
ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣ ಸನ್ 2010ರಕ್ಕಿಂತ ಮೊದಲು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುತ್ತಿದ್ದ ದೃಶ್ಯ ಇತಿಹಾಸ ಆಗಿದೆ. ಇದೇ ರೀತಿ ತಾಲೂಕಿನ ಬಹು ಗ್ರಾಮಗಳು ಕುಡಿಯುವ ನೀರಿನ ಭವಣೆ ಅನುಭವಿಸಿದ್ದವು. ಈ ಮೊದಲು ನೀರಿನ ಭವಣೆ ಅರಿತ ನಿವಾಸಿಗಳಿಗೆ ಆ ದುಸ್ವಪ್ನ ಸ್ಮರಿಸಿಕೊಳ್ಳುತ್ತಾರೆ. ಇದೀಗ ಎರಡು ದಿನಕ್ಕೊಮ್ಮೆ ಪಟ್ಟಣವಾಸಿಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈಗಿನ ಯುವ ಜನಾಂಗಕ್ಕೆ ಆ ದಿನಗಳ ಸಮಸ್ಯೆ ಗೊತ್ತಿಲ್ಲ.
ತಾಲೂಕಿನ 30ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವುದರಿAದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಸಿರು ಕಂಗೊಳಿಸುತ್ತಿದೆ. ಪಟ್ಟಣವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.
ಹುಕ್ಕೇರಿ ಮತಕ್ಷೇತ್ರದಲ್ಲಿ ಹಸಿರು ಕಂಗೊಳಿಸಲು ಕಾರಣೀಕರ್ತರಾದವರನ್ನು ನೆನಪಿಸಿಕೊಳ್ಳಬೇಕು.ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿದ ಭಗೀರಥ ಯಾರು ಎಂಬ ಪ್ರಶ್ನೆ ಕೆಲವರದ್ದಾಗಿದೆ.ಈ ಕುರಿತು ವಿಶೇಷ ವರದಿ.

ಸನ್ 2009ರಲ್ಲಿ ಆಗಿನ ಸಂಸದರಾಗಿದ್ದ ರಮೇಶ ಕತ್ತಿ ಅವರು ರಾಜ್ಯ ಸರಕಾರದ ಜಲಸಂಪನ್ಮೂಲ ಸಚಿವರಿಗೆ ಮತ್ತು ಕರ್ನಾಟಕ ನೀರಾವರಿ ನಿಗಮದ ಎಂ.ಡಿ ಅವರಿಗೆ ಹಿರಣ್ಯಕೇಶಿ ನದಿಯಿಂದ ನೀರನ್ನು ಹುಕ್ಕೇರಿ ತಾಲೂಕಿನ ಹರಗಾಪೂರ ಗಡದವರೆಗೆ ಲಿಪ್ಟ್ ಮಾಡಿ 15 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನಗೊಳಿಸಲು ಮನವಿಸಿಕೊಳ್ಳುವ ಮೂಲಕ ಹುಕ್ಕೇರಿ ಮತಕ್ಷೇತ್ರದ ನೀರಾವರಿಗೆ ಚಾಲನೆ ದೊರಕಿತು.ನಂತರದ ದಿನಗಳಲ್ಲಿ ಮಾಜಿ ಸಚಿವ ಉಮೇಶ ಕತ್ತಿ ಅವರು ಮತ್ತಷ್ಟು ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಂಡರು.ಇದರ ಜತೆಗೆ ಘಟಪ್ರಭಾ ನದಿಯಿಂದ ಹಿರಣ್ಯಕೇಶಿ ನದಿಯ 6 ಬ್ಯಾರೇಜುಗಳಿಗೆ ನೀರು ಹರಿಸುವ ಯೋಜನೆ ಮಂಜೂರಾತಿ ಮಾಡಿಸಿದರು.ಆದರೆ ಅವರ ನಿಧನಾನಂತರ ಆ ಯೋಜನೆ ನೆನೆಗುದಿಗೆ ಬಿದ್ದಿತು.
ಇದೀಗ ಶಾಸಕ ನಿಖಿಲ ಕತ್ತಿ ಬ್ಯಾರೇಜ್ ತುಂಬಿಸುವ ಯೋಜನೆಗೆ ಅನುದಾನ ಮಂಜೂರಿ ಮಾಡಿಸುವ ಮೂಲಕ ತಂದೆ ದಿ.ಉಮೇಶ ಕತ್ತಿ ಮತ್ತು ಚಿಕ್ಕಪ್ಪ ರಮೇಶ ಕತ್ತಿ ಅವರ ಕನಸನ್ನು ನನಸು ಮಾಡಿರುವರು.ಇದರ ಜತೆಗೆ ಹುಕ್ಕೇರಿ ಪೂರ್ವಭಾಗದ 19 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಮುಕ್ತಾಯಗೊಳಿಸಿದ್ದು ಬರುವ ಜುಲೈ ತಿಂಗಳಲ್ಲಿ ಅವುಗಳಿಗೂ ನೀರು ತುಂಬಿಸುವ ಕಾರ್ಯ ಪ್ರಾರಂಭವಾಗಲಿದೆ.ಈ ಮೂಲಕ ಹುಕ್ಕೇರಿ ಮತಕ್ಷೇತ್ರದಲ್ಲಿ ಸುಜಲಾಂ ಸುಫಲಾಂ ಕಾರ್ಯ ಕತ್ತಿ ಕುಟುಂಬದಿಂದಾಗಿದೆ ಎಂಬುದು ಬಹುತೇಕ ಮುಖಂಡರ ಅಭಿಪ್ರಾಯವಾಗಿದೆ. ತನ್ಮೂಲಕ ಹುಕ್ಕೇರಿ ಮತಕ್ಷೇತ್ರದ ಭಗೀರಥ ಯಾರು ಎಂಬುದನ್ನು ಓದುಗರು ತಿಳಿಸಬೇಕು.

ಹುಕ್ಕೇರಿ ತಾಲೂಕಿನ ರೈತರು ನೀರಾವರಿ ಯೋಜನೆಗಳಿಂದ ತಮ್ಮ ಜಮೀನುಗಳಲ್ಲಿ ವರ್ಷವಿಡಿ ಹಸಿರು ಕಂಗೊಳಿಸುವುದರ ಜತೆಗೆ ಹುಕ್ಕೇರಿ ಮತಕ್ಷೇತ್ರ ಸುಜಲಾಂ ಸುಫಲಾಂ ಆಗಲಿ ಎಂದು ಕನಸನ್ನು ಕಾಣುತ್ತಿದ್ದ ಮಾಜಿ ಶಾಸಕ ದಿ.ಉಮೇಶ ಕತ್ತಿ ಅವರು ಕಂಡ ಕನಸು ನನಸಾಗುತ್ತಿದೆ. ಈ ಕುರಿತು ವಿಶೇಷ ವರದಿ.
ದೀಪದ ಕೆಳಗೆ ಕತ್ತಲು: ತಾಲೂಕಿನಲ್ಲಿ ಮಾರ್ಕಂಡೇಯ ಮತ್ತು ಹಿಡಕಲ್ ಜಲಾಶಯಗಳಿದ್ದರೂ ಹುಕ್ಕೇರಿ ತಾಲೂಕಿನ ಉತ್ತರ ಮತ್ತು ದಕ್ಷಿಣ ಭಾಗದ ರೈತರು ನೀರಾವರಿ ವಂಚಿತರಾಗುವ ಮೂಲಕ ದೀಪದ ಕೆಳಗೆ ಕತ್ತಲು ಎಂಬಂತ್ತಾಗಿದೆ. ತಾಲೂಕಿನ 2 ಜಲಾಶಗಳಿಂದ ನೆರೆಯ ಜಿಲ್ಲೆ ಮತ್ತು ತಾಲೂಕುಗಳಿಗೆ ಮಾತ್ರ ಹೆಚ್ಚಿನ ನೀರಾವರಿ ಅನುಕೂಲವಾಗಿದೆ. ಆದರೆ ಹುಕ್ಕೇರಿ ತಾಲೂಕಿನ ಶೇಕಡಾ 20 ರಷ್ಟು ಕ್ಷೇತದ ರೈತರಿಗೆ ಮಾತ್ರ ಇದರಿಂದ ಪ್ರಯೋಜನವಾಗಿದೆ.
ಹುಕ್ಕೇರಿ ಮತ್ತು ಯಮಕನಮರಡಿ ಕ್ಷೇತ್ರದ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸನ್ 2008ರಲ್ಲಿ ದಿ.ಉಮೇಶ ಕತ್ತಿ ಮತ್ತು ಸನ್ 2009ರಲ್ಲಿ ಆಗಿನ ಸಂಸದರಾಗಿದ್ದ ರಮೇಶ ಕತ್ತಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಹುಕ್ಕೇರಿ ತಾಲೂಕಿನ 19 ಹಾಗೂ ಚಿಕ್ಕೋಡಿ ತಾಲೂಕಿನ ೪ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳಲು ಮನವಿಸಿ ಕೊಂಡಿದ್ದರು. ಸನ್ 2014ರಲ್ಲಿ ಹಿರಣ್ಯಕೇಶಿ ನದಿಯಿಂದ ನೀರೆತ್ತಲು 77 ಕೋಟಿ ರೂ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರಕಿ ನೀರು ತುಂಬಿಸಲಾಗುತ್ತಿದೆ.
6 ತಿಂಗಳು ಮಾತ್ರ ನದಿಯಲ್ಲಿ ನೀರು: ಹಿರಣ್ಯಕೇಶಿ ನದಿಯಲ್ಲಿ ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗೆ ಮಾತ್ರ ನೀರು ಹರಿಯುತ್ತದೆ.ಇನ್ನೂಳಿದ 6 ತಿಂಗಳು ಸಂಪೂರ್ಣ ಬತ್ತುವುದರಿಂದ ಕೆರೆ ತುಂಬಿಸುವ ಯೋಜನೆ ಇದ್ದು ಇಲ್ಲದಂತಾಗಿತ್ತು.ಜನರ ಕುಡಿಯುವ ನೀರಿನ ಭವಣೆ ತಪ್ಪಿಸಲು ಹಾಗೂ ಬೇಸಿಗೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕನಸನ್ನು ಕಂಡ ಮಾಜಿ ಶಾಸಕ ದಿ.ಉಮೇಶ ಕತ್ತಿ ಅವರು ಸರಕಾರಕ್ಕೆ ಸುಲ್ತಾನಪೂರ ಬಳಿಯ ಬ್ರಿಜ್ ಕಂ ಬಾಂಧಾರದಿಂದ ಕೆರೆಗಳಿಗೆ ನೀರು ಹರಿಸುವ ಚಿಂತನೆ ಮಾಡಿದರು.ಉಮೇಶ ಕತ್ತಿ ಸಚಿವರಾಗಿದ್ದಾಗ ಈ ಯೋಜನೆ ಮಂಡಿಸಿ ಅನುಮತಿ ಪಡೆದರು.ನಂತರ ಅವರ ನಿಧನದಿಂದ ಯೋಜನೆ ಸ್ಥಗಿತವಾಗಿತ್ತು.
ಈ ಯೋಜನೆ ಸಾಕಾರಗೊಳಿಸಲು ಶಾಸಕ ನಿಖಿಲ ಕತ್ತಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಸರಕಾರದಿಂದ ಮಂಜೂರಾತಿ ಪಡೆದರು.ಇದೀಗ ಸುಲ್ತಾನಪೂರ ಬಳಿ ನಿರ್ಮಿಸಿದ ಬ್ರಿಜ್ ಕಂ ಬಾಂಧಾರದಿಂದ ಪೈಪಲೈನ್ ಮೂಲಕ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಪಂಪಹೌಸ್ ನಿರ್ಮಿಸಿ ಹುಕ್ಕೇರಿ ಮತಕ್ಷೇತ್ರದ 19 ಕೆರೆಗಳಿಗೆ ನೀರು ತುಂಬಿಸುವ ೩೫ ಕೋಟಿ ರೂ ವೆಚ್ಚದ ಯೋಜನೆ ತಯಾರಿಸಿ ಸರಕಾರಕ್ಕೆ ಮಂಡಿಸಿ ಅನುಮತಿ ಪಡೆದರು.
ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು ಬರುವ ಜುಲೈ ತಿಂಗಳಿನಿಂದ ತಾಲೂಕಿನ 19 ಕೆರೆಗಳಿಗೆ ನೀರು ತುಂಬಿಸಲು ಪ್ರಾರಂಭವಾಗಲಿದೆ.ಈ ಕಾಮಗಾರಿಯಿಂದ ಹುಕ್ಕೇರಿ ಮತಕ್ಷೇತ್ರದ 8 ಗ್ರಾಮಗಳ ರೈತರ ಒಂದು ಸಾವಿರ ಏಕರೆಗೂ ಹೆಚ್ಚಿನ ಪ್ರಮಾಣದ ಜಮೀನು ನೀರಾವರಿಗೆ ಒಳಪಡಲಿದೆ.ಒಟ್ಟಾರೆ ಹುಕ್ಕೇರಿ ಕ್ಷೇತ್ರದಲ್ಲೀಗ ಸುಜಲಾಂ ಸುಫಲಾಂ ಕನಸು ನನಸಾಗುತ್ತಿದೆ


ತಾಲೂಕಿನ ಸುಲ್ತಾನಪೂರ ಬಳಿ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬಾಂಧಾರದ ಬಳಿ ನಿರ್ಮಾಣಗೊಳ್ಳುತ್ತಿರುವ 19 ಕೆರೆಗಳಿಗೆ ನೀರು ತುಂಬಿಸುವ ಪಂಪಹೌಸ್ ವೀಕ್ಷಿಸಿದ ರಮೇಶ ಕತ್ತಿ. ಕಲಗೌಡ ಪಾಟೀಲ, ಬಿ.ಬಿ.ಪಾಟೀಲ, ಮಹಾದೇವ ಪಾಟೀಲ, ಬಸವಂತ ರಡ್ಡಿ ಮತ್ತಿತರರಿದ್ದರು.

ತಂದೆ ಕನಸನ್ನು ನನಸು ಮಾಡಿದ ಮಗ: ನನ್ನ ಅಣ್ಣ ಉಮೇಶ ಕತ್ತಿ ಕಂಡ ಕನಸನ್ನು ಸಾಕಾರಗೊಳಿಸಲು ಆ ಯೋಜನೆಯ ಪ್ರಗತಿಗೆ ಈಗಿನ ಶಾಸಕ ಸುಪುತ್ರ ನಿಖಿಲ ಕತ್ತಿ ಶ್ರಮಿಸುವ ಮೂಲಕ ಕಾರ್ಯ ಪ್ರಗತಿಯಲ್ಲಿದ್ದು ಇದೇ ವರ್ಷ ಜುಲೈ ತಿಂಗಳು ಮುಂಗಾರು ಹಂಗಾಮಿನಲ್ಲಿ ನೀರು ಹರಿಸುವ ಕಾರ್ಯ ಪ್ರಾರಂಭವಾಗಲಿದೆ.ಇದರಿಂದ ಒಂದು ಸಾವಿರ ಏಕರೆ ಹೆಚ್ಚಿಗೆ ನೀರಾವರಿ ಕ್ಷೇತ್ರ ಆಗುತ್ತದೆ.ಇದರ ಜತೆಗೆ ಅಂತರ್ ಜಲಮಟ್ಟ ವೃದ್ಧಿಯಾಗುವುದರಿಂದ ನೀರಾವರಿಗೆ ಹೆಚ್ಚಿನ ಒತ್ತು ಕೊಟ್ಟಂತಾಗುತ್ತದೆ.
ರಮೇಶ ಕತ್ತಿ ಮಾಜಿ ಸಂಸದರು.

ಯೋಜನೆಯ ನೀಲನಕ್ಷೆ: ಸುಲ್ತಾನಪೂರ ಬಳಿಯ ಬ್ರಿಜ್ ಕಂ ಬಾಂಧಾರದಿಂದ 35..752 M.C.F.T ನೀರೆತ್ತಲು 3 ಪೂಟಿನ ಪೈಪ್‌ಗಳ ಮೂಲಕ 18.084 ಕಿ.ಮೀ ಅಂತರದ ಪೈಪಲೈನ್ ಅಳವಡಿಸಲಾಗುತ್ತಿದೆ.ನೀರೆತ್ತಲು 375 ಎಚ್.ಪಿ ಸಾಮರ್ಥ್ಯದ 3 ಮೋಟರ್‌ಗಳನ್ನು ಅಳವಡಿಸಿದ್ದು ಇದರಲ್ಲಿ 2 ಮೋಟರ್ ನೀರೆತ್ತಲು ಬಳಸಿದರೆ ಒಂದನ್ನು 1 ಸ್ಟಾಂಡ್ ಬೈ ಆಗಿ ಬಳಸಲು ಇಟ್ಟುಕೊಳ್ಳಲಾಗಿದೆ. ಸಂಜಯ ಮಾಳಗಿ ಎ.ಇ.ಇ ಸಣ್ಣ ನೀರಾವರಿ ಇಲಾಖೆ.

ನನ್ನ ಮತಕ್ಷೇತ್ರದಲ್ಲಿನ ಬೆಳವಿ ಗ್ರಾಮದ 3, ಶೇಲಾಪೂರ 2, ಯಾದಗೂಡ 2, ಹುಕ್ಕೇರಿ ಶೆಟ್ಟಿ ಕೆರೆ, ಹುಲ್ಲೋಳಿಯ 6, ನೇರಲಿಯ 2, ಹಣಜ್ಯಾನಟ್ಟಿ 2 ಮತ್ತು ಎಲಿಮುನ್ನೋಳಿಯ 1 ಸೇರಿದಂತೆ ಒಟ್ಟು 19 ಕೆರೆಗಳಿಗೆ 47.67 M.C.F.Tನೀರು ತುಂಬಿಸಲಾಗುವುದು.
ಭಗೀರಥ ಪ್ರಯತ್ನಕ್ಕೆ ಸೂಕ್ತ ದಾಖಲೆಗಳು

