ಹುಕ್ಕೇರಿ ಅರ್ಬನ್ ಬ್ಯಾಂಕಿನಲ್ಲಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು. ಸೋಮಣ್ಣ ಗಂಧ, ಮೌನೇಶ ಪೋತದಾರ, ರಾಜಕುಮಾರ ಬಾಗಲಕೋಟ ಮತ್ತಿತರರಿದ್ದರು.
ಹುಕ್ಕೇರಿ : ಹಲವಾರು ಏಳು ಬೀಳುಗಳ ಮಧ್ಯೆ ಇತ್ತೀಚಿನ ವರ್ಷಗಳಲ್ಲಿ ಲಾಭದತ್ತ ಮುಖ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ೮೦ ಲಕ್ಷ ರೂ ನಿವ್ವಳ ಲಾಭ ಗಳಿಸಿದೆ ಎಂದು ಹುಕ್ಕೇರಿಯ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದರು.
ಶುಕ್ರವಾರದಂದು ಬ್ಯಾಂಕಿನ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಶತಮಾನದ ಸಂಭ್ರಮದಲ್ಲಿರುವ ಬ್ಯಾಂಕು ಪ್ರಸಕ್ತ ವರ್ಷ 108.82 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ. 94.50 ಕೋಟಿ ರೂ ಠೇವು ಸಂಗ್ರಹಿಸಿ 58.90 ಕೋಟಿ ರೂ ಸಾಲ ವಿತರಿಸಲಾಗಿದೆ. 38.19 ಕೋಟಿ ರೂ ಗುಂತಾವಣೆ ಮಾಡಲಾಗಿದೆ. ಒಟ್ಟಾರೆ 744.61 ಕೋಟಿ ರೂ ಆರ್ಥಿಕ ವಹಿವಾಟು ನಡೆಸಿದ ಸಹಕಾರಿ ಬ್ಯಾಂಕಿಗೆ ಜಿಲ್ಲಾ ಅತ್ಯುತ್ತಮ ಸಹಕಾರಿ ಸಹಕಾರಿ ಬ್ಯಾಂಕ ಎಂದು ಎರಡು ಬಾರಿ ಪ್ರಶಸ್ತಿ ದೊರಕಿದೆ ಎಂದರು.
ಹಿರಿಯ ನಿರ್ದೇಶಕ ಸೋಮಣ್ಣ ಗಂಧ ಮಾತನಾಡಿ ಸನ್ 2028ರಲ್ಲಿ ಅದ್ದೂರಿಯಾಗಿ ಶತಮಾನೋತ್ಸವ ಆಚರಿಸುವ ಸಂಕಲ್ಪ ಮಾಡಲಾಗಿದೆ. ಇದರ ಜೊತೆಗೆ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸುವ ಚಿಂತನೆ ಇದ್ದು ರಾಷ್ಟಿçÃಕೃತ ಬ್ಯಾಂಕುಗಳ ಸೌಲಭ್ಯಗಳನ್ನು ಗ್ರಾಹಕರಿಗೆ, ಸದಸ್ಯರಿಗೆ ಒದಗಿಸುವುದಾಗಿ ಹೇಳಿದರು.
ಪ್ರಧಾನ ವ್ಯವಸ್ಥಾಪಕ ಕೆ.ಬಿ. ಬಂದಾಯಿ ಮಾತನಾಡಿ ಪ್ರಧಾನ ಕಚೇರಿ ಸೇರಿದಂತೆ 6 ಶಾಖೆಗಳಿದ್ದು, ಶೀಘ್ರದಲ್ಲಿ ಬೆಳಗಾವಿ ನಗರದಲ್ಲಿ ಇನ್ನೊಂದು ಶಾಖೆ ಪ್ರಾರಂಭಿಸುವದರ ಜೊತೆಗೆ ಮೊಬೈಲ ಬ್ಯಾಂಕಿAಗ್, ಯು.ಪಿ.ಐ ಸೇರಿದಂತೆ ಸಂಪೂರ್ಣ ಡಿಜಿಟಲ್ ಬ್ಯಾಂಕಿAಗ್ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಪ್ರಭು ಸಾಂಬಾರೆ, ಮೌನೇಶ ಪೋತದಾರ, ರಾಜಕುಮಾರ ಬಾಗಲಕೋಟ ಮತ್ತಿತರರಿದ್ದರು.