ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಸಂಭ್ರಮದ ಹನುಮ ಜಯಂತಿ

ಶಕುಂತಲಾ ರಾಮದುರ್ಗ, ಪ್ರಿಯಂಕಾ ವಿನಾಯಕ ಶೆಟ್ಟಿ, ಶೋಭಾ ರಾಮದುರ್ಗ, ಬೆಲ್ಲದ, ಕುಲಕರ್ಣಿ ಕುಟುಂಬದವರು ಮತ್ತು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.

ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು.

ಗ್ರಾಮದ ಹನುಮ ಮಂದಿರದಲ್ಲಿ ಮಹಿಳೆಯರು ಬಾಲ ಹನುಮನನ್ನ ತೊಟ್ಟಿಲಿಗೆ ಹಾಕಿ ನಾಮಕರಣ ಮಾಡಿ ಸಂಭ್ರಮಿಸಿದರು. ಈ ವೇಳೆ ಲಕ್ಷ್ಮಣ ರಾಮದುರ್ಗ ಕುಟುಂಬಸ್ಥರು ಹನುಮನಿಗೆ ಮಹಾಭಿಷೇಕ ನೆರವೇರಿಸಿದರು.

ದೇವಸ್ಥಾನದಲ್ಲಿ ಹನುಮನಿಗೆ ವಿಶೇಷ ಪೂಜೆ, ಪಂಚಾಮೃತ ಅಭಿಷೇಕ, ಹೋಮ‌-ಹವನ ಸೇರಿದಂತೆ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ಜರುಗಿದವು. ನೂರಾರು ಮಹಿಳೆಯರು ಹನುಮನ ನಾಮಸ್ಮರಣೆ ಮಾಡುವ ಮೂಲಕ ಭಕ್ತಿಯಲ್ಲಿ ಮಿಂದೆದ್ದು ಅರ್ಥಪೂರ್ಣವಾಗಿ ಹನುಮ ಜಯಂತಿಯನ್ನ ಆಚರಿಸಲಾಯಿತು. ಇದಕ್ಕೂ ಮೊದಲು ಗ್ರಾಮದಲ್ಲಿ ವಿವಿಧ ವಾಧ್ಯಮೇಳಗಳೊಂದಿಗೆ ಮಹಿಳೆಯರಿಂದ ಕುಂಭಮೇಳ ಮೆರವಣಿಗೆ ಸಡಗರ ಸಂಭ್ರಮದಿಂದ ನಡೆಯಿತು.

Leave a Reply

Your email address will not be published. Required fields are marked *

error: Content is protected !!