ಸ್ಥಳೀಯ ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕರುನಾಡ ಯುವಜನೋತ್ಸವ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಾಹಿತಿ ಡಾ.ಸಂಗಮನಾಥ ಲೋಕಾಪೂರ, ಪಿಂಟು ಶೆಟ್ಟಿ, ಡಾ. ಸರ್ವಮಂಗಳಾ ಕಮತಗಿ, ಪಿ.ಎಸ್.ಐ ನಿಖಿಲ ಎಂ.ಕೆ, ಬಿ.ಎಸ್.ಪಾಟೀಲ ಇತರರಿದ್ದರು.
ಹುಕ್ಕೇರಿ: ಇಂದಿನ ಯುವ ಜನಾಂಗಕ್ಕೆ ನಮ್ಮ ಕರುನಾಡಿನ ವೈಭವ ಮತ್ತು ಸಂಸ್ಕೃತಿಯ ಪರಿಚಯಿಸಬೇಕಾಗಿದೆ.ಅವರಲ್ಲಿ ನಾಡು ನುಡಿಯ ಪ್ರೀತಿ ಪ್ರೇಮ ಬೆಳೆಸಬೇಕಾಗಿದೆ ಎಂದು ಧಾರವಾಡದ ಖ್ಯಾತ ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಹೇಳಿದರು.
ಸ್ಥಳೀಯ ಎಸ್.ಎಸ್.ಎನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕರುನಾಡ ಯುವಜನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಶಾಲಾ ಕಾಲೇಜಿನಲ್ಲಿ ನಮ್ಮ ನಾಡಿನ ಐತಿಹಾಸಿಕ ಘಟನೆಗಳು, ಜನಪದ ಸಾಹಿತ್ಯ, ಶರಣರ ವಚನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಆಗ ಮಾತ್ರ ಯುವ ಜನಾಂಗಕ್ಕೆ ನಾಡು ನುಡಿಯ ಜಾಗೃತಿ ಮೂಡಲು ಸಾಧ್ಯವೆಂದರು.ಹುಕ್ಕೇರಿಯ ಈ ಕಾಲೇಜು ಇಂತಹ ಸಮಾರಂಭ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯವೆಂದರು.
ಕರುನಾಡ ಯುವಜನೋತ್ಸವ ಸಮಾರಂಭದ ನಿಮಿತ್ಯ ಹಮ್ಮಿಕೊಂಡ ವಿದ್ಯಾರ್ಥಿಗಳು ವಿವಿಧ ವಾಧ್ಯಮೇಳಗಳ ನಾಡದೇವತೆ ಭಾವಚಿತ್ರದ ಮೆರವಣಿಗೆ ಜನರನ್ನು ಆಕರ್ಷಿಸಿತು. ಪ್ರಾರಂಭದಲ್ಲಿ ನಾಡದೇವತೆ ಭಾವಚಿತ್ರದ ಮೆರವಣಿಗೆಗೆ ಎಸ್.ಕೆ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಪಿಂಟು ಶೆಟ್ಟಿ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸತ್ಕರಿಸಿದರು.
ಪ್ರಾಚಾರ್ಯೆ ಡಾ. ಸರ್ವಮಂಗಳಾ ಕಮತಗಿ, ಪಿ.ಎಸ್.ಐ ನಿಖಿಲ ಎಂ.ಕೆ, ಬಿ.ಎಸ್.ಪಾಟೀಲ, ಕಾಲೇಜಿನ ಸಾಂಸ್ಕೃತಿಕ ವಿಭಾಗದ ಅಧ್ಯಕ್ಷ ಡಾ.ಸೋಮಶೇಖರಪ್ಪ ಎಚ್ ಮತ್ತು ಸಿಬ್ಬಂದಿ ಇದ್ದರು.
