಮೇಶ ಅಮ್ಮಣಗಿ ಸ್ವಯಂ ಸೇವಕರನ್ನು ಉದ್ಧೇಶಿಸಿ ಮಾತನಾಡಿದರು. ಪ್ರಾಚಾರ್ಯ ಪ್ರಕಾಶ್ ಲಕ್ಷೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿಜಯಲಕ್ಷ್ಮೀ ನೊಗನಿಹಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಭೀಮಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಕಾಡಪ್ಪ ಕುಗಟೋಳಿ, ಎಸ್.ಎ.ಕುಗಟೋಳಿ, ರಾಮಪ್ಪ ಹುದ್ದಾರ, ಪುರಸಭೆ ಸದಸ್ಯ ರಾಜು ಮುನ್ನೋಳಿ, ಸಿಡಿಸಿ ಸದಸ್ಯ ಸುಹಾಸ ನೂಲಿ, ಮುಖಂಡರಾದ ಅಪ್ಪಾಸಾಹೇಬ ಅಮ್ಮಣಗಿ, ಸದಾಶಿವ ಹೆಬ್ಬಾಳಿ, ದುಂಡಗೌಡ ಪಾಟೀಲ, ಶಿವಗೌಡ ಅಮ್ಮಣಗಿ, ಸತ್ಯಪ್ಪ ಹೆಬ್ಬಾಳಿ, ಸತ್ಯಪ್ಪ ಪಾಟೀಲ, ಸಿದ್ದಪ್ಪ ಕುಗಟೋಳಿ, ಮತ್ತಿತರರಿದ್ದರು. ಶಿಲ್ಪಾ ಪಾಟೀಲ ಪ್ರಾರ್ಥಿಸಿದರು. ಎನ್.ಎಸ್.ಎಸ್. ಅಧಿಕಾರಿ ರವಿ ಪಾಟೀಲ ಸ್ವಾಗತಿಸಿದರು. ಪ್ರೊ.ಆನಂದ ಎನ್ ನಿರೂಪಿಸಿದರು. ಪ್ರೊ.ಸಂದೀಪ ಸಾಳುಂಕೆ ವಂದಿಸಿದರು.