ಜಾಗತಿಕ ತಾಪಮಾನಕ್ಕೆ ಸರಕಾರದ ನಿರ್ಣಯಗಳೇ ಕಾರಣ : ನ್ಯಾ.ಕೆ.ಎಸ.ರೊಟ್ಟೇರ

ಸ್ಥಳೀಯ ಕೃಷಿ ಇಲಾಖೆಯಲ್ಲಿ ನಡೆದ ಅಂತರಾಷ್ಟ್ರೀಯ ಭೂ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಉದ್ಘಾಟಿಸಿದರು.ಸಿವಿಲ್ ನ್ಯಾಯಾಧೀಶ ಗುರುಪ್ರಸಾದ ಸಿ.ತಹಸೀಲ್ದಾರ ಮಂಜುಳಾ ನಾಯಕ, ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಇತರರಿದ್ದರು.

ಹುಕ್ಕೇರಿ: ಸರಕಾರಗಳು ತೆಗೆದುಕೊಳ್ಳುವ ನಿರ್ಣಯಗಳಿಂದ ಜಾಗತಿಕ ತಾಪಮಾನ ಹೆಚ್ಚಾಗಲು ಮತ್ತು ವಾತಾವರಣ ಕಲುಷಿತಗೊಳ್ಳಲು ಕಾರಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ತಿಳಿಸಿದರು.

ಮಂಗಳವಾರದಂದು ಸ್ಥಳೀಯ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾಡಳಿತ ಮತ್ತು ಕೃಷಿ ಇಲಾಖೆ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿ ಮತ್ತು ರಸ್ತೆ ಅಗಲೀಕರಣ ನೆಪದಲ್ಲಿ ಮರಗಳ ಮಾರಣಹೋಮ ಮಾಡುವ ಸರಕಾರ ನಂತರ ಸಸಿಗಳನ್ನು ನೆಟ್ಟು ಗಿಡಮರ ಬೆಳೆಸಬೇಕೆಂಬ ಆಸಕ್ತಿ ಇಲ್ಲವೆಂದರು.

ಸಿವ್ಹಿಲ್ ನ್ಯಾಯಾಧೀಶ ಗುರುಪ್ರಸಾದ ಸಿ ಮಾತನಾಡಿ ಭೂಮಿಯನ್ನು ತಾಯಿಗೆ ಹೋಲಿಕೆ ಮಾಡುವ ನಾವು ತಾಯಿಯನ್ನು ಪ್ರೀತಿಸಿ, ಗೌರವಿಸಿದಂತೆ ಇದಕ್ಕೆ ಮಾಡುವುದಿಲ್ಲ.ಇದರಿಂದ ಭೂಮಾತೆಯ ರಕ್ಷಣೆ ಆಗುತ್ತಿಲ್ಲ.ಜಾಗತಿಕ ತಾಪಮಾನಕ್ಕೆ ಇದುವೇ ಕಾರಣವೆಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಅವರು ಮಾತನಾಡಿ ರೈತರು ಬಳಸುವ ಕೀಟನಾಶಕಗಳಿಂದ ಭೂ ಫಲವತ್ತತೆ ಕ್ಷೀಣಿಸುತ್ತಿದೆ.ಇದರಿಂದ ಗುಣಮಟ್ಟದ ಆಹಾರ ದೊರಕುತ್ತಿಲ್ಲ. ಇದರಿಂದ ಇಂದಿನ ಜನರ ಆಯುಷ್ಯ ಸಹ ಕಡಿಮೆಯಾಗಿದೆ. ಅದಕ್ಕಾಗಿ ತಕ್ಷಣ ಸರಕಾರ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಂಡು ಸಾವಯವ ಕೃಷಿಗೆ ಉತ್ತೇಜಿಸಬೇಕೆಂದರು.

ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ ಕೋಟ್ಯಾಂತರ ಜೀವ ಸಂಕುಲ ಹೊಂದಿರುವ ನಮ್ಮ ಭೂಮಿ ಇದೀಗ ಪರಿಸರ ಮಾಲಿನ್ಯದಿಂದ ಅವುಗಳ ವಿನಾಸಕ್ಕೆ ಕಾರಣವಾಗುತ್ತಿದ್ದೇವೆ.ಇದು ಮನುಷ್ಯ ವರ್ಗಕ್ಕೂ ಅನ್ವಯಿಸುತ್ತದೆ.ಬರುವ ದಿನಗಳಲ್ಲಿ ನಮ್ಮ ಬದುಕು ಕಷ್ಟವಾಗುತ್ತದೆ.ಕಾರಣ ನಮ್ಮ ಉಳಿವಿಗಾಗಿಯಾದರೂ ಭೂಮಿಯ ರಕ್ಷಣೆ ಮಾಡಬೇಕೆಂದರು.

ಕಾರ್ಯಾಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಅವರು ಮಾತನಾಡಿ ಭೂ ಕುಸಿತ, ಮಳೆ ಏರುಪೇರು, ವಾಯು ಮಾಲಿನ್ಯ ಮೊದಲಾದವುಗಳು ಉಂಟಾಗಲು ಮಾನವರ ಸ್ವಯಂಕೃತ ಅಪರಾಧವೆಂದರು.ಭೂಮಾತೆ ಎನ್ನುವ ನಾವು ಅದಕ್ಕೆ ಎಸಗುವ ಅಪಚಾರವೇ ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗಿದೆ ಎಂದರು.

ಅಪರ ಸರಕಾರಿ ವಕೀಲ ಅನೀಲ ಕರೋಶಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಕಾರ್ಯದರ್ಶಿ ಎಸ್.ಜಿ.ನದಾಫ, ಮಹಿಳಾ ಪ್ರತಿನಿಧಿ ಅನಿತಾ ಕುಲಕರ್ಣಿ, ಪಿ.ಎಸ್.ಐ ಸುನೀಲ ಕಾಂಬಳೆ, ತಾ.ಪಂ ಯೋಜನಾಧಿಕಾರಿ ಪ್ರಶಾಂತ ಮುನ್ನೋಳಿ, ಕೃಷಿ ಅಧಿಕಾರಿಗಳಾದ ಶಿವಾನಂದ ಕಾಮತ, ಯು.ಸಿ.ಆಗನೂರ, ಬಿ.ಆರ್.ರಾಯವ್ವಗೋಳ, ತಾಂತ್ರಿಕ ವ್ಯವಸ್ಥಾಪಕ ಸಮೀರ ಲೋಕಾಪೂರ, ಶ್ರದ್ಧಾ ಪಾಟೀಲ ಮತ್ತಿತರರಿದ್ದರು. ಕಾದಂಬರಿ ಪಾಟೀಲ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!