ಸ್ಥಳೀಯ ಬಸವ ವೃತ್ತದಲ್ಲಿ ವಕೀಲರ ಸಂಘಟನೆಯಿAದ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.ಕೆ.ಬಿ.ಕುರಬೇಟ, ಬಿ.ಎಂ.ಜಿನರಾಳಿ, ಭೀಮಸೇನ ಬಾಗಿ, ಆಶಾ ಸಿಂಗಾಡಿ, ಮಹಾನಂದಾ ಕೋಟಗಿ ಇತರರಿದ್ದರು.
ಹುಕ್ಕೇರಿ: ಪ್ರವಾಸಿಗರನ್ನು ಗುಂಡಿನಿಂದ ಕೊಂದ ಪಾಕಿಸ್ತಾನ ಉಗ್ರರಿಗೆ ತಕ್ಕಶಾಸ್ತಿಯನ್ನು ಭಾರತ ಸರಕಾರ ಮಾಡಬೇಕೆಂದು ಹುಕ್ಕೇರಿ ವಕೀಲರ ಸಂಘ ಆಗ್ರಹಿಸಿದೆ.ಈ ಹತ್ಯೆ ಖಂಡಿಸಿ ಕರ್ಟ ಕಲಾಪ ಬಹಿಷ್ಕರಿಸಿ ಬಸವ ವೃತ್ತದಲ್ಲಿ ರಸ್ತೆ ನಡೆಸಿ ಪ್ರತಿಭಟಿಸಿದರು.
ಸ್ಥಳೀಯ ಬಸವ ವೃತ್ತದ ಆವರಣದಲ್ಲಿ ನಡೆದ ಪ್ರತಿಭಟನಕಾರರನ್ನು ಉದ್ದೇಶಿಸಿ ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಉಪಾಧ್ಯಕ್ಷ ಬಿ.ಎಂ.ಜಿನರಾಳಿ ಮತ್ತು ಹಿರಿಯ ವಕೀಲರಾದ ಪ್ರಕಾಶ ಮುತಾಲಿಕ, ಆರ್.ವಿ.ಜೋಶಿ, ಭೀಮಸೇನ ಬಾಗಿ, ಪ್ರಕಾಶ ಪಾಟೀಲ ಮತ್ತಿತರರು ಮಾತನಾಡಿ ಶಾಂತಿಪ್ರಿಯ ಭಾರತೀಯರನ್ನು ಆಗಾಗ್ಗೆ ಕೆಣಕಿ ದುಷ್ಕೃತ್ಯ ನಡೆಸುತ್ತಿರುವ ಪಾಕಿ ಉಗ್ರರಿಗೆ ಸರಿಯಾದ ಪಾಠ ಕಲಿಸಬೇಕು.ನಮ್ಮ ದೇಶ, ನಮ್ಮ ಜನರ ರಕ್ಷಣೆ ಕೇಂದ್ರ ಸರಕಾರದ ರ್ತವ್ಯ.ಕಾರ ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವುದೇ ಕ್ರಮಕ್ಕೆ ಮುಂದಾದಲ್ಲಿ ಭಾರತೀಯರೆಲ್ಲ ಬೆಂಬಲಿಸುತ್ತಾರೆಂದರು.ಇದಕ್ಕೂ ಮುನ್ನ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದಿಯಾಗಿ ಎಲ್ಲ ವಕೀಲರು ಮೃತರಿಗಾಗಿ ಮೌನಾಚರಣೆ ಶ್ರದ್ಧಾಂಜಲಿ ಸಲ್ಲಿಸಿದರು.

ಬಿ.ಬಿ.ಪಾಸಪ್ಪಗೋಳ, ಎಸ್.ಜಿ.ನದಾಫ, ಅನೀಸ ವಂಟಮೂರೆ, ಕೆ.ಪಿ.ಶಿರಗಾಂವಕರ, ಕೆ.ಎಲ್.ಜಿನರಾಳ, ಸುರೇಶ ಗಾವಡಿ. ಡಿ.ಕೆ.ಅವರಗೋಳ ಚೇತನ ಗಂಧ, ಶ್ರೀಶೈಲ ಹುಂಡೇಕಾರ, ಆಶಾ ಸಿಂಗಾಡಿ, ಮಹಾನಂದಾ ಕೋಟಗಿ, ಶಾಂತಾ ಶೀಲಯ್ಯನವರಮಠ, ಮತ್ತಿತರರಿದ್ದರು.





