ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಶಾಸಕ ನಿಖಿಲ ಕತ್ತಿ ಅವರನ್ನು ಸನ್ಮಾನಿಸಿದರು. ಸುರೇಶ ವಂಟಮೂರಿ, ಅಶೋಕ ಪಾಟೀಲ, ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ಆನಂದ ಲಕ್ಕುಂಡಿ ಇತರರಿದ್ದರು.
ಭಾರತೀಯ ಪರಂಪರೆಯಲ್ಲಿ ಜಾತ್ರೆ, ಧಾರ್ಮಿಕ ಸಭೆ ಸಮಾರಂಭಗಳಿಗೆ ಹೆಚ್ಚಿನ ಆದ್ಯತೆ.ಇದರಿಂದ ಒಳ್ಳೆಯ ಆಚಾರ ವಿಚಾರ ಮತ್ತು ಸಂಸ್ಕೃತಿ ಬೆಳೆಯುತ್ತದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಸೋಮವಾರದಂದು ತಾಲೂಕಿನ ಬಸ್ತವಾಡ ಗ್ರಾಮದ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ರಾಜ್ಯ ಗಡಿಭಾಗವಾಗಿರುವ ನಮ್ಮ ತಾಲೂಕು ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಸರಾಗಿದೆ.ಪ್ರತಿಯೊಂದು ಗ್ರಾಮದಲ್ಲಿ ಬೇಸಿಗೆ ಬಿಡುವಿನಲ್ಲಿ ಜಾತ್ರೆಗಳು ಜರುಗುತ್ತವೆ.ಇಂತಹ ಸಂದರ್ಭದಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಸೌಹಾರ್ದಯುತವಾಗಿ ಜಾತ್ರಾ ಮಹೋತ್ಸವ ಆಚರಿಸುವುದು ಶ್ಲಾಘನೀಯವೆಂದರು.ಇದೇ ಸಂದರ್ಭದಲ್ಲಿ ಕಾಡಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ದಾರ ಸಮಿತಿಯಿಂದ ಶಾಸಕರನ್ನು ಸತ್ಕರಿಸಿದರು.
ತಾಲೂಕಿನ ಬಸ್ತವಾಡ ಗ್ರಾಮದೇವರಾದ ಕಾಡಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ (ಯುಗಾದಿ ಅಮವಾಸ್ಯೆಯಿಂದ) ಶನಿವಾರ ಮಾ.29 ರಿಂದ ಬುಧವಾರ ಎ.2 ರವರೆಗೆ 5 ದಿನಗಳ ಕಾಲ ಸಂಭ್ರಮದಿಂದ ಜರುಗುತ್ತದೆ.
ವಿಧಾನ ಪರಿಷತ್ ಸದಸ್ಯ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ದೇವರ ಆಶೀರ್ವಾದ ಪಡೆದರು.
ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಸುರೇಶ ವಂಟಮೂರಿ, ಆನಂದ ಲಕ್ಕುಂಡಿ, ಅಶೋಕ ಪಾಟೀಲ, ಸಂಜು ಮಗದುಮ್ಮ, ಶಂಕರಗೌಡ ಪಾಟೀಲ, ದಾನಯ್ಯಾ ಮಠದ, ಬಸ್ಸಯ್ಯಾ ಪೂಜೇರಿ, ವಿನಾಯಕ ವಂಟಮೂರಿ ಮುಖಂಡರಾದ ಪರಗೌಡ ಪಾಟೀಲ, ಗುರುರಾಜ ಕುಲಕರ್ಣಿ, ರಾಜು ಮುನ್ನೋಳಿ ಮತ್ತಿತರರಿದ್ದರು.