ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಯಶಸ್ವಿಯಾದ ಪ್ರಯುಕ್ತ ಸಂಘದಲ್ಲಿನ ಸಹಕಾರ ಮಹರ್ಷಿ ದಿ.ಅಪ್ಪಣ್ಣಗೌಡರ ಪುತ್ಥಳಿಗೆ ಮಾಡಿದ ಸದಸ್ಯರು. ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಅಶೋಕ ಚಂದಪ್ಪಗೋಳ, ಶಶಿರಾಜ ಪಾಟೀಲ, ಜಯಗೌಡ ಪಾಟೀಲ, ಬಸಗೌಡ ಮಗೆಣ್ಣವರ ಇತರರಿದ್ದರು.

ಹುಕ್ಕೇರಿ:  ಸಹಕಾರಿ ತತ್ವದಡಿ ವಿದ್ಯುತ್ ಸರಬರಾಜು ಮಾಡುವ ದೇಶದ ಏಕೈಕ ಸಹಕಾರಿ ಸಂಸ್ಥೆಯ ಅಧ್ಯಕ್ಷ ಕಲಗೌಡ ಪಾಟೀಲ ಅವರ ವಿರುದ್ಧ ಆಡಳಿತ ಮಂಡಳಿಯ 10 ಸದಸ್ಯರು ಬಂಡೆದ್ದು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಇಂದು ನಡೆದ ಅವಿಶ್ವಾಸ ಗೊತ್ತುವಳಿ ಸ್ವೀಕಾರ ಆಗಿ ಅಧ್ಯಕ್ಷ ಸ್ಥಾನದಿಂದ ಅವರು ತೆರವುಗೊಂಡರು.

   ಶುಕ್ರವಾರದಂದು ಸಹಕಾರಿ ನಿಯಮಾವಳಿ ಪ್ರಕಾರ ನಡೆದ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಅವಿಶ್ವಾಸದ ಪರವಾಗಿ 10 ಮತ್ತು ಅದರ ವಿರುದ್ಧ 5 ನಿರ್ದೇಶಕರು ಮತ ಚಲಾಯಿಸಿದ್ದರಿಂದ ಅಧ್ಯಕ್ಷರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಗೆ 2/3 ಕ್ಕಿಂತ ಹೆಚ್ಚು ನಿರ್ದೇಶಕರಿದ್ದ ಮೇರೆಗೆ ಅಧ್ಯಕ್ಷರ ಸ್ಥಾನದಿಂದ ಕಲಗೌಡ ಪಾಟೀಲ ತೆರವುಗೊಂಡಿದ್ದಾರೆಂದು ಅವಿಶ್ವಾಸ ನಿರ್ಣಯ ತೀರ್ಮಾನಕ್ಕಾಗಿ ನೇಮಕಗೊಂಡ ಪ್ರಾಧಿಕೃತ ಅಧಿಕಾರಿ ಶಶಿಕಲಾ ಪಾಟೀಲ ತಿಳಿಸಿದರು.

   ಅವಿಶ್ವಾಸ ಮಂಡನೆ ಪರವಾಗಿ ಸಂಘದ ಉಪಾಧ್ಯಕ್ಷ ವಿಷ್ಣು ರೇಡೆಕರ, ನಿರ್ದೇಶಕರಾದ ಅಶೋಕ ಚಂದಪ್ಪಗೋಳ, ಶಶಿರಾಜ ಪಾಟೀಲ, ಜಯಗೌಡ ಪಾಟೀಲ, ಬಸಗೌಡ ಮಗೆಣ್ಣವರ, ಕುನಾಲ ಪಾಟೀಲ, ರವೀಂದ್ರ ಹಿಡಕಲ್ಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೋದೆ, ಈರಪ್ಪಾ ಬಂಜಿರಾಮ ಮತ ಚಲಾಯಿಸಿದರು.

          ಅವಿಶ್ವಾಸದ ವಿರುದ್ಧ ಅಧ್ಯಕ್ಷ ಕಲಗೌಡ ಪಾಟೀಲ, ನಿರ್ದೇಶಕರಾದ ಪೃಥ್ವಿ ಕತ್ತಿ, ಕೆ.ಕೆ.ಬೆಣಚಿನಮರಡಿ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ ಮತ ಚಲಾಯಿಸಿದರು.

     ಸಂಘದ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ, ರೆಸಿಡೆಂಟ್ ಇಂಜನೀಯರ ನೇಮಿನಾಥ ಖೇಮಲಾಪೂರೆ, ವ್ಯವಸ್ಥಾಪಕ ದುರದುಂಡಿ ನಾಯಿಕ ಇತರರಿದ್ದರು.

*15 ದಿನಗಳಿಂದ ತಾಲೂಕಿನ ಜನರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಅವಿಶ್ವಾಸ ಗೊತ್ತುವಳಿ ಮಂಡನೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಿದ್ದರು.

3 ದಶಕಗಳಿಂದ ಕತ್ತಿ ಕುಟುಂಬದ ಬೆಂಬಲಿಗರ ಕೈಯಲ್ಲಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತವನ್ನು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಜಾರಕಿಹೊಳಿ ಸಹೋದರರು ತಮ್ಮ ಕೈವಶ ಮಾಡಿಕೊಂಡರು.

ಸಂಘದ ಚುನಾವಣೆ ಸೆಪ್ಟಂಬರದಲ್ಲಿ ನಡೆಯಲಿದ್ದು, ಕೇವಲ 3 ತಿಂಗಳಿಗಾಗಿ ನೂತನ ಅಧ್ಯಕ್ಷರಾಯ್ಕೆ ನಡೆಯಬೇಕು.

Leave a Reply

Your email address will not be published. Required fields are marked *

error: Content is protected !!