ಜಮಖಂಡಿ ನಗರದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿದರು.
ಜಮಖಂಡಿ: ಹಿಂದುಸ್ಥಾನವನ್ನು ಕಾಂಗ್ರೆಸ್‌ನವರು ಖಾಲಿಸ್ಥಾನ ಪಾಕಿಸ್ಥಾನ ಮಾಡಲು ಹೊರಟಿದ್ದಾರೆ, ಕಾಂಗ್ರೆಸ್‌ನ ವಿರುದ್ದ ಹಿಂದುಗಳು ರೊಚ್ಚಿಗೇಳುವ ಮುನ್ನ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಕಾಂಗ್ರೆಸ್ ಸರ್ಕಾರ ಟೀಕಿಸಿದರು.
ನಗರದ ಶಾಸಕರ ಗೃಹ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಾತಿಗಣತಿಯಲ್ಲಿ ಮುಸ್ಲಿಂರ ಸಂಖ್ಯೆಯನ್ನೆ ಅತ್ಯಧಿಕವಾಗಿ ತೊರಿಸಿದ್ದಾರೆ ಇದು ಸರಿಯಾದ ಮಾಹಿತಿ ಅಲ್ಲ ಇದನ್ನು ಮರು ಜಾತಿಗಣತಿ ಮಾಡಬೇಕೆಂದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಸ್ಲಿಂ ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಸರ್ಕಾರಿ ಗುತ್ತಿಗೆಯಲ್ಲಿ ಶೇ.೪ ರಷ್ಟು ಮೀಸಲಾತಿ, 50 ಸಾವಿರ ರೂ ಶಾದಿಭಾಗ್ಯ, ಉರ್ದು ಶಾಲೆಗಳ ಅಭಿವೃದ್ದಿಗೆ 500 ಕೋಟಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶ ಕಾಲೇಜು ವಿದ್ಯಾಭ್ಯಾಸಕ್ಕೆ 30 ಲಕ್ಷ ರೂ, ಮುಸ್ಲಿಂರ ಅಭಿವೃದ್ಧಿಗೆ 4500 ಕೋಟಿ ರೂ, ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ದಿಗೆ ಸಾವಿರ ಕೋಟಿ ರೂ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಆ ಸಮಾಜಕ್ಕೆ ನೀಡುವುದಾದರೆ ಇನ್ನೂಳಿದ ಸಮಾಜಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸರ್ಕಾರ 5 ಗ್ಯಾರಂಟಿ ಯೋಜನೆಗಳಿಗೆ 58ಸಾವಿರ ರೂ ಕೋಟಿ ಖರ್ಚಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ವಾಸ್ತವವಾಗಿ ಗ್ಯಾರಂಟಿ ಯೋಜನೆಗಳಿಗೆ 78 ಸಾವಿರ ಕೋಟಿ ಖರ್ಚಾಗುತ್ತಿದೆ ಇದರಿಂದ ಅಭಿವೃದ್ದಿಗೆ ಅನುದಾನವೇ ಇಲ್ಲದಂತಾಗಿದೆ ಎಂದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ.ಉಪಾಧ್ಯೆ ಮಾತನಾಡಿದರು.
ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಸಂಗು ದಳವಾಯಿ, ಅಜಯ ಕಡಪಟ್ಟಿ, ಮಲ್ಲು ದಾನಗೌಡ, ಗಣೇಶ ಶಿರಗಣ್ಣವರ, ಪ್ರದೀಪ ನಂದೆಪ್ಪನವರ, ಶ್ರೀಧರ ಕಂಬಿ ಇದ್ದರು.
Report by : M.N.Nadaf, Jamakhandi