ಪಟ್ಟಣದ ಕೋಟೆ ಭಾಗದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುರೋಹಿತ ಹಣಮಂತಾಚಾರ್ಯ ಚಿಪ್ಪಲಕಟ್ಟಿ ಪೂಜೆ ನೆರವೇರಿಸಿದರು. ಶ್ರೀಕಾಂತ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೇಯ ಜೋಶಿ ಇತರರಿದ್ದರು.
ಹುಕ್ಕೇರಿ ಪಟ್ಟಣದ ಶಿವ ಚಿದಂಬರ ಸೇವಾ ಸಮಿತಿ ಆಶ್ರಯದಲ್ಲಿ ಶಂಕರಾಚಾರ್ಯರ ಜಯಂತಿ ಜರುಗಿತು.
ಸೋಮವಾರದಂದು ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಹನುಮಂತಾಚಾರ್ಯ ಚಿಪ್ಪಲಕಟ್ಟಿ ಅವರು ಹಿಂದೂ ಧರ್ಮ ಅವನತಿಯಲ್ಲಿದ್ದಾಗ 32 ನೇ ವಯಸ್ಸಿನಲ್ಲಿ ಶಂಕರಾಚಾರ್ಯರು ದೇಶಾದ್ಯಂತ ಸಂಚರಿಸಿ ಧರ್ಮ ಉಳಿಸಿ ಬೆಳೆಸಿದ್ದಾರೆ.ಅವರ ಈ ಕಾರ್ಯಕ್ಕೆ ದೇಶಾದ್ಯಂತ ಇರುವ ಶಂಕರಾಚಾರ್ಯ ಮಠ, ಮಂದಿರಗಳು ಸಾಕ್ಷಿಯಾಗಿವೆ ಎಂದರು.

ಪುರೋಹಿತರಾದ ಶ್ರೀಕಾಂತ ಜೋಶಿ, ಮಹಾದೇವ ಉಪಾಧ್ಯೆ, ದತ್ತಾತ್ರೇಯ ಜೋಶಿ ಅವರ ನೇತೃತ್ವದಲ್ಲಿ ರುದ್ರಾಭೀಷೇಕ ನಡೆಯಿತು. ಶಂಕರ ನಾಮಾವಳಿ ಸಾಮೂಹಿಕವಾಗಿ ಪಠಿಸಿದರು. ನಂತರ ಹರೇ ಶ್ರೀನಿವಾಸ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ಜರುಗಿತು.ಇದೇ ಸಂದರ್ಭದಲ್ಲಿ ಘಟಪ್ರಭಾದ ಶಿವ ಚಿದಂಬರ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಮಹಾಜನ ಅವರನ್ನು ಸತ್ಕರಿಸಿದರು.
ಡಿ.ಎಲ್.ಕುಲಕರ್ಣಿ, ಗೋವಿಂದ ಮುತಾಲಿಕ, ಮಿಲಿಂದ ಕುಲಕರ್ಣಿ, ಸಂಜೀವ ಮುತಾಲಿಕ, ದತ್ತಾತ್ರೇಯ ಕುಲಕರ್ಣಿ, ಆನಂದ ನಾಡಗೌಡ, ಭಾವುರಾವ ಕುಲಕರ್ಣಿ, ವಿನಯ ದೇಸಾಯಿ, ಡಾ. ಅಭಯ ಕಾಲಕುಂದ್ರಿ, ಪ್ರಸಾದ ಕುಲಕರ್ಣಿ, ವಿವೇಕ ಕುಲಕರ್ಣಿ ಮತ್ತಿತರರಿದ್ದರು.