ಹುಕ್ಕೇರಿ ಪಟ್ಟಣದ ಮುಸ್ಲಿಂ 11 ಜಮಾತ್ ತಂಜಿಮ್ ಕಮಿಟಿ ವತಿಯಿಂದ ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮದ ಕುರಾನ್ ಗ್ರಂಥವನ್ನು ಬೆಂಕಿ ಹಚ್ಚಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು
ಶುಕ್ರವಾರದಂದು ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಹಾಗೂ ಮುಖಂಡರು ಹೊಸ ಬಸ್ ನಿಲ್ದಾಣ ಬಳಿಯ ಪೈಗಂಬರ್ ದರ್ಗಾದಿಂದ ಕೋರ್ಟ್ನ ಬಸವೇಶ್ವರ ವೃತ್ತದ ಬೃಹತ್ ರ‍್ಯಾಲಿ ನಡೆಸಿದರು.ನಂತರ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು.
ಕೆಲ ಮುಖಂಡರು ಮಾತನಾಡಿ ಜಿಲ್ಲೆಯ ಸಂತಿ ಬಸ್ತವಾಡ ಗ್ರಾಮದಲ್ಲಿ ಇಸ್ಲಾಂ ಧರ್ಮದ ಪವಿತ್ರ ಗೃಂಥವಾದ ಕುರಾನ ನ್ನು ಕದ್ದು ಅದಕ್ಕೆ ಬೆಂಕಿ ಹಚ್ಚಿದ್ದು ಖಂಡನೀಯವೆಂದರು. ಬೆಂಕಿ ಹಚ್ಚಿದ ಸಮಾಜ ಘಾತುಕರನ್ನು ಹುಡುಕಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ನಂತರ ಗ್ರೇಡ್ 2 ತಹಸೀಲ್ದಾರ ಪ್ರಕಾಶ ಕಲ್ಲೋಳಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ 11 ಜಮಾತ ಅಧ್ಯಕ್ಷ ಸಲೀಮ ನದಾಫ, ನಜೀರಹ್ಮದ ಮೋಮಿನದಾದಾ, ಸರ್ಪರಾಜ ಮಕಾನದಾರ, ನಿಸ್ಸಾರ ಮುಲ್ಲಾ, ಬಾಬಾಜಾನ ಮೊಕಾಶಿ, ಹಮೀದ ಮುಲ್ಲಾ ಸೇರಿದಂತೆ ಅನೇಕರಿದ್ದರು.