ಜಮಖಂಡಿಯಲ್ಲಿ ಬೃಹತ್ ಉದ್ಯೋಗ ಮೇಳ

ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಿಗುರು ಶಿಕ್ಷಣ ಸಂಸ್ಥೆಯ ಸಂಚಾಲಕಿ ಸವಿತಾ ಸೋನಾರ ಮಾತನಾಡಿದರು.

ಜಮಖಂಡಿ: ನಗರದ ಬಸವ ಭವನದಲ್ಲಿ ಏ.19 ರಂದು ಬೆಳಗ್ಗೆ 9 ಗಂಟೆಯಿಂದ ಬೃಹತ್ ಉದ್ಯೋಗ ಮೇಳ ಜರುಗಲಿದೆ ಎಂದು ಚಿಗುರು ಸಂಸ್ಥೆಯ ಸಂಚಾಲಕಿ ಸವಿತಾ ಸೋನಾರ ತಿಳಿಸಿದರು.

ನಗರದ ಕಾನಿಪ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಚಿಗುರು ಶಿಕ್ಷಣ ಸಂಸ್ಥೆ, ಉತ್ತರ ಕನ್ನಡ ಜಿಲ್ಲಾ ಶಿಕ್ಷಕ/ಶಿಕ್ಷಕಿಯರ ಸಹಾಯವಾಣಿ ಶಿರಸಿ ಸಹಯೋಗದಲ್ಲಿ ಈ ಭಾಗದ 3 ರಿಂದ 4 ಸಾವಿರ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಟಾಟಾ, ಟಯೋಟಾ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ಗಳು ಸೇರಿ 42ಕ್ಕೂ ಅಧಿಕ ದೇಶದ ಹೆಸರಾಂತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ ಸಂದರ್ಶಕರು ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಿದ್ದಾರೆ ಎಂದರು.

ಉಚಿತವಾಗಿ ಹೆಸರು ನೊಂದಾಯಿಸಿಕೊಳ್ಳಬಹುದು ಮೇಳದ ದಿನದಂದೂ ತಮ್ಮ ದಾಖಲಾತಿಗಳ ಮೂಲಕ ಸಂದರ್ಶನಕ್ಕೆ ಹಾಜರಾಗಬಹುದು ಎಂದರು.

ಹೆಚ್ಚಿನ ಮಾಹಿತಿಗೆ 9008335575, 888792250567, 9880443955 ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ದೀಪಕ ಸೋನಾರ, ಲಕ್ಷ್ಮೀ ಗಡ್ಡಿ, ರಮೇಶ ಗಡ್ಡಿ, ಕೆ.ಎಸ್.ತೇರದಾಳ, ಕಲ್ಲಪ್ಪ ಗೌರಣ್ಣವರ ಇದ್ದರು.

Report by : M.N.Nadaf, Jamakhandi

Leave a Reply

Your email address will not be published. Required fields are marked *

error: Content is protected !!