ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕಿಗೆ ರೂ.2 ಕೋಟಿ 75 ಲಕ್ಷ ನಿವ್ವಳ ಲಾಭ: ಪವನ ಕತ್ತಿ

ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕಿನಲ್ಲಿ ಸುದ್ದಿಗಾರರೊಂದಿಗೆ ಚೇರಮನ್ ಪವನ ಕತ್ತಿ ಮಾತನಾಡಿದರು.ನಿರ್ದೇಶಕರು, ಸಿಬ್ಬಂದಿಗಳಿದ್ದರು.

ಹುಕ್ಕೇರಿ : ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ರೂ. 591.63 ಲಕ್ಷ ಲಾಭ ಗಳಿಸಿರುತ್ತದೆ. ಅದರಲ್ಲಿ ಶಾಸನಬದ್ದ ಪ್ರಾವಧಾನಗಳನ್ನು ವರ್ಗಾವಣೆ ಮಾಡಿದ ನಂತರ ರೂ. 2.75 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಚೇರಮನ್ ಪವನ ಕತ್ತಿ ತಿಳಿಸಿದರು.

ಶನಿವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ಬ್ಯಾಂಕಿನ ಸಭಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ೪೦ ಕೋಟಿ ೨೯ ಲಕ್ಷ ಸ್ವಂತ ಬಂಡವಾಳದೊAದಿಗೆ ರೂ. 544 ಕೋಟಿ 14ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ರೂ. 491 ಕೋಟಿ 59 ಲಕ್ಷ ಠೇವು ಸಂಗ್ರಹಿಸಿ ರೂ. 276 ಕೋಟಿ 53 ಲಕ್ಷ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿಯಲ್ಲಿ 100ಕ್ಕೆ ಪ್ರತಿ ಶತ 99.89% ಸಾಲ ವಸೂಲಾತಿ ಮಾಡಿ ದಾಖಲೆ ನಿರ್ಮಿಸಿದೆ ಎಂದರು. ಈ ಪ್ರಗತಿಗೆ ಮಾಜಿ ಸಂಸದ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ ಇವರ ಮಾರ್ಗದರ್ಶನ, ನಿರ್ದೇಶಕರ ನಿಸ್ವಾರ್ಥ ಸೇವೆ, ಸದಸ್ಯರ, ಗ್ರಾಹಕರ ಅಭಿಮಾನ ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವಾ ಮನೋಭಾವವೇ ಕಾರಣವೆಂದರು. ಬ್ಯಾಂಕಿನ ನಿವ್ವಳ ಎನ್‌ಪಿಎ ಶೂನ್ಯ ಇರುವುದು ಬ್ಯಾಂಕಿನ ಮತ್ತೊಂದು ವಿಶೇಷ. ಸಿಬ್ಬಂದಿಗೆ 25% ಬೊನಸ್ಸು ಮತ್ತು ಎಕ್ಸ್-ಗ್ರೇಷಿಯಾ ನೀಡಿದ್ದೇವೆ ಎಂದು ಹೇಳಿದರು. ೮ನೇ ವೇತನವನ್ನು ಜಾರಿ ಮಾಡಿದ ಜಿಲ್ಲೆಯ ಮೊದಲ ಬ್ಯಾಂಕ್ ಇದಾಗಿದೆ ಎಂದು ನುಡಿದ ಅವರು ಮುಂದಿನ ದಿನಗಳಲ್ಲಿ ಮತ್ತೇ ೫ ಶಾಖೆಗಳನ್ನು ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಬರುವ 5 ವರ್ಷಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಸೇವೆಯನ್ನು ನೀಡುವ ಹೆಬ್ಬಯಕೆ ಹೊಂದಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಸ್.ಎಸ್.ಪಾಟೀಲ, ಎಂ.ಎಸ್.ಬೆಲ್ಲದ,ಡಾ.ಎಂ.ಎಸ್.ಮುನ್ನೋಳಿ,ಆರ್.ಟಿ.ಶಿರಾಳಕರ,ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರಗೇಶ ಕತ್ತಿ, ಎಂ.ಪಿ. ಖೇಮಲಾಪೂರೆ,ಎಸ್.ಡಿ.ಪಠಾಣ,ಕಿಶೋರ ಕತ್ತಿ,ಎಂ.ಎಸ್.ಶ್ರೀಖ0ಡೆ,ವ್ಹಿ.ಎಸ್.ಬುರ್ಜಿ ಮತ್ತಿತರರಿದ್ದರು. ಆಡಳಿತ ಸಲಹೆಗಾರ ಎಂ.ಕೆ.ಅಮ್ಮಣಗಿ ಸ್ವಾಗತಿಸಿದರು. ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ನಿರೂಪಿಸಿ, ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ವಂದಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿತವಾದ ಅರ್ಬನ್ ಬ್ಯಾಂಕ ತನ್ನ ಸಿಬ್ಬಂದಿಗೆ ೮ನೇ ವೇತನ ಜಾರಿ ಮಾಡಿದ ಜಿಲ್ಲೆಯ ಮೊದಲ ಅರ್ಬನ್ ಬ್ಯಾಂಕ್ ಇದಾಗಿದೆ: ಪವನ ಕತ್ತಿ.

Leave a Reply

Your email address will not be published. Required fields are marked *

error: Content is protected !!