ಗುಡಸ ಪಿ.ಕೆ.ಪಿ.ಎಸ್ ಗೆ ರೂ. 1 ಕೋಟಿ 52 ಲಕ್ಷ ಲಾಭ: ಮಲ್ಲಿಕಾರ್ಜುನ ನರಸನ್ನವರ

ತಾಲೂಕಿನ ಗುಡಸ ಪಿಕೆಪಿಎಸ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಮಾತನಾಡಿದರು. ರಾಯಪ್ಪಾ ಡೂಗ, ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೋಳಿ ಇತರರಿದ್ದರು.

ಹುಕ್ಕೇರಿ : ತಾಲೂಕಿನ ಗುಡಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 1 ಕೋಟಿ 52 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ನರಸನ್ನವರ ಹೇಳಿದರು

ಗುರುವಾರದಂದು ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಸಂಸದ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಮಾರ್ಗದರ್ಶನದಲ್ಲಿ ಸಂಘದ ಎಲ್ಲ ವಿಭಾಗಗಳಲ್ಲಿ ಗಣಕೀಕೃತ, ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ, ಅಪಘಾತ ವಿಮಾ ಸೌಲಭ್ಯ ಕಲ್ಪಿಸಿ ಸದಸ್ಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಂಘವು ಲಾಭ ಗಳಿಸಿದೆ ಎಂದರು. 2809ಸದಸ್ಯರನ್ನು ಹೊಂದಿದ ಸಹಕಾರಿಯಲ್ಲಿ 1.70 ಕೋಟಿ ರೂ. ಷೇರು ಬಂಡವಾಳ, 65.65 ಕೋಟಿ ರೂ. ದುಡಿಯುವ ಬಂಡವಾಳ, 38.97 ಕೋಟಿ ರೂ. ಠೇವು ಸಂಗ್ರಹಿಸಿದೆ. ಸದಸ್ಯರಿಗೆ ಬೆಳೆ ಸಾಲ, ಟ್ರ್ಯಾಕ್ಟರ್ ಸಾಲ ಮತ್ತು ಕೃಷಿಯೇತರ ಸಾಲ ಸೇರಿದಂತೆ ಒಟ್ಟು ಸಾಲ 44.94 ಕೋಟಿ ರೂ. ಸಾಲ ವಿತರಿಸಿದ್ದು, ಶೇಕಡಾ 100% ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ರೂ. 1 ಕೋಟಿ 52 ಲಕ್ಷ ಲಾಭ ಪಡೆದಿದೆ ಎಂದರು.

ಉಪಾಧ್ಯಕ್ಷ ರಾಯಪ್ಪಾ ಡೂಗ, ನಿರ್ದೇಶಕರಾದ ಸದಾನಂದ ಹಿರೇಮಠ, ಶಿದಗೌಡ ಪಾಟೀಲ, ಬಾಬು ಜಾರಕಿಹೋಳಿ, ಅಲಗೌಡ ದೊಡದನ್ನವರ, ಅಡಿವೆಪ್ಪಾ ಮಗದುಮ್ಮ, ಮಹಾದೇವಿ ಪಾಟೀಲ, ಮೀನಾಕ್ಷಿ ಚಂದರಗಿ, ರಾಜು ಬಂಗಾರಿ, ಮಲಗೌಡ ದೇಸಾಯಿ, ಬ್ಯಾಂಕ ನಿರೀಕ್ಷಕ ಕೆ.ಎಸ್.ಗವಿಮಠ ಇದ್ದರು. ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮಲ್ಲಾಪೂರೆ ಸ್ವಾಗತಿಸಿದರು. ಬಸವರಾಜ ಪಾಟೀಲ ನಿರೂಪಿಸಿದರು. ಶಿವಾನಂದ ಕುಂಬಾರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!