ಹುಕ್ಕೇರಿ ತಹಶೀಲ್ದಾರ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಧಿಡೀರ್ ಭೇಟಿ, ದಾಖಲೆಗಳ ಪರಿಶೀಲನೆ

ಹುಕ್ಕೇರಿ : ರಾಜ್ಯ ಲೋಕಾಯುಕ್ತ ಇಲಾಖೆ ನಿರ್ದೇಶನದ ಮೇರೆಗೆ ಹುಕ್ಕೇರಿ ತಹಸೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆಯನ್ನು ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳ ತಂಡ ಕೈಗೊಂಡಿದೆ ಎಂದು ಡಿ.ವೈ.ಎಸ್.ಪಿ ಭರತರೆಡ್ಡಿ ತಿಳಿಸಿದರು.

ಸೋಮವಾರದಂದು ಅನಿರೀಕ್ಷಿತವಾಗಿ ಮಿನಿ ವಿಧಾನಸೌಧದಲ್ಲಿನ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿದ ಬೆಳಗಾವಿ ಲೋಕಾಯುಕ್ತ ಅಧಿಕಾರಿಗಳ ತಂಡ ಕಂದಾಯ ಇಲಾಖೆಯ ಎಲ್ಲ ವಿಭಾಗಗಳಲ್ಲಿ ಕಡತ ಮತ್ತು ದಾಖಲೆಗಳ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಕಡತಗಳ ವಿಲೇವಾರಿಗೆ ವಿಳಂಬ, ಸಾರ್ವಜನಿಕರಿಗೆ ಸರಕಾರದಿಂದ ದೊರಕಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಕ್ಕಿವೆ ಎಂಬುದನ್ನು ಪರಿಶೀಲಿಸಿ ಮಾಹಿತಿ ಪಡೆದರು. ತಹಸೀಲ್ದಾರ ಮಂಜುಳಾ ನಾಯಕ ಮಧ್ಯಾಹ್ನ ಆದರೂ ಕಾರ್ಯಾಲಯಕ್ಕೆ ಆಗಮಿಸದಿರುವುದು ಮತ್ತು ಅವರ ಅನುಪಸ್ಥಿತಿ ಕುರಿತು ಮೇಲಾಧಿಕಾರಿಗಳಿಗೆ ವರದಿ ಮಾಡುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೆಲ ಸಾರ್ವಜನಿಕರು ತಹಸೀಲ್ದಾರ ಕೊಠಡಿ ಮೇಲಂತಸ್ತಿಗೆ ಸ್ಥಳಾಂತರಿಸಿರುವುದರಿಂದ ವಿಕಲಚೇತನ ಮತ್ತು ವಯೋವೃದ್ಧರಿಗೆ ಸಮಸ್ಯೆ ಆಗುತ್ತಿದೆ ಎಂದು ದೂರಿದರು. ತಹಶೀಲ್ದಾರರು ಕಾರ್ಯಾಲಯದಲ್ಲಿ ಇರುವುದಿಲ್ಲ, ಬೆಳಗಾವಿ ವಾಸಸ್ಥಳ ಮಾಡಿಕೊಂಡು ಹೋಗಿ ಬರುವುದು ಮಾಡುತ್ತಿರುವರು.ತಹಸೀಲ್ದಾರರಿಗೆ ಸರಕಾರದಿಂದ ವಸತಿ ಗೃಹ ಇದ್ದರೂ ಅವರು ಇಲ್ಲ್ಲಿ ನಾಮಕಾವಸ್ಥೆ ಇರುತ್ತಾರೆಂದು ಲೋಕಾಯುಕ್ತ ಅಧಿಕಾರಿಗಳ ಬಳಿ ಆಕ್ಷೇಪಿಸಿದ್ದಾರೆ.

ಡಿ.ವೈ.ಎಸ್.ಪಿ.ಪುಷ್ಪಲತಾ ಎಸ್, ಇನಸ್ಪೆಕ್ಟರ್‌ಗಳಾದ ವೆಂಕಟೇಶ ಯಡಹಳ್ಳಿ, ಸಂಗಮನಾಥ ಹೊಸಮನಿ, ಸಿಬ್ಬಂದಿಗಳಾದ ಎಸ್.ಎಸ್.ಪೂಜೇರಿ, ಪ್ರಕಾಶ ಮಾಳಿ ಇತರರಿದ್ದರು.

ಲೋಕಾಯುಕ್ತರ ಅನಿರೀಕ್ಷಿತ ಭೇಟಿ ಸಮಯದಲ್ಲಿ ತಹಶೀಲ್ದಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು, ಮಧ್ಯಾನ್ಹದ ನಂತರ ತಹಶೀಲ್ದಾರ ಮಂಜುಳಾ ನಾಯಕ ಆಗಮಿಸಿ ಲೋಕಾಯುಕ್ತರನ್ನು ಭೇಟಿಯಾದರು.

ಲೋಕಾಯುಕ್ತರ ಅನಿರೀಕ್ಷಿತ ಭೇಟಿ ಸಮಯದಲ್ಲಿ ತಹಶೀಲ್ದಾರರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು, ಮಧ್ಯಾನ್ಹದ ನಂತರ ತಹಶೀಲ್ದಾರ ಮಂಜುಳಾ ನಾಯಕ ಆಗಮಿಸಿ ಲೋಕಾಯುಕ್ತರನ್ನು ಭೇಟಿಯಾದರು.

One thought on “ಹುಕ್ಕೇರಿ ತಹಶೀಲ್ದಾರ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ಧಿಡೀರ್ ಭೇಟಿ, ದಾಖಲೆಗಳ ಪರಿಶೀಲನೆ

  1. ಸ್ಥಳೀಯ ತಹಸೀಲ್ದಾರ ಕಾರ್ಯಾಲಯದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದ್ದು, ಇದು ಸಾರ್ವಜನಿಕರ ಸೇವೆಗೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯ. ತಹಸೀಲ್ದಾರರ ಅನುಪಸ್ಥಿತಿ ಸಮಸ್ಯೆಯನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯಗಳು ಹೊಮ್ಮುತ್ತಿವೆ. ಸಾರ್ವಜನಿಕರಿಗೆ ಲಭ್ಯವಾಗಬೇಕಾದ ಸೌಲಭ್ಯಗಳು ಸರಿಯಾಗಿ ನೀಡಲ್ಪಡುತ್ತಿವೆಯೇ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಲೋಕಾಯುಕ್ತ ಅಧಿಕಾರಿಗಳ ಈ ಕ್ರಮವು ಸರ್ಕಾರಿ ಕಚೇರಿಗಳ ಕಾರ್ಯಕ್ಷಮತೆಯನ್ನು ಹೇಗೆ ಸುಧಾರಿಸಬಹುದು?

Leave a Reply

Your email address will not be published. Required fields are marked *

error: Content is protected !!