ರೈತಪರ ಸರಕಾರ ಬೇಕಾದರೆ ನಿರ್ಧಿಷ್ಟ ವಿದ್ಯುತ್, ನೀರಾವರಿ ಮತ್ತು ಬೆಲೆಯಲ್ಲಿ ನ್ಯಾಯ ನೀಡಬೇಕು: ಚೂನಪ್ಪಾ ಪೂಜೇರಿ

ಹುಕ್ಕೇರಿ ಪಟ್ಟಣದ ರೈತ ಸಂಘಟನೆ ನಾಮಫಲಕ ಅನಾವರಣ ಕಾರ್ಯಕ್ರಮ.ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ, ಸಂಜು ಹಾವನ್ನವರ, ಬಸವರಾಜ ಮಲಕಾಯಿ, ಬಸವರಾಜ ಪಾಮಲದಿನ್ನಿ, ಆನಂದ ಹುಲ್ಲೋಳಿ ಇತರರಿದ್ದರು.

ಹುಕ್ಕೇರಿ: ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡು ರೈತರನ್ನು ಕಡೆಗಣಿಸುತ್ತಿವೆ. ನಿಗದಿತ ವಿದ್ಯುತ್ ಸರಬರಾಜು, ನೀರಾವರಿ ಮತ್ತು ಬೆಳೆದ ಬೆಳೆಗೆ ಸಮರ್ಪಕ ಬೆಲೆ ಕೊಡಿಸಬೇಕು.ಆಗ ಮಾತ್ರ ರೈತಪರ ಸರಕಾರ ಎನ್ನಲು ಸಾಧ್ಯವೆಂದು ರೈತ ಸಂಘಟನೆ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಹೇಳಿದರು.

ಗುರುವಾರದಂದು ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ರ‍್ಕಲ್‌ನಲ್ಲಿ ರ‍್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಹುಕ್ಕೇರಿ ಘಟಕದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.ರೈತರಿಗೆ ಎಲ್ಲಿಯೇ ಯಾರೇ ಆದರೂ ಅನ್ಯಾಯ ಮಾಡಿದಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.

ಸಂಘಟನೆ ತಾಲೂಕಾಧ್ಯಕ್ಷ ಸಂಜು ಹಾವನ್ನವರ ಮಾತನಾಡಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ರೈತರು ಒಗ್ಗಟ್ಟಾಗಿ ಅನ್ಯಾಯ ಪ್ರತಿಭಟಿಸಬೇಕು.ರೈತ ಸಂಘಟನೆಗೆ ಜಾತಿ ಮತ್ತು ಪಕ್ಷ ರಹಿತವಾದ ನಿಸ್ವಾರ್ಥ ಬೆಂಬಲ ಇರಬೇಕೆಂದರು.

ಹುಕ್ಕೇರಿ ಘಟಕಾಧ್ಯಕ್ಷ ಬಸವರಾಜ ಮಲಕಾಯಿ, ಉಪಾಧ್ಯಕ್ಷ ಬಸವರಾಜ ಪಾಮಲದಿನ್ನಿ, ವಿಜಯ ಅಳವಡೆ, ಆನಂದ ಹುಲ್ಲೋಳಿ, ಮಹಾಂತೇಶ ಕಂಬಾರ, ರಾಜು ಮಲಕಾಯಿ, ಪವನ ಹುಣಚ್ಯಾಳಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!