ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಗುರು ಹಿರಿಯರು ಮತ್ತು ಮುಖಂಡರೊಂದಿಗೆ ಶಾಸಕ ನಿಖಿಲ ಕತ್ತಿ ಮತ್ತು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ.
ಹುಕ್ಕೇರಿ ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಹುಳಪಲ್ಲೆ ಜೋಳದ ರೊಟ್ಟಿ ಮತ್ತು ಹುಗ್ಗಿ ಹಬ್ಬ ಆಚರಿಸುವ ಪದ್ದತಿ ವಿಶಿಷ್ಟವಾಗಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ಗುರುವಾರದಂದು ತಾಲೂಕಿನ ನೇರಲಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಗ್ರಾಮದ ಗೌಡರಿಂದ ಹುಳಪಲ್ಲೆ ಮತ್ತು ರೊಟ್ಟಿ ಹಬ್ಬ ಆದರೆ ಜಾತ್ರಾ ಮಹೋತ್ಸವ ಸಮಿತಿಯವರು ಹುಗ್ಗಿ ಊಟ ಮಾಡಿಸುತ್ತಾರೆ. ಒಂದೊಂದು ಗ್ರಾಮದಲ್ಲಿ ಒಂದು ವಿಶಿಷ್ಟ ಪದ್ದತಿಗಳ ಆಚರಣೆ ಇರುತ್ತದೆ ಎಂದರು.ಬಸವೇಶ್ವರ ದೇವಸ್ಥಾನಕ್ಕೆ ನಮ್ಮ ತಂದೆ ದಿ.ಉಮೇಶ ಕತ್ತಿ ಸಭಾಭವನ, ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ಮಾಡಿ ಕೊಟ್ಟಿರುವರು.ಮುಂಬರುವ ದಿನಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಚೇರಮನ್ ಪವನ ಕತ್ತಿ ಅವರು ಮಾತನಾಡಿ ನೇರಲಿ ಗ್ರಾಮದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ತಾಲೂಕಿನಲ್ಲಿಯೇ ವಿಶಿಷ್ಟವಾಗಿದೆ.ಇಲ್ಲಿಯ ಜನರಲ್ಲಿ ಇರುವ ಜಾತೀಯ ಸಾಮರಸ್ಯ ನಾಡಿಗೆ ಮಾದರಿಯಾಗಿದೆ ಎಂದರು.

ಜಾತ್ರಾ ಮಹೋತ್ಸವ ಸಮಿತಿಯಿಂದ ನಿಖಿಲ ಮತ್ತು ಪವನ ಕತ್ತಿ ಸಹೋದರರನ್ನು ಸತ್ಕರಿಸಿದರು.
ರಾಜುಗೌಡ ಪಾಟೀಲ, ಸತೀಶ ಶೇಡಬಾಳೆ, ರಾಕೇಶ ಪಾಟೀಲ, ಕಲಗೌಡ ಪಾಟೀಲ, ರವಿ ಪಾಟೀಲ, ಸುಚಿತ ಪಾಟೀಲ, ಬಸಗೌಡ ಪಾಟೀಲ, ಶಿವಪ್ಪಾ ಲಬ್ಬಿ, ವಿನಾಯಕ ಸಂಕೇಶ್ವರ, ನಾಗೇಶ ಪಾಟೀಲ, ಬಸಗೌಡ ಮಾಳಗಿ ಮತ್ತಿತರರಿದ್ದರು.