ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಶಂಕರ ಎಸ್. ತೇರದಾಳ ಮಾತನಾಡಿದರು. ಸುಜೀತ ಕತ್ತಿ, ಕೆ.ಸಿ.ಮುಚಖಂಡಿ, ಡಾ. ವ್ಹಿ.ಎಸ್. ಹೂಗಾರ, ಎಸ್.ಎಮ್.ಭಂಗಿ, ವ್ಹಿ. ಬಿ. ಕಮತೆ, ಡಾ.ಯು.ಕೆ.ಪಾಟೀಲ ಇತರರಿದ್ದರು.
ಹುಕ್ಕೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಸ್ತಿತ್ವ ಸಾಧಿಸಲು ಕೇವಲ ಅಂಕಗಳು ಸಾಕಾಗುವುದಿಲ್ಲ, ಆತ್ಮಸ್ಥೈರ್ಯ ¸ ನೈತಿಕತೆ ಮತ್ತು ಶಿಸ್ತಿನ ಜೀವನದೊಂದಿಗೆ ಸ್ಪರ್ಧೆಗೆ ಸಿದ್ಧವಾಗಬೇಕಾದ ಅವಶ್ಯಕತೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಡಾ. ಶಂಕರ ಎಸ್. ತೇರದಾಳ ಹೇಳಿದರು.
ಶನಿವಾರದಂದು ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂಕಲ್ಪ-2025 ಬಿಎ, ಬಿಕಾಂ ಹಾಗೂ ಬಿಎಸ್ಸಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಮೊದಲಿಗಿಂತಲು ಇಂದು ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಿ ಅಭ್ಯಾಸದಲ್ಲಿ ತೊಡುಗುತ್ತಿದ್ದಾರೆ ಇದರಿಂದ ಸಹಜವಾಗಿ ಅಂಕಗಳ ಗಳಿಕೆಯಲ್ಲಿ ಪೈಪೋಟಿ ಏರ್ಪಟ್ಟಿದೆ ಎಂದರು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ಕೊರತೆ ಕಾಣುತ್ತಿದೆ ಎಂದು ವಿಷಾದಿಸಿದರು. ವಿಶ್ವವಿದ್ಯಾಲಯದ ಘಟಿಕೋತ್ಸವದ ಮಾದರಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡುತ್ತಿರುವುದು ಹೊಸ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಾಂತೇಶ್ವರ ವಿದ್ಯಾ ಟ್ರಸ್ಟ್ ಉಪಾಧ್ಯಕ್ಷ ಸುಜೀತ ಕತ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಬುದ್ದಿವಂತಿಕೆ ಹಾಗೂ ಕೌಶಲ್ಯವನ್ನು ಹೆಚ್ಚಿಸಿಕೊಂಡು ಜೀವನ ಹಾದಿಯಲ್ಲಿ ಸಾಗಬೇಕು. ಪೋಷಕರಿಗೆ ಮತ್ತು ಗುರು ಹಿರಿಯರಿಗೆ ಗೌರವವನ್ನು ನೀಡಬೇಕೆಂದರು.ಡಾ.ಯು.ಕೆ.ಪಾಟೀಲ ಮಾತನಾಡಿದರು.
ನಂತರ 2023-25ನೇ ಶೈಕ್ಷಣಿಕ ಸಾಲಿನ ಆದರ್ಶ ಮತ್ತು ಕ್ರೀಡಾ ಪ್ರಶಸ್ತಿಗಳನ್ನು ವಿದ್ಯಾರ್ಥಿಗಳಿಗೆ ಪ್ರಧಾನ ಮಾಡಲಾಯಿತು. ವಿದ್ಯಾರ್ಥಿಗಳು ಕಲಿತ ಅನುಭವನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ದೀಪದಾನ ಮತ್ತು ಪ್ರಮಾಣವಚನವನ್ನು ಪ್ರೊ. ಆರ್.ಎಸ್.ಹುದ್ದಾರ ನೇರವೇರಿಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಹಾಂತೇಶ್ವರ ವಿದ್ಯಾ ಟ್ರಸ್ಟ್ ಆಡಳಿತಾಧಿಕಾರಿ ಕೆ.ಸಿ.ಮುಚಖಂಡಿ, ಪ್ರಾಚಾರ್ಯರಾದ ಡಾ. ವ್ಹಿ.ಎಸ್.ಹೂಗಾರ, ಪಿಯು ವಿಭಾಗದ ಎಸ್.ಎಮ್.ಭಂಗಿ, ನರ್ಸಿಂಗ್ ವಿಭಾಗದ ವ್ಹಿ. ಬಿ. ಕಮತೆ, ಡಾ. ಯು.ಕೆ.ಪಾಟೀಲ, ಪ್ರೊ. ಎಸ್.ಎಸ್. ಹಟ್ಟಿ, ಜೆ.ಎ.ಹೊಸಮನಿ., ಬಿ.ಎ.ಮಿರ್ಜೆ ಮತ್ತಿತರರಿದ್ದರು. ಪ್ರೊ. ಆರ್.ಕೆ.ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸೀಮಾ & ಪೂಜಾ ನಿರೂಪಿಸಿದರು.ಶೈಲಾ ಪೂಜೇರ ವಂದಿಸಿದರು.
10ಎಚ್.ಯು.ಕೆ2ಎ:ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ ಕತ್ತಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಂಸ್ಥೆಯ ಉಪಾಧ್ಯಕ್ಷ ಸುಜೀತ ಕತ್ತಿ ಉದ್ಘಾಟಿಸಿದರು.ಕೆ.ಸಿ.ಮುಚಖಂಡಿ, ಡಾ. ವ್ಹಿ.ಎಸ್. ಹೂಗಾರ, ಎಸ್.ಎಮ್.ಭಂಗಿ, ವ್ಹಿ. ಬಿ. ಕಮತೆ, ಡಾ.ಯು.ಕೆ.ಪಾಟೀಲ ಇತರರಿದ್ದರು.